TV10 Kannada Exclusive

ಚಿಕಿತ್ಸೆ ಫಲಕಾರಿಯಾಗದೆ ಸಜಾ ಖೈದಿ ಕೆ.ಆರ್.ಆಸ್ಪತ್ರೆಯಲ್ಲಿ ಸಾವು…

ಮೈಸೂರು,ಜ7,Tv10 ಕನ್ನಡ ಹೊಟ್ಟೆ ನೋವಿನಿಂದ ಕೆ.ಆರ್.ಆಸ್ಪತ್ರೆ ದಾಖಲಾಗಿದ್ದ ಸಜಾ ಖೈದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮಾದೇಶ್(37) ಮೃತ ಖೈದಿ.ಡಿಸೆಂಬರ್ 29 ರಂದು ಆಸ್ಪತ್ರೆಗೆ ದಾಖಲಾಗಿದ್ದರು.ಪತ್ನಿಯನ್ನ ಕೊಲೆ ಮಾಡಿದ ಆರೋಪ ಸಾಬೀತಾಗಿ ಸಜಾ ಖೈದಿಯಾಗಿ ಮೈಸೂರಿನ ಕೇಂದ್ರ ಕಾರಾಗೃಹದ ಶಿಕ್ಷೆ ಅನುಭವಿಸುತ್ತಿದ್ದರು.ಮೂಲತಃ ಗುಂಡ್ಲುಪೇಟೆ ತಾಲೂಕಿನ ಮಾದೇಶ್ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ವಾಸವಿದ್ದ ವೇಳೆ ಕೊಲೆ ಆರೋಪ ಹೊತ್ತಿದ್ದರು.ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More

ನಡು ರಸ್ತೆಯಲ್ಲಿ ಸುಟ್ಟು ಭಸ್ಮವಾದ ಕಾರು…ಪ್ರಯಾಣಿಕರು ನಾಪತ್ತೆ…ಹುರಳಿ,ರಾಗಿ ಒಕ್ಕಣೆ ಎಫೆಕ್ಟ್…?

ಸರಗೂರು,ಜ7,Tv10 ಕನ್ನಡ ನಡುರಸ್ತೆಯಲ್ಲಿ ಕಾರು ಸುಟ್ಟು ಕರುಕಲಾದ ಘಟನೆ ಸರಗೂರು ತಾಲೂಕಿನ ಯಶವಂತಪುರ ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದಿದೆ.ಧಾರ್ಮಿಕ ಕ್ಷೇತ್ರ ಶ್ರೀ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.ಕೆ.ಆರ್.ನಗರಕ್ಕೆ ಸೇರಿದ ಕಾರು ಎಂದು ಹೇಳಲಾಗಿದೆ.ರಸ್ತೆ ಮಧ್ಯೆ ರಾಗಿ ಹಾಗೂ ಹುರುಳಿ ಒಕ್ಕಣೆ ಮಾಡುತ್ತಿರುವ ಹಿನ್ನಲೆ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ.ಕಾರಿಗೆ ಒಕ್ಕಣೆ ಮಾಡುವ ಸತ್ತೆ ಸಿಲುಕಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.ಮಧ್ಯರಾತ್ರಿ ವೇಳೆ ಘಟನೆ ನಡೆದ ಕಾರಣ ಕಾರಿನಲ್ಲಿದ್ದ
Read More

ಮೂರು ತಲೆಮಾರುಗಳಿಂದ ವಾಸವಿದ್ದ 4 ಕುಟುಂಬ ಬೀದಿಪಾಲು ಪ್ರಕರಣ…ತಾಲೂಕು ಆಡಳಿತ ಸ್ಪಂದನೆ…

ನಂಜನಗೂಡು,ಜ6,Tv10 ಕನ್ನಡ ಮೂರು ತಲೆಮಾರುಗಳಿಂದ ವಾಸವಿದ್ದ ಹಂದಿಜೋಗಿ ಜನಾಂಗದ 4 ಕುಟುಂಬವನ್ನ ರಾತ್ರೋರಾತ್ರಿ ಬೀದಿಪಾಲು ಮಾಡಿದ ಪ್ರಕರಣಕ್ಕೆ ನಂಜನಗೂಡು ತಾಲೂಕು ಆಡಳಿತ ಸ್ಪಂದಿಸಿದೆ.ಜಮೀನಿನ ಮಾಲಿಕ ಶಿವಾನಂದ ಮತ್ತು ಬಿಳಿಗೆರೆ ಪೊಲೀಸ್ ಠಾಣೆ ಪಿಎಸ್ಐ ಅಮಾನತಿಗಾಗಿ ಒತ್ತಡ ಹೇರಲಾಗಿದೆ.ನಂಜನಗೂಡು ತಾಲೂಕು ಹೊರಳವಾಡಿ ಹೊಸೂರು ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ವಾಸವಿದ್ದ ಮನೆಗಳನ್ನ ತೆರುವುಗೊಳಿಸಿದ ಪರಿಣಾಮ ದಾರಿ ಕಾಣದೆ 4 ಕುಟುಂಬ ಬೀದಿಯನ್ನೇ ಆಶ್ರಯಿಸಿದೆ ನ್ಯಾಯ ದೊರೆಯದಿದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ
Read More

ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರ 5 ನೇ ವರ್ಷದ ಪುಣ್ಯಸಂಸ್ಕರಣೆ…ಹೆಣ್ಣುಮಕ್ಕಳಿಗೆ ಹಣ್ಣುಹಂಪಲು ವಿತರಣೆ…

ಮೈಸೂರು,ಜ6,Tv10 ಕನ್ನಡ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರ 5ನೇ ವರ್ಷದ ಪುಣ್ಯಸಂಸ್ಕರಣೆಯನ್ನ ಹೆಣ್ಣುಮಕ್ಕಳಿಗೆ ಹಣ್ಣುಹಂಪಲು ಹಾಗೂ ಓದುವ ಸಾಮಗ್ರಿಗಳನ್ನ ವಿತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.ನಗರದ ಕೃಷ್ಣಮೂರ್ತಿ ಪುರಂ ನಲ್ಲಿರುವ ಶಾರದಾ ನೆಲೆಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ಡಾ. ಕೆ. ರಘುರಾಮ್ ವಾಜಪೇಯಿ ಮಾತನಾಡಿಪೇಜಾವರ ಸ್ವಾಮೀಜಿ ಎಲ್ಲರ ಪ್ರೀತಿ
Read More

ಲಷ್ಕರ್ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…ಮಹಿಳೆ ಸೇರಿ ಇಬ್ಬರು ಕಳ್ಳರ ಸೆರೆ…12 ಲಕ್ಷ ಮೌಲ್ಯದ 184 ಗ್ರಾಂ ಚಿನ್ನಾಭರಣ ವಶ…

ಮೈಸೂರು,ಜ6,Tv10 ಕನ್ನಡ ಲಷ್ಕರ್ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಕಳ್ಳರನ್ನ ಬಂಧಿಸಲಾಗಿದೆ.ಬಂಧಿತರಿಂದ 12 ಲಕ್ಷ ಮೌಲ್ಯದ 184 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.ಭದ್ರಾವತಿ ಮೂಲದ ಸಾವಿತ್ರಿ(42) ಹಾಗೂ ಗುರುರಾಜ್(45) ಬಂಧಿತರು. ಡಿಸೆಂಬರ್ 16 ರಂದು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ವ್ಯಾನಿಟಿ ಬ್ಯಾಗ್ ಕಳುವು ಮಾಡಿ 184 ಗ್ರಾಂ ಚಿನ್ನಾಭರಣ ಲಪಟಾಯಿಸಿದ್ದರು.ಈ ಸಂಭಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಖದೀಮರ ಬಂಧನಕ್ಕೆ ತಂಡ ರಚಿಸಲಾಗಿತ್ತು.ಆರೋಪಿಗಳನ್ನ
Read More

ಇನ್ಪೋಸಿಸ್‌ನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ…ಮುಂದುವರೆದ ಕಾರ್ಯಾಚರಣೆ

… ಮೈಸೂರು,ಜ6,Tv10 ಕನ್ನಡ ಇನ್ಫೋಸಿಸ್ ನಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡ ಹಿನ್ನೆಲೆ ಕಾರ್ಯಾಚರಣೆಮುಂದುವರಿಸಲಾಗಿದೆ.ಅರಣ್ಯ ಇಲಾಖೆಯ ಚಿರತೆ ಕಾರ್ಯ ಪಡೆಮೈಸೂರು ಪ್ರಾದೇಶಿಕ ವಲಯದ ಸಿಬ್ಬಂದಿಗಳಿಂದ ಕಾರ್ಯಾಚಣೆ ನಡೆಯುತ್ತಿದೆ.ಹೆಜ್ಜೆ ಗುರುತುಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.ಚಿರತೆ ಸೆರೆಗಾಗಿಹೆಚ್ಚುವರಿಯಾಗಿ 10 ಕ್ಯಾಮೆರಾ ಟ್ರ್ಯಾಪ್ ಒಂದು ಸಾಮಾನ್ಯ ಬೋನುಇನ್ನೊಂದು ಟ್ರ್ಯಾಪ್ ಬೋನು ಅಳವಡಿಸಲಾಗಿದೆ.ಕ್ಯಾಮೆರಾ ಟ್ರ್ಯಾಪ್, ಡ್ರೋನ್ ಕ್ಯಾಮೆರಾ , ಕ್ಯಾಂಪಸ್ ಸಿಸಿ ಕ್ಯಾಮೆರಾಗಳ ಮೂಲಕ ನಿಗಾವಹಿಸಲಾಗುತ್ತಿದೆ.ಒಂದು ಚಿರತೆ ಕಾರ್ಯಪಡೆ ತಂಡ ಕ್ಯಾಂಪಸ್ ನಲ್ಲೇ ಮೊಕ್ಕಾಂ ಹೂಡಿದೆ…
Read More

ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿಧ್ಯಾರ್ಥಿ ಸಾವು ಪ್ರಕರಣ…ಎಚ್ಚೆತ್ತ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ…ಮುನ್ನೆಚ್ಚರಿಕೆ ವಹಿಸುವಂತೆ ಸುತ್ತೋಲೆ…

ಬೆಂಗಳೂರು,ಜ5,Tv10 ಕನ್ನಡ ಗುಂಡ್ಲುಪೇಟೆ ತಾಲೂಕು ಬೇಗೂರಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿಧ್ಯಾರ್ಥಿ ಸಾವನ್ನಪ್ಪಿದ ಘಟನೆ ನಂತರ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಎಚ್ಚೆತ್ತುಕೊಂಡಿದೆ.ತಮ್ಮ ವ್ಯಾಪ್ತಿಗೆ ಬರುವ ವಸತಿಶಾಲೆಗಳ ಪ್ರಾಂಶುಪಾಲರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಸುತ್ತೋಲೆ ಹೊರಡಿಸಿದೆ.ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ರಾತ್ರಿ ಪಾಳಿಯಲ್ಲಿ ನಿರ್ವಹಿಸುವ ಕಾವಲುಗಾರರ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಿದೆ.ಇಡೀ ರಾತ್ರಿ ಕಾವಲುಗಾರ ಎಚ್ಚರವಿದ್ದು ಗಸ್ತು ತಿರುಗುವ ಬಗ್ಗೆ ಅಗತ್ಯ
Read More

ಕಟ್ಟಡದಿಂದ ಬಿದ್ದು ವಿಧ್ಯಾರ್ಥಿ ಸಾವು ಪ್ರಕರಣ…ಮುರಾರ್ಜಿ ವಸತಿ ಕಾಲೇಜು ಪ್ರಾಂಶುಪಾಲೆ ಮತ್ತು ವಾರ್ಡನ್ ಸಸ್ಪೆಂಡ್…

ಚಾಮರಾಜನಗರ,ಜ5,Tv10 ಕನ್ನಡ ಕಟ್ಟಡದಿಂದ ಬಿದ್ದು ವಿಧ್ಯಾರ್ಥಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಭಂಧಿಸಿದಂತೆ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಹಾಗೂ ವಾರ್ಡನ್ ನ ಸಸ್ಪೆಂಡ್ ಮಾಡಲಾಗಿದೆ.ಗುಂಡ್ಲುಪೇಟೆ ತಾಲೂಕು ಬೇಗೂರು ಸಮೀಪವಿರುವ ಯಡವನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ಪದವಿಪೂರ್ವ ವಸತಿ ಶಾಲೆಯಲ್ಲಿ ಘಟನೆ ನಡೆದಿತ್ತು ದ್ವಿತೀಯ ಪಿಯುಸಿ ಓದುತ್ತಿದ್ದ ಮಣಿತ್(17)ಎರಡನೇ ಮಹಡಿಯ ಕಿಟಕಿ ಬಳಿಯಿಂದ ಮಧ್ಯರಾತ್ರಿ 2 ಗಂಟೆ ವೇಳೆ ಬಿದ್ದು ಗಂಭೀರ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದ. ಮಣಿತ್
Read More

ಲಾಂಗ್ ಹಿಡಿದು ಕೇಕ್ ಕಟ್…ಬರ್ತ್ ಡೇ ಆಚರಿಸಿ ಜೈಲುಪಾಲದ ಯುವಕ…

ಮೈಸೂರು,ಜ5,Tv10 ಕನ್ನಡ ಬರ್ತ್ ಡೇ ಸಂಭ್ರಮದಲ್ಲಿ ಲಾಂಗ್ ನಲ್ಲಿ ಕೇಕ್ ಕತ್ತರಿಸಿದ ಯುವಕ ಜೈಲುಪಾಲಾಗಿದ್ದಾನೆ.ಸಾರ್ವಜನಿಕರಿಗೆ ಭೀತಿ ಹುಟ್ಟಿಸುವಂತೆ ವಿಡಿಯೋ ಮಾಡಿ ಇನ್ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ ಯುವಕನ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗೌಸಿಯಾನಗರದ ತಬ್ರೇಜ್ ಬಂಧಿತ ಯುವಕ.ಜನವರಿ 2 ರಂದು ತನ್ನ ಸ್ನೇಹಿತರೊಂದಿಗೆ ಬರ್ತ್ ಡೇ ಆಚರಿಸಿದ್ದಾನೆ.ಈ ವೇಳೆ ಲಾಂಗ್ ನಿಂದ ಕೇಕ್ ಕತ್ತರಿಸಿದ್ದಾನೆ.ಈ ವಿಡಿಯೋವನ್ನ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹರಿದುಬಿಟ್ಟಿದ್ದಾನೆ.ಈ ಮಾಹಿತಿ ಅರಿತ ಉದಯಗಿರಿ ಠಾಣೆ
Read More

ಸರ್ಕಾರಿ ಜಾಗದಲ್ಲಿ ಬೃಹತ್ ಕಟ್ಟಡ…ಪರವಾನಗಿ ನೀಡಿದ ನಗರಸಭೆ…ನೋಟೀಸ್ ನೀಡಿ ಕಣ್ಮುಚ್ಚಿ ಕುಳಿತ ಅಧಿಕಾರಿಗಳು…

ಹುಣಸೂರು,ಜ5,Tv10 ಕನ್ನಡ ಸರ್ಕಾರದ ಜಾಗದಲ್ಲಿ ಕಟ್ಟಡ ನಿರ್ಮಿಸಲು ನಗರಸಭೆಯೇ ಪರವಾನಗಿ ನೀಡಿರುವ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ.ತಡವಾಗಿ ಜ್ಞಾನೋದಯವಾಗಿ ಪರವಾನಗಿ ರದ್ದುಪಡಿಸಲು ಮುಂದಾಗಿದೆ.ನೆಪಮಾತ್ರಕ್ಕೆ ನೋಟೀಸ್ ನೀಡಿದ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಾ ಕಣ್ಮುಚ್ಚಿ ಕುಳಿತಿದ್ದಾರೆ.ಇತ್ತ ಕಟ್ಟಡ ಕಾಮಗಾರಿ ರಾಜಾರೋಷವಾಗಿ ಸಾಗುತ್ತಿದೆ. ಹುಣಸೂರು ತಾಲೂಕು ಕಸಬಾ ಹೋಬಳಿ,ದೊಡ್ಡಹುಣಸೂರು ಗ್ರಾಮ ಸರ್ಕಾರಿ ಸರ್ವೆ ನಂ.250 ರ 16.39 ಎಕ್ರೆ ವ್ಯಾಪ್ತಿಯಲ್ಲಿ ಬರುವ ಖಾತೆ ನಂ.185/152/1 ಹಾಗೂ 184/151/1 ರ ನಿವೇಶನಗಳಲ್ಲಿ ವಾಣಿಜ್ಯ ಹಾಗೂ ವಸತಿ
Read More