32 C
Mysore
Monday, June 21, 2021
Home All News ರಾಜಾಕಾಲುವೆ ಮೇಲೆ ಸಾ.ರಾ.ಕನ್ವೆನ್ಷನ್ ಹಾಲ್ ನಿರ್ಮಾಣ ಆರೋಪ ವಿಚಾರ…ಪರಿಶೀಲನೆಗೆ ಸಮಿತಿ ರಚನೆ…

ರಾಜಾಕಾಲುವೆ ಮೇಲೆ ಸಾ.ರಾ.ಕನ್ವೆನ್ಷನ್ ಹಾಲ್ ನಿರ್ಮಾಣ ಆರೋಪ ವಿಚಾರ…ಪರಿಶೀಲನೆಗೆ ಸಮಿತಿ ರಚನೆ…

ರಾಜಾಕಾಲುವೆ ಮೇಲೆ ಸಾ.ರಾ.ಕನ್ವೆನ್ಷನ್ ಹಾಲ್ ನಿರ್ಮಾಣವಾಗಿದೆ ಎಂದು ನಿರ್ಗಮಿತ ಡಿ.ಸಿ.ರೋಹಿಣಿ ಸಿಂಧೂರಿ ಮಾಡಿದ ಆರೋಪದ ಹಿನ್ನಲೆ ಪ್ರಾದೇಶಿಕ ಆಯುಕ್ತರು ಪರಿಶೀಲನೆ ನಡೆಸಲು ತಂಡ ರಚಿಸಿದ್ದಾರೆ.೭ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದ್ದು ಜೂನ್ ೧೩ ರೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಭೂದಾಖಲೆಗಳ ಜಂಟಿ ನಿರ್ದೇಶಕರ ಕಚೇರಿಯಿಂದ ಸಮಿತಿ ರಚನೆಯಾಗಿದೆ.ಭೂದಾಖಲೆಗಳ ಉಪನಿರ್ದೇಶಕರ ಕಚೇರಿಯ ಜಿ.ಸೀಮಂತಿನಿ,ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ಹೆಚ್.ಮಂಜುನಾಥ್,ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕ ಕಚೇರಿಯ ಅಧೀಕ್ಷಕರಾದ ಜನೀಶ್ ಕುಮಾರ್,ಭೂ ದಾಖಲೆಗಳ ಉಪನಿರ್ದೇಶಕ ಕಚೇರಿಯ ಅಧೀಕ್ಷಕರಾದ ನಾಗೇಶ್.ಎಂ.ವಿ.,ಪರ್ಯಾವೇಕ್ಷಕರಾದ ಮಹದೇವ್,ಜುಂಡೇಗೌಡ ಹಾಗೂ ಭೂಮಾಪಕರಾದ ಸುರೇಶ್.ಡಿ. ಸಮಿತಿಯಲ್ಲಿದ್ದಾರೆ.

ರೋಹಿಣಿ ಸಿಂಧೂರಿ ಆರೋಪ ಮಾಡಿದ ಹಿನ್ನಲೆ ಸಾ.ರಾ.ಮಹೇಶ್ ಪ್ರಾದೇಶಿಕ ಕಚೇರಿ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿದ್ದರು.ರೋಹಿಣಿ ಸಿಂಧೂರಿ ಆರೋಪ ಸಾಬೀತಾದಲ್ಲಿ ಚೌಟ್ರಿಯನ್ನ ಸರ್ಕಾರದ ವಶಕ್ಕೆ ನೀಡಿ ಸಾರ್ವಜನಿಕ ಕ್ಷೇತ್ರಕ್ಕೆ ಗುಡ್ ಬೈ ಹೇಳುವುದಾಗಿ ಸಾ.ರಾ.ಮಹೇಶ್ ಸವಾಲು ಹಾಕಿದ್ದಾರೆ.ಅಲ್ಲದೆ ಆರೋಪ ಸಾಬೀತಾಗದಿದ್ದಲ್ಲಿ ರೋಹಿಣಿ ಸಿಂಧೂರಿ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸಾ.ರಾ
ಮಹೇಶ್ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದ್ದರು.ಇವೆಲ್ಲಾ ಬೆಳವಣಿಗೆ ಹಿನ್ನಲೆ ಪ್ರಾದೇಶಿಕ ಆಯುಕ್ತರಾದ ಜಿ.ಸಿ.ಪ್ರಕಾಶ್ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.ಸಮಿತಿಯು ಮೈಸೂರು ತಾಲೂಕು ಕಸಬಾ ಹೋಬಳಿ ದಟ್ಟಗಳ್ಳಿ ಗ್ರಾಮ ಸರ್ವೆ ನಂ ೧೩೦/೩ ಕ್ಕೆಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಲಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಕತ್ತು ಕುಯ್ದುಕೊಂಡು ಮಾನಸಿಕ ಅಸ್ವಸ್ಥ ಆತ್ಮಹತ್ಯೆ…

ಮಾನಸಿಕ ಅಸ್ವಸ್ಥನೊಬ್ಬ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನ ಕನ್ನಳ್ಳಿ ಮೋಳೆ ಗ್ರಾಮದಲ್ಲಿ ನಡೆದಿದೆ.ಶಿವಣ್ಣ (42) ಮೃತ ದುರ್ದೈವಿ.ಗ್ರಾಮದಲ್ಲಿದ್ದ...

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಯಾಕನೂರು ಗ್ರಾಮದಲ್ಲಿ ನಡೆದಿದೆ.ಕಾವ್ಯ(೨೧)ಮೃತ ದುರ್ದೈವಿಯಾಗಿದ್ದಾರೆ.ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಒಂದೂವರೆ ವರ್ಷದ...

ಶಿಕ್ಷಕರಿಗೆ ಲಸಿಕಾ ಅಭಿಯಾನ…ಸಾಮಾಜಿಕ ಅಂತರ ಮಾಯ…

ಹುಣಸೂರಿನ ಶಿಕ್ಷಕರ ಭವನದಲ್ಲಿ ಶಿಕ್ಷಕರಿಗಾಗಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ನೂರಾರು ಶಿಕ್ಷಕರು ಲಸಿಕೆ ಪಡೆಯಲು ಸೇರಿದ್ದರು.ಆದರೆ ಸ್ಥಳದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.ವಿದ್ಯಾವಂತ ಶಿಕ್ಷಕರೇ ಹೀಗೆ ವರ್ತಿಸಿದರೆ...

ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್…ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಕೇಸ್…

ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ತಾಲೂಕು ಆಡಳಿತದಿಂದ ನಿರ್ಧಾರ...

Recent Comments