32 C
Mysore
Wednesday, August 12, 2020
Home All News ಜಿಲ್ಲಾಧಿಕಾರಿ ನಂಬರ್ ಕೊಟ್ಟು ಯಾಮಾರಿಸಿದ ಸೋಂಕಿತ…ಡಿಸಿ ಗೆ ಶಾಕ್…

ಜಿಲ್ಲಾಧಿಕಾರಿ ನಂಬರ್ ಕೊಟ್ಟು ಯಾಮಾರಿಸಿದ ಸೋಂಕಿತ…ಡಿಸಿ ಗೆ ಶಾಕ್…

ಕೊರೊನಾ ವೈರಸ್ ಇದೀಗ ಹುಚ್ಚಾಪಟ್ಟೆ ಹರಡುತ್ತಿದೆ.ಕೋವಿಡ್ನಿಯಂತ್ರಣಕ್ಕೆ ಜಿಲ್ಲಾಡಳಿತ ಹರಸಾಹಸ ಪಡಯತ್ತಿದ್ದರೆ ಕೆಲ ಕಿಡಿಗೇಡಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಸೋಂಕಿತ ವ್ಯಕ್ತಿಯೊಬ್ಬ ಮಾಹಿತಿಗಾಗಿ ತನ್ನ ಮೊಬೈಲ್ ನಂಬರ್ ಕೊಡುವ ಬದಲು ಮೈಸೂರು ಜಿಲ್ಲಾಧಿಕಾರಿಗಳ ನಂಬರ್ ಕೊಟ್ಟು ಯಾಮಾರಿಸಿದ್ದಾನೆ.ತಪಾಸಣೆ ನಡೆಸಿದ ಅಧಿಕಾರಿಗಳು ಸೋಂಕಿತ ಕೊಟ್ಟ ನಂಬರ್ ಗೆ ಸಂಪರ್ಕಿಸಿದಾಗಲೇ ಗೊತ್ತಾಗಿದ್ದು ಅದು ಜಿಲ್ಲಾಧಿಕಾರಿಗಳ ನಂಬರ್ ಎಂದು.

ಹೆಬ್ಬಾಳ್‌ ನಿವಾಸಿಯೊಬ್ಬ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ವ್ಯಕ್ತಿಯ ವಿಳಾಸ, ಮೊಬೈಲ್ ನಂಬರ್ ಇನ್ನಿತರೆ ಮಾಹಿತಿ ಕಲೆಹಾಕುವ ವೇಳೆ ತನ್ನ ನಂಬರ್ ಬದಲಿಗೆ ಜಿಲ್ಲಾಧಿಕಾರಿ ನಂಬರ್ ಕೊಟ್ಟಿದ್ದಾನೆ. ಈತನ ಪರೀಕ್ಷಾ ವರದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದರಿಂದ ಅಧಿಕಾರಿಗಳ ಫೋನ್ ಕರೆ ಮಾಡಿ ಸಂಪರ್ಕಿಸಿದ್ದಾರೆ. ಜಿಲ್ಲಾಧಿಕಾರಿಗಳು ಮಾತನಾಡಿದ ನಂತರವೇ ಅಧಿಕಾರಿಗಳಿಗೆ ನಿಜಾಂಶ ತಿಳಿದು ಅಚ್ಚರಿಗೆ ಒಳಗಾಗಿದ್ದಾರೆ. ಆತ ಜಿಲ್ಲಾಧಿಕಾರಿ ನಂಬರ್ ಕೊಟ್ಟಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಪ್ರತಿಕ್ರಿಯಿಸಿ, ಕಂಟ್ರೋಲ್ ರೂಂ ನಿಂದ ಕರೆ ಮಾಡಿ ‘ಸರ್ ನಿಮಗೆ ಕೋವಿಡ್ ಪಾಸಿಟಿವ್ ಬಂದಿದೆ.. ಕ್ವಾರಂಟೈನ್‌ಗೆ ಒಳಗಾಗಿ’ ಎಂದು ಹೇಳಿದ್ದನ್ನು ಕೇಳಿ ನನಗೆ ಆಶ್ಚರ್ಯ ಆಯ್ತು. ನಾನು ಜಿಲ್ಲಾಧಿಕಾರಿ ಮಾತನಾಡುತ್ತಿರುವುದು ಎಂದು ಅಧಿಕಾರಿಗೆ ತಿಳಿಸಿದ್ದಾರೆ.

ಮಾಹಿತಿ ಸಂಗ್ರಹಿಸುವ ವೇಳೆ ಆ ವ್ಯಕ್ತಿ ನನ್ನ ನಂಬರ್ ಕೊಟ್ಟಿರುವುದಾಗಿ ಅಧಿಕಾರಿ ತಿಳಿಸಿದರು. ಕ್ವಾರಂಟೈನ್‌ಗೆ ಒಳಗಾಗುವುದು ಮತ್ತು ಆಸ್ಪತ್ರೆಗೆ ದಾಖಲಾಗುವುದರಿಂದ ತಪ್ಪಿಸಿಕೊಳ್ಳಲು ಕೆಲವರು ಏನೆಲ್ಲಾ ದಾರಿತಪ್ಪಿಸುವ ಕೆಲಸ ಮಾಡುತ್ತಾರೆ ಎಂಬುದನ್ನು ಅರಿತು ಒಂದು ಕ್ಷಣ ನನಗೆ ಅಚ್ಚರಿಯಾಯಿತು. ಜೊತೆಗೆ ನಗು ಬಂತು ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜನರು ಸಹಕರಿಸಬೇಕು, ಸೂಕ್ತ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಒಂದು ವೇಳೆ ಸಂಪರ್ಕಿಸುವ ಮಾಹಿತಿ ತಪ್ಪಿದ್ದರೆ ಕೊರೊನಾ ಸೋಂಕಿತರು ಮತ್ತು ಅವರ ಪ್ರಾಥಮಿಕ, ಸೆಕೆಂಡರಿ ಸಂಪರ್ಕದಲ್ಲಿದ್ದವರನ್ನು ಗುರುತಿಸುವುದು ತುಂಬಾ ಕಷ್ಟ. ದಾರಿ ತಪ್ಪಿಸುವ ಕೆಲಸ ಬಿಟ್ಟು ಕೋವಿಡ್ ಸಾಂಕ್ರಾಮಿಕ ರೋಗ ವಿರುದ್ಧ ಹೋರಾಟದಲ್ಲಿ ಜಿಲ್ಲಾಡಳಿತಕ್ಕೆ ಜನತೆಯ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ…

LEAVE A REPLY

Please enter your comment!
Please enter your name here

- Advertisment -
< target="_blank">

Most Popular

ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ…ಕೊಲೆ ಶಂಕೆ…

ಅಕ್ರಮ ಸಂಭಂಧ ಹಿನ್ನಲೆ ಬೇರೆಯಾಗಿದ್ದ ಪತ್ನಿಯ ಮನೆಯಲ್ಲಿ ಪತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.ಗೋವಿಂದ ನಾಯ್ಕ(೩೦) ಮೃತ...

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ…ಮಾದರಿ ಜಿಲ್ಲಾಧಿಕಾರಿ…

ಅಧಿಕಾರ ಇದ್ರೆ ಕೆಲವರು ಎಲ್ಲಾ ರೀತಿಯ ಸೌಲಭ್ಯಗಳನ್ನ ಅನುಭವಿಸಯವರೇ ಹೆಚ್ಚು.ಆದರೆ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಅಪವಾದದಿಂದ ದೂರ ಇದ್ದಾರೆ.ಕೊರೋನಾ ಮಧ್ಯೆಯೂ ಐಶಾರಾಮಿ ಸವಲತ್ತುಗಳನ್ನು...

ಮಾವುತನನ್ನೇ ಬಲಿ ಪಡೆದ ಆನೆ…ಮೈಸೂರು ಮೃಗಾಲಯದಲ್ಲಿ ಘಟನೆ…

ವಿಶ್ವಿಖ್ಯಾತ ಮೈಸೂರು ಮೃಗಾಲಯದಲ್ಲಿ ಆನೆಯೊಂದು ಮಾವುತನನ್ನೇ ತುಳಿದು ಕೊಂದ ಘಟನೆ ಇಂದು ಸಂಜೆ ನಡೆದಿದೆ.ಹರೀಶ್(೩೮) ಮೃತ ದುರ್ದೈವಿಯಾಗಿದ್ದಾರೆ.ಕೆಲವು ವರ್ಷಗಳಿಂದ ಆನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹರೀಶ್...

ನಿಧಿ ಶೋಧಕ್ಕೆ ಬಂದ ಕಿಡಿಗೇಡಿ ಯುವಕ ಮಂಟಪ ಕುಸಿದು ಸಾವು…

ನಿಧಿ ಆಸೆಗಾಗಿ ಬಂದ ಚೋರರ ತಂಡದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.ನಿಧಿ ಲಪಟಾಯಿಸುವ...

Recent Comments