TV10 Kannada Exclusive

ಹಿಟ್ ಅಂಡ್ ರನ್ …ಇಬ್ಬರು ಬೈಕ್ ಸವಾರರ ಸಾವು…

ಮೈಸೂರು,ನ3,Tv10 ಕನ್ನಡ ಬೈಕ್ ಹಾಗೂ ಬೊಲೆರೋ ನಡುವೆ ನಡೆದ ಅಪಘಾತದಲ್ಲಿಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಮೈಸೂರು ಪೊಲೀಸ್ ಬಡಾವಣೆ ರಿಂಗ್ ರಸ್ತೆ ಬಳಿ ನಡೆದಿದೆ.ಅಪಘಾತದ ನಂತರ ಬೊಲೆರೋ ವಾಹನ ಪರಾರಿಯಾಗಿದೆ.ಸಿದ್ದಾರ್ಥ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ…
Read More

ಬಿರುಗಾಳಿಗೆ ನೆಲಕಚ್ಚಿದ ಬಾಳೆ ಬೆಳೆ…ರೈತ ಹೈರಾಣು…

ಹುಣಸೂರು,ಅ30,Tv10 ಕನ್ನಡ ನಿನ್ನೆ ರಾತ್ರಿ ಬೀಸಿದ ಬಿರುಗಾಳಿಗೆಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾದ ಘಟನೆಹುಣಸೂರು ತಾಲ್ಲೂಕಿನ ಬಿ ಆರ್ ಕಾವಲು ಗ್ರಾಮದಲ್ಲಿ ನಡೆದಿದೆ. ಕೈಗೆ ಬಂದ ಬಾಳೆ ಬೆಳೆ ನೆಲಕಚ್ಚಿದೆ.ಬಿ.ಆರ್ ಕಾವಲು ಗ್ರಾಮದ ಚಿನ್ನಸ್ವಾಮಿ ಯವರಿಗೆ ಸೇರಿದ 2 ಎಕರೆ ಹಾಗೂ ಪ್ರಕಾಶ್ ರವರ 1 ಎಕರೆ ಬಾಳೆಬೆಳೆ ಸಂಪೂರ್ಣ ನಾಶವಾಗಿದೆ…
Read More

ಮೈಸೂರು:ಕೈಗಾರಿಕಾ ಪ್ರದೇಶದಲ್ಲಿ ಮುಳ್ಳುಹಂದಿ ರಕ್ಷಣೆ…ಅರಣ್ಯಕ್ಕೆ ರವಾನೆ…

ಮೈಸೂರು,ಅ30,Tv10 ಕನ್ನಡ ಮೈಸೂರಿನ ಹೆಬ್ಬಾಳು ಕೈಗಾರಿಕಾ‌ ಪ್ರದೇಶದಲ್ಲಿ ಕಾಣಿಸಿಕೊಂಡ ಮುಳ್ಳುಹಂದಿಯನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿದ್ದಾರೆ.ಮುಳ್ಳುಹಂದಿಯನ್ನ ಅರಣ್ಯ ಪ್ರದೇಶಕ್ಕೆ ರವಾನೆ ಮಾಡಿದ್ದಾರೆ.ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸ್ಥಳೀಯರು ಸಾಥ್ ನೀಡಿದ್ದಾರೆ…
Read More

ಕರ್ನಾಟಕ ಹೆಸರಿಗೆ 50 ವರ್ಷ…ನವೆಂಬರ್ 1 ರಂದು ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಮನವಿ…

ಮೈಸೂರು,ಅ28,Tv10 ಕನ್ನಡ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ಪೂರ್ಣಗೊಂಡ ಹಿನ್ನಲೆ ನವೆಂಬರ್ 1 ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ವಿಶೇಷವಾಗಿ ಆಚರಿಸಲು ಸರ್ಕಾರ ಉದ್ದೇಶಿಸಿದೆ.ಈ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು ಕೆಲವು ತೀರ್ಮಾನಗಳನ್ನ ಕೈಗೊಳ್ಳಲಾಗಿದ್ದು ಸ್ವರೂಪಗಳನ್ನ ಸಿದ್ದಪಡಿಸಲಾಗಿದೆ. 1.ನವೆಂಬರ್ 1 ರಂದು ರಾಜ್ಯದ ಎಲ್ಲಾ ಮನೆಗಳ ಮುಂದೆ ಕೆಂಪು ಹಳದಿ ಬಣ್ಣದ ರಂಗೋಲಿ ಹಾಕಿ ಕರ್ನಾಟಕ ಸಂಭ್ರಮ 50 ಹೆಸರಾಯಿತು ಕರ್ನಾಟಕ..ಉಸಿರಾಗಲಿ ಕನ್ನಡ
Read More

ಕಾಡಾನೆ ಅಟ್ಯಾಕ್…ಮುರಿದ ರೈತನ ಕಾಲು…

ನಂಜನಗೂಡು,ಅ28,Tv10 ಕನ್ನಡ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಬಲಗಾಲು ಮುರಿದ ಘಟನೆ ನಂಜನಗೂಡಿನ ಶೆಟ್ಟಹಳ್ಳಿ ಗ್ರಾಮದ ಬಳಿ ನಡೆದಿದೆ.ಬೋಳಯ್ಯ(75) ಕಾಡಾನೆಯ ದಾಳಿಯಿಂದ ಕಾಲು ಮುರಿದುಕೊಂಡಿರುವ ರೈತ.ಸ್ಥಳಕ್ಕೆ ನಂಜನಗೂಡಿನ ಅರಣ್ಯ ಇಲಾಖೆಯ ಅಧಿಕಾರಿ ನಿಕಿತ್ ಮತ್ತು ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರಕಿಕಟ್ಟೆ ದೊಡ್ಡಯ್ಯ ಸೇರಿದಂತೆ ಇತರೆ ಸಿಬ್ಬಂದಿಗಳು ಗಾಯಳುನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಅರಣ್ಯ ಇಲಾಖೆ
Read More

ಜಮೀನು ವಿಚಾರದಲ್ಲಿ ಸಂಭಂಧಿಕರ ನಡುವೆ ಮಾರಾಮಾರಿ…ಹಲವರಿಗೆ ಗಾಯ…

ಮೈಸೂರು,ಅ27,Tv10 ಕನ್ನಡ ಜಮೀನು ಹಾಗೂ ನಿವೇಶನ ವಿಚಾರದಲ್ಲಿ ಸಂಬಂಧಿಗಳ ನಡುವೆ ಮಾರಾಮಾರಿ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಲಿಂಗಪುರದಲ್ಲಿ ಘಟನೆ ನಡೆದಿದೆ.ಘಟನೆಯಲ್ಲಿಹಲವರು ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಹಾಗೂ ಪುತ್ರ ಅಭಿಲಾಷ್ ವಿರುದ್ದಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಹೋದರ ಹಾಗೂ ಸಹೋದರರ ಮಕ್ಕಳ ಮೇಲೆ ಹಲ್ಲೆ ನಡೆದಿದೆ.ಎಲ್ಲರಿಗೂ ಸಮವಾಗಿ ಪಾಲು ನೀಡಿದ ನಂತರವೂತಮಗೆ ಮತ್ತಷ್ಟು ನಿವೇಶನ ಜಮೀನು ಬರಬೇಕು ಅಂತಾ ಗಲಾಟೆ ನಡೆದಿದೆ.ಗಲಾಟೆಯಲ್ಲಿ ಅಂಬರೀಶ್ ಎಲ್ಲಮ್ಮ
Read More

ಎಚ್.ಡಿ.ಕೋಟೆ: ಕಾಡಾನೆ ದಾಳಿ…ರೈತ ಸಾವು…

ಎಚ್.ಡಿ.ಕೋಟೆ,ಅ28,Tv10 ಕನ್ನಡ ಕಾಡಾನೆ ದಾಳಿಗೆ ರೈತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿ ನಡೆದಿದೆ.ವಸಂತ (35) ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ದುರ್ದೈವಿ.ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಕಾವಲಿಗೆ ಗುರುವಾರ ರಾತ್ರಿ ಬಾಮೈದನ ಜೊತೆ ಹೋಗಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ.ಕಾಡಿಗೆ ಹಿಮ್ಮಟ್ಟಿಸಲು ಯತ್ನಿಸಿದ ಸಂದರ್ಭದಲ್ಲಿ ದಾಳಿ ನಡೆಸಿದೆ.ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿದ್ದಾರೆ.ಕಾಡಾನೆ ಹಾವಳಿ ತಪ್ಪಿಸುವಂತೆ ಕ್ರಮವಹಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸ್ಥಳೀಯರು ಮಾತಿನ ಚಕಮಕಿ
Read More

ಗೋಬಿ ಮಂಚೂರಿ ವ್ಯವಹಾರದಲ್ಲಿ ನಷ್ಟ…ಯುವಕ ಆತ್ಮಹತ್ಯೆ…

ಮೈಸೂರು,ಅ27,Tv10 ಕನ್ನಡ ಗೋಬಿ ಮಂಚೂರಿ ವ್ಯವಹಾರದಲ್ಲಿ ತೀವ್ರ ನಷ್ಟ ಅನುಭವಿಸಿದ ಹಿನ್ನಲೆ ಯುವಕ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿ ನಡೆದಿದೆ.ಸೂರ್ಯಕುಮಾರ್(25) ಮೃತ ದುರ್ದೈವಿ.ವ್ಯಾಪಾರದಲ್ಲಿ ನಷ್ಟ ಅನುಭಿಸಿದ ಸೂರ್ಯಕುಮಾರ್ ಸಾಲಗಾರನಾಗಿದ್ದನೆಂದು ಹೇಳಲಾಗಿದೆ.ಈ ಕುರಿತಂತೆ ವಿಧ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More

ಮೈಸೂರು ತಾಲೂಕು ಉಪತಹಸೀಲ್ದಾರ್ ಆಗಿ ಎಲ್.ಶಶಾಂಕ್ ನೇಮಕ…

ಮೈಸೂರು ತಾಲೂಕು ಉಪತಹಸೀಲ್ದಾರ್ ಆಗಿ ಎಲ್.ಶಶಾಂಕ್ ನೇಮಕ… ಮೈಸೂರು,ಅ27,Tv10 ಕನ್ನಡ ಮೈಸೂರು ತಾಲೂಕು ಉಪತಹಸೀಲ್ದಾರ್ ಆಗಿ ಎಲ್.ಶಶಾಂಕ್ ರವರನ್ನ ಸರ್ಕಾರ ನೇಮಕ ಮಾಡಿದೆ.ಈ ಹಿಂದೆ ಗುಂಡ್ಲುಪೇಟೆ ತಾಲೂಕಿನ ಚುನಾವಣಾ ಶಿರಸ್ತೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಶಾಂಕ್ ರನ್ನ ಮೈಸೂರು ಉಪತಹಸೀಲ್ದಾರ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.ಮೇ 2023 ರಂದು ಆನಂದ್ ಹಾಗೂ ಕೆ.ಎಸ್.ರೂಪಾ ರವರು ಪರಸ್ಪರ ವರ್ಗಾವಣೆ ಮಾಡಿಕೊಂಡಿರುವ ಆದೇಶವನ್ನ ರದ್ದುಪಡಿಸಿರುವ ಸರ್ಕಾರ ಆನಂದ್ ರವರ ಜಾಗಕ್ಕೆ ಎಲ್.ಶಶಾಂಕ್
Read More

ಮೈಸೂರು: ಇನ್ಸ್ ಟ್ಯೂಟ್ ಆಫ್ ಇಂಜಿನಿಯರ್ಸ್ ಆವರಣದಲ್ಲಿ ಗಂಧದ ಮರ ಕಳುವು…

ಮೈಸೂರು: ಇನ್ಸ್ ಟ್ಯೂಟ್ ಆಫ್ ಇಂಜಿನಿಯರ್ಸ್ ಆವರಣದಲ್ಲಿ ಗಂಧದ ಮರ ಕಳುವು… ಮೈಸೂರು,ಅ27,Tv10 ಕನ್ನಡ ಮೈಸೂರಿನ ಜೆ.ಎಲ್.ಬಿ.ರಸ್ತೆಯಲ್ಲಿರುವ ಇನ್ಸ್ ಟ್ಯೂಟ್ ಆಫ್ ಇಂಜಿನಿಯರ್ಸ್ ಆವರಣದಲ್ಲಿ ಬೆಳೆದಿದ್ದ ಗಂಧದ ಮರ ಕಳುವಾಗಿದೆ.ರಾತ್ರೋ ರಾತ್ರಿ ಮರವನ್ನ ಕಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ಬುಡ ಹಾಗೂ ಕೊಂಬೆಗಳನ್ನ ಬಿಟ್ಟು ಕಾಂಡದ ಭಾಗವನ್ನ ಕಡಿದು ಕದ್ದೊಯ್ದಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…
Read More