TV10 Kannada Exclusive

ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಯದುವೀರ್…ಅಭಿಯಾನ ಆರಂಭ…

ಮೈಸೂರು,ಮೇ25,Tv10 ಕನ್ನಡ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ವಿವಾದ ಇದೀಗ ಮತ್ತೊಂದು ತಿರುವು ಪಡೆಯುತ್ತಿದೆ.ಸಂಸದಯದುವೀರ್ ಕೃಷ್ಣರದತ್ತ ಚಾಮರಾಜ ಒಡೆಯರ್‌ರನ್ನು ರಾಯಭಾರಿ ಮಾಡಲು ಅಭಿಯಾನ ಆರಂಭವಾಗಿದೆ.ಯದುವೀರ್ ಪೋಸ್ಟರ್ ಮಾಡಿ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದಾರೆ.ತಮನ್ನಾ ಬದಲಾಯಿಸಿ ಯದುವೀರ್ ಘೋಷಿಸಿಸೂಕ್ತ ರಾಯಭಾರಿ ಎಂದರೆ ನಮ್ಮ ಯದುವೀರ್ ಎಂದು ಉಲ್ಲೇಖಿಸಿ ಅಭಿಯಾನ ಶುರುವಾಗಿದೆ.ಬ್ರಾಂಡು ನಮ್ದೆ ಬ್ರಾಂಡ್ ಅಂಬಾಸಿಡರ್ ನಮ್ಮವರೇ ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಲಾಗಿದೆ…
Read More

ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಗೆ ಪರಭಾಷಾ ನಟಿ ತಮನ್ನ ಭಾಟಿಯಾ ರಾಯಭಾರಿಯಾಗಿ ಆಯ್ಕೆ…ಸಂಸದ ಯದುವೀರ್ ಅಸಮಾಧಾನ…

ಮೈಸೂರು,ಮೇ23,Tv10 ಕನ್ನಡ ಮೈಸೂರು ಸಂಸ್ಥಾನದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಸಂಸ್ಥೆಗಳಲ್ಲಿ ಒಂದಾಗಿದ್ದ ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಗೆ ಪರಭಾಷೆ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ಸಂಸದ ಯದುವೀರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದು ಅತ್ಯಂತ ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ನಿರ್ಧಾರ ಎಂದು ಪ್ರತಿಕ್ರಿಯಿಸಿದ್ದಾರೆ. 1916ರಲ್ಲಿ ನಮ್ಮ ಮೈಸೂರು ಸಂಸ್ಥಾನದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಸಂಸ್ಥೆ ಕಟ್ಟಲು
Read More

ಮುಡಾ ಹೆಸರು ರದ್ದು…ಎಂಡಿಎ ಜಾರಿ…ಇಂದಿನಿಂದಲೇ ಪಾಲನೆ…ಸರ್ಕಾರದಿಂದ ಆದೇಶ…

ಮೈಸೂರು,ಮೇ23,Tv10 ಕನ್ನಡ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಹೆಸರು ರದ್ದಾಗಿದೆ.ಇನ್ಮುಂದೆ ಎಂ.ಡಿ.ಎ.ಆಗಿ ಕರೆಯಲ್ಪಡುತ್ತದೆ.ಸರ್ಕಾರದಿಂದ ಮಹತ್ತರದ ಆದೇಶವಾಗಿದ್ದು ಇಂದಿನಿಂದಲೇ ಆದೇಶ ಜಾರಿಯಾಗಿದೆ.ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಇನ್ಮುಂದೆ ಮೈಸೂರು ಅಭಿವೃದ್ದಿ ಪ್ರಾಧಿಕಾರವಾಗಿ ಹೆಸರು ಬಳಕೆಯಾಗಲಿದೆ.ಸರ್ಕಾರದ ಅಧೀನ ಕಾರ್ಯದರ್ಶಿ ಅಭಿವೃದ್ದಿ ಪ್ರಾಧಿಕಾರ ಮತ್ತು ನಗರ ಯೋಜನಾ ಸೇವೆ,ನಗರಾಭಿವೃದ್ದಿ ಇಲಾಖೆ ಕೆ.ಲತಾ ರವರು ಆದೇಶ ಹೊರಡಿಸಿದ್ದಾರೆ…
Read More

ರಸ್ತೆ ಅಗಲೀಕರಣಕ್ಕೆ ಮೀಸಲಾದ ಜಾಗದಲ್ಲಿ ಅಕ್ರಮ ಕಟ್ಟಡ…ಸೂಕ್ತ ಕ್ರಮ ಕೈಗೊಳ್ಳುವಂತೆ ಮುಡಾದಿಂದ ಪಾಲಿಕೆಗೆ ಪತ್ರ…

ಮೈಸೂರು,ಮೇ21,Tv10 ಕನ್ನಡ ಸಿಎ ನಿವೇಶನದ ರಸ್ತೆ ಅಗಲೀಕರಣಕ್ಕಾಗಿ ಮೀಸಲಿರಿಸಿದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿರುವುದನ್ನ ಮುಡಾ ವಲಯ ಅಧಿಕಾರಿಗಳು ಪತ್ತೆ ಹಚ್ಚಿದ್ದು ತುರ್ತಾಗಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪಾಲಿಕೆಗೆ ಪತ್ರ ಬರೆದಿದ್ದಾರೆ. ಮೈಸೂರು ನಗರ ಕಾಳಿದಾಸ ರಸ್ತೆ ಪಂಚವಟಿ ಸರ್ಕಲ್ ಬಳಿ ಇರುವ ಸಿಎ ನಿವೇಶನದ ರಸ್ತೆ ಅಗಲೀಕರಣಕ್ಕಾಗಿ ಮೀಸಲಾದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವುದಾಗಿ ಮುಡಾ ವಲಯ 4 ರ ಅಧಿಕಾರಿಗಳು ಪತ್ತೆ ಹಚ್ಚಿದ್ದು.ಈ ಬಗ್ಗೆ
Read More

ಬಲಮುರಿ ಎಡಮುರಿ ಫಾಲ್ಸ್ ಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಿಂಡಿ ಭೇಟಿ…ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ…

ಕೆ.ಆರ್.ಎಸ್,ಮೇ20,Tv10 ಕನ್ನಡ ಬಲಮುರಿ ಹಾಗೂ ಎಡಮುರಿ ಫಾಲ್ಸ್ ಗಳಿಗೆ ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ರವರು ಭೇಟಿ ನೀಡಿ ಸುರಕ್ಷತಾ ಕ್ರಮದ ಬಗ್ಗೆ ಕೆಲವು ಸೂಚನೆಗಳನ್ನ ನೀಡಿದರು.ಶಾಲಾ ಕಾಲೇಜುಗಳಿಗೆ ರಜೆ ಹಿನ್ನಲೆ ಹಾಗೂ ಸರ್ಕಾರಿ ರಜೆಗಳ ಹಿನ್ನಲೆ ಎರಡೂ ಪಾಲ್ಸ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ನದಿಯಲ್ಲಿ ಈಜಲು ಇಳಿದು ಮೃತಪಡುತ್ತಿರುವ ಪ್ರಕರಣಗಳು ಆಗಾಗ ನಡೆಯುತ್ತಿವರ.ಈ ಹಿನ್ನಲೆ ತೆಗೆದುಕೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮ ಗಳ ಬಗ್ಗೆ ಸ್ಥಳದಲ್ಲಿದ್ದ
Read More

ಅಕ್ರಮ ಗಂಧದ ಮರದ ತುಂಡುಗಳ ಸಂಗ್ರಹ…ಓರ್ವನ ಬಂಧನ…ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಹುಣಸೂರು,ಮೇ20,Tv10 ಕನ್ನಡ ಅಕ್ರಮವಾಗಿ ಗಂಧದ ಮರದ ತುಂಡುಗಳನ್ನ ಸಂಗ್ರಹಿಸಿದ್ದ ಓರ್ವ ಆರೋಪಿಯನ್ನ ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಠಾಣಾ ವ್ಯಾಪ್ತಿಯ ಮಂಗಳೂರು ಮಾಳ ಹಾಡಿಯ ನಿವಾಸಿ ಶಿವನಂಜ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನ ಬಂಧಿಸಿ ಮಾಲನ್ನ ವಶಪಡಿಸಿಕೊಂಡಿದ್ದಾರೆ.ವೃತ್ತ ನಿರೀಕ್ಷಕ ಮುನಿಯಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ…
Read More

ಮಾವಿನಕಾಯಿಗಾಗಿ ಗಲಾಟೆ…ಓರ್ವನ ಕೊ* ಯಲ್ಲಿ ಅಂತ್ಯ…

ಹುಣಸೂರು,ಮೇ19,Tv10 ಕನ್ನಡ ಮಾವಿನಕಾಯಿ ಕೊಯ್ಯುವ ವಿಚಾರದಲ್ಲಿ ಶುರುವಾದ ಜಗಳ ಓರ್ವನ ಕೊಯಲ್ಲಿ ಅಂತ್ಯವಾದ ಘಟನೆ ಹುಣಸೂರು ತಾಲೂಕಿನ ಶಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಲ್ಲೇಶ್ ಮೃತ ದುರ್ದೈವಿ.ಕೊ ಆರೋಪಿ ಚೇತನ್ ಇದೀಗ ಪೊಲೀಸರ ವಶದಲ್ಲಿದ್ದಾನೆ. ಶಂಕಹಳ್ಳಿಯಲ್ಲಿರುವ ಜಮೀನಿನಲ್ಲಿ ಮಲ್ಲೇಶ್ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ಜಮೀನು ವಿಚಾರದಲ್ಲಿ ವಿವಾದ ಶುರುವಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು.ಈ ವೇಳೆ ಮಲ್ಲೇಶ್ ಜಮೀನಿನಲ್ಲಿದ್ದ ಮಾವಿನ ಮರದಿಂದ ಕಾಯಿಗಳನ್ನ ಕೀಳಿಸುವಾಗ ಚೇತನ್ ಕಿರೀಕ್ ತೆಗೆದಿದ್ದಾನೆ.ಈ ವೇಳೆ ಮಾತಿಗೆ ಮಾತು ಬೆಳೆದಿದೆ.ಚೇತನ್ ಜೊತೆ
Read More

ರೈಲ್ವೆ ಸೆಂಟ್ರಲ್ ವರ್ಕ್ ಷಾಪ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ…ಕೊಲೆ ಬೆದರಿಕೆ…ನಾಲ್ವರು ಹಿರಿಯ ಅಧಿಕಾರಿಗಳ ವಿರುದ್ದ FIR ದಾಖಲು…

ಮೈಸೂರು,ಮೇ18,Tv10 ಕನ್ನಡ ಮೈಸೂರು ಕೇಂದ್ರ ರೈಲ್ವೆ ವರ್ಕ್ ಷಾಪ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ನಾಲ್ವರು ಹಿರಿಯ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಲಾಗಿದೆ.ನೊಂದ ಮಹಿಳಾ ಸಿಬ್ಬಂದಿ ನಾಲ್ವರು ಹಿರಿಯ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಒಬ್ಬ ಅಧಿಕಾರಿ ಬಿಹಾರದಿಂದ ಹುಡುಗರನ್ನ ಕರೆಸಿ ಶೂಟ್ ಮಾಡಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಮಹಿಳಾ ಸಿಬ್ಬಂದಿ ಆರೋಪಿಸಿದ್ದಾರೆ. ಎಸಿ ಮೆಕ್ಯಾನಿಕಲ್
Read More

ಗ್ರಾ.ಪಂ.ವ್ಯಾಪ್ತಿಯಲ್ಲಿ ನಿರ್ಮಾಣವಾದ ಅನಧಿಕೃತ ಕಟ್ಟಡಗಳ ನೆಲಸಮಗೊಳಿಸಲು ಸರ್ಕಾರದಿಂದ ಆದೇಶ…ನಿಯಮಗಳನ್ನ ಉಲ್ಲಂಘಿಸಿ ನಿರ್ಮಾಣವಾದ ಕಟ್ಟಡ ಮಾಲೀಕರಿಗೆ ಶಾಕ್…

ಮೈಸೂರು,ಮೇ16,Tv10 ಕನ್ನಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಕಟ್ಟಡಗಳನ್ನ ನೆಲಸಮಗೊಳಿಸುವಂತೆ ಸರ್ಕಾರದಿಂದ ಎಲ್ಲಾ ಗ್ರಾಮ ಪಂಚಾಯ್ತಿಗೆ ಆದೇಶ ಹೊರಡಿಸಲಾಗಿದೆ.ನಿಯಮಗಳನ್ನ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ವಾಣಿಜ್ಯ,ವಸತಿ ಹಾಗೂ ಇತರೆ ಕಟ್ಟಡಗಳ ಕಾಮಗಾರಿ ಸ್ಥಗಿತಗೊಳಿಸುವುದು ಹಾಗೂ ಪೂರ್ಣಗೊಂಡ ಕಟ್ಟಡಗಳನ್ನ ನೆಲಸಮಗೊಳಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಎಲ್ಲಾ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಆದೇಶವನ್ನ ಪಾಲಿಸುವಂತೆ ಸೂಚಿಸಲಾಗಿದೆ.ಆದೇಶ ಪಾಲಿಸಲು ಕೆಲವು ಮಾರ್ಗಸೂಚಿಗಳನ್ನೂ ಸಹ ನೀಡಿದೆ.ಗ್ರಾಮ ಪಂಚಾಯ್ತಿಯಿಂದ ಅನುಮತಿ ಪಡೆಯದೆ ನಿರ್ಮಾಣವಾಗುತ್ತಿರುವ ಕಟ್ಟಡ
Read More

ಗಾಂಜಾ ಸಂಗ್ರಹಿಸಿದ್ದ ಮಹಿಳೆ ಸಿಸಿಬಿ ಪೊಲೀಸರ ವಶಕ್ಕೆ…

ಮೈಸೂರು,ಮೇ10,Tv10 ಕನ್ನಡ ಗಾಂಜಾ ಸಂಗ್ರಹ ಮಾಡಿದ್ದ ಮಹಿಳೆಯನ್ನ ಮೈಸೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸಲ್ಮಾ (50)ಬಂಧಿತ ಆರೋಪಿ. ಆರೋಪಿಯಿಂದ 26 ಕೆ ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ನಗರದ ಪೋರೋಂ ಮಾಲ್ ಬಳಿ ಬಚ್ಚಿಟ್ಟಿದ್ದ ಗಾಂಜಾ ವಶಕ್ಕೆ ಪಡೆಯಲಾಗಿದೆ.ಎಸಿಪಿಗಳಾದ ಮಹಮದ್ ರಾವತ್ಕರ್ ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.ಇನ್ಸಪೆಕ್ಟರ್ ಶಬ್ಬೀರ್ ಹುಸೇನ್ ಸಬ್ ಇನ್ಸಪೆಕ್ಟರ್ ಲೇಪಾಕ್ಷ ರಾಜು ಸೇರಿ ಹಲವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ…
Read More