ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ…ಗಾಂಜಾ ವ್ಯಸನಿಗಳ ಕೈವಾಡ ಶಂಕೆ…
ಮೈಸೂರು,ನ11,Tv10 ಕನ್ನಡ ಮೈಸೂರಿನ ಮೇಟಗಳ್ಳಿ ಗ್ರಾಮದ ಮಹಾಲಿಂಗೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿದೆ.ದೇವಾಲಯದ ಬೀಗ ಮುರಿದ ಕಿಡಿಗೇಡಿಗಳ ಪಂಚಲೋಹದ ಕೊಳಗ,ತೂಗುದೀಪ,ಹಿತ್ತಾಳೆ ಚೊಂಬು,ಮಂಗಳಾರತಿ ತಟ್ಟೆ,ತಾಮ್ರದ ಗಂಟೆ ದೋಚಿ ಪರಾರಿಯಾಗಿದ್ದಾರೆ.ಚೋಳರ ಕಾಲದ ಪುರಾತನ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ.ಇಂದು ಬೆಳಿಗ್ಗೆ ಅರ್ಚಕರಾದ ಮೋಹನ್ ಪ್ರಸಾದ್ ದೇವಾಲಯಕ್ಕೆ ಬಂದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.ದೇವಾಲಯದ ಸಮೀಪ ಅಭಿವೃದ್ದಿ ಕಾಣದ ಹಿನ್ನಲೆ ಗಾಂಜಾ ವ್ಯಸನಿಗಳು ಈ ಸ್ಥಳವನ್ನ ಅಡ್ಡಾ ಮಾಡಿಕೊಂಡಿದ್ದಾರೆಂದು ಆರೋಪ ಕೇಳಿಬಂದಿದೆ.ಗಾಂಜಾ ವ್ಯಸನಿಗಳೇ ಕೃತ್ಯವೆಸಗಿರುವ ಶಂಕೆ
Read More