TV10 Kannada Exclusive

ಗೃಹಸಚಿವರ ನಿವಾಸಕ್ಕೆ ಭೇಟಿ ನೀಡುವ ಪೊಲೀಸ್ ಸಿಬ್ಬಂದಿಗಳಿಗೆ ಮೂಗುದಾರ…ಅನುಮತಿ ಪಡೆಯುವಂತೆ ಸೂಚನೆ…

ಬೆಂಗಳೂರು,ಫೆ27,Tv10 ಕನ್ನಡ ಸಂಭಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯದೆ ಗೃಹಸಚಿವರ ನಿವಾಸಕ್ಕೆ ಭೇಟಿ ನೀಡುತ್ತಿರುವ ಪೊಲೀಸ್ ಸಿಬ್ಬಂದಿಗಳ ವರ್ತನೆಗೆ ಬ್ರೇಕ್ ಹಾಕಲಾಗಿದೆ.ಮುಂದಿನ ದಿನಗಳಲ್ಲಿ ಈ ಸಂಭಂಧ ಅನುಮತಿ ಪಡೆಯುವಂತೆ ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ ಉಪ‌ಪೊಲೀಸ್ ಆಯುಕ್ತರಾದ ಅನಿತಾ.ಬಿ.ಹದ್ದಣ್ಣವರ್ ನೋಟೀಸ್ ನೀಡಿದ್ದಾರೆ.ಪೂರ್ವಾನುಮತಿ ಪಡೆಯದೆ ಗೃಹಸಚಿವರ ನಿವಾಸಕ್ಕೆ ಭೇಟಿ ನೀಡುವುದು ಇಲಾಖಾ ನಿಯಮ ಮತ್ತು ನಿಭಂಧನೆಗಳಿಗೆ ವಿರುದ್ದವಾಗಿರುತ್ತದೆ.ಇನ್ನುಮುಂದೆ ಗೃಹಸಚಿವರ ನಿವಾಸಕ್ಕೆ ಭೇಟಿ ನೀಡುವ ಮುನ್ನ ಮಾನ್ಯ ಪೊಲೀಸ್ ಪ್ರಧಾನ ಕಚೇರಿಯಿಂದ ಕಡ್ಡಾಯವಾಗಿ ಪೂರ್ವಾನುಮತಿ
Read More

ಶೌಚಾಲಯ ಗುಂಡಿಯಲ್ಲಿ ಮನುಷ್ಯನ ಬುರುಡೆ,ಮೂಳೆಗಳು ಪತ್ತೆ…ಪೊಲೀಸರು ದೌಡು…

ಹೆಚ್.ಡಿ.ಕೋಟೆ,ಫೆ27,Tv10 ಕನ್ನಡ ಕುಸಿದು ಬಿದ್ದಿದ್ದ ಶೌಚಾಲಯ ದುರಸ್ಥಿ ವೇಳೆ ಗುಂಡಿಯಲ್ಲಿ ಮನುಷ್ಯನ ಬುರುಡೆ,ಮೂಳೆಗಳು ಪತ್ತೆಯಾದ ಘಟನೆಹೆಚ್ ಡಿ ಕೋಟೆ ತಾಲೂಕಿನ ಜೊಂಪನಹಳ್ಳಿಯ ಚಿನ್ನಪ್ಪ ಪಾಳ್ಯ ಗ್ರಾಮದಲ್ಲಿ ನಡೆದಿದೆ.ದಾಸಪ್ರಕಾಶ್ ಎಂಬವರ ಮನೆಯ ಹಿತ್ತಲಿನ ಶೌಚಾಲಯದ ಗುಂಡಿಯಲ್ಲಿ ಪತ್ತೆಯಾಗಿದೆ.ಶೌಚಾಲಯದ ಗುಂಡಿ ಕುಸಿದು ಬಿದ್ದ ಹಿನ್ನೆಲೆದುರಸ್ತಿ ಕಾರ್ಯ ನಡೆಸಲು ಮನೆ ಮಾಲಿಕರು ಆರಂಭಿಸಿದ್ದರು.ಈ ವೇಳೆ ತೆಗೆದಿದ್ದ ಗುಂಡಿಯಲ್ಲಿ ಮೂಳೆಗಳು ಪತ್ತೆಯಾಗಿದೆ.ತಕ್ಷಣ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆಸ್ಥಳಕ್ಕೆ ಹೆಚ್ ಡಿ ಕೋಟೆ ಪೋಲಿಸರು ಭೇಟಿ ನೀಡಿ
Read More

ರಂಗೋಲಿಯಲ್ಲಿ ಮೂಡಿಬಂದ ಶಿವನ ಚಿತ್ರಗಳು…ಶಿವರಾತ್ರಿ ಅಂಗವಾಗಿ ಸ್ಪರ್ಧೆ…

ಮೈಸೂರು,ಫೆ26,Tv10 ಕನ್ನಡ ಶಿವರಾತ್ರಿ ಹಬ್ಬದ ಅಂಗವಾಗಿ ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಸಮೃದ್ಧಿ ಟ್ರಸ್ಟ್ ಹಾಗೂ ಕೆಎಂಪಿ ಕೆ ಟ್ರಸ್ಟ್ ಮತ್ತು ಜೆ ಸಿ ಐ ಮೈಸೂರು ಕಿಂಗ್ ಲೇಡೀಸ್ ವತಿಯಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.ವಿವಿದ ವಯೋಮಾನದ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಮಹಿಳೆಯರ ಕೈಚಳಕದಲ್ಲಿ ಅಂದವಾದ ಶಿವನ ಚಿತ್ರಗಳು ಮೂಡಿಬಂದವು. 5 ಬಹುಮಾನಗಳನ್ನ ನಿಗದಿ ಪಡಿಸಲಾಗಿತ್ತು. ರಾಮಾನುಜಾ ರಸ್ತೆಯ ನಿವಾಸಿ ಸುಶೀಲಾ, ಕಲ್ಯಾಣಗಿರಿಯ
Read More

ಬಾರ್ ಅಂಡ್ ರೆಸ್ಟೋರೆಂಟ್ ಗೆ ವಂಚಿಸಿದ ಕ್ಯಾಷಿಯರ್…6.70 ಲಕ್ಷಕ್ಕೆ ಉಂಡೆನಾಮ…ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ನಂಜನಗೂಡು,ಫೆ26,Tv10 ಕನ್ನಡ ಬ್ಯಾಂಕ್ ಗೆ ಕಟ್ಟಬೇಕಿದ್ದ ಹಣವನ್ನ ಕ್ಯಾಶಿಯರ್ ಲಪಟಾಯಿಸಿದ ಪ್ರಕರಣ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.6.7 ಲಕ್ಷ ಹೊತ್ತೊಯ್ದ ಕ್ಯಾಷಿಯರ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಗಾಜನೂರು ಗ್ರಾಮದ ಮಹದೇವ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.ಹಲವು ತಿಂಗಳಿಂದ ಮಹದೇವ್ ನಂಜನಗೂಡು ಗುಂಡ್ಲುಪೇಟ್ ಮುಖ್ಯ ರಸ್ತೆಯಲ್ಲಿರುವ ಎಸ್.ಎಲ್.ವಿ.ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ.ಅಲ್ಲಿ ವ್ಯವಸ್ಥಾಪಕರಾಗಿದ್ದ ಆನಂದ್ ಎಂಬುವರು ಕಳೆದ ವರ್ಷ ಜುಲೈ ನಲ್ಲಿ ಕಾರ್ಯನಿಮಿತ್ತ ರಜೆ
Read More

ದೇವಸ್ಥಾನದ ಪುನಶ್ಚೇತನಕ್ಕೆ ಕೈ ಜೋಡಿಸಿದ ಮುಸ್ಲಿಂ ಸಮುದಾಯ…ಶನೇಶ್ವರ ಆದಿಶಕ್ತಿ ದೇವಾಲಯ ಅಭಿವೃದ್ದಿಗಾಗಿ ಹಿಂದು ಮುಸ್ಲಿಂ ಭಾಯಿ..ಭಾಯಿ…

ಮೈಸೂರು,ಫೆ26,Tv10 ಕನ್ನಡ ಒಂದೆಡೆ ಧಾರ್ಮಿಕ ಭಾವನೆಗಳಿಗೆ ಕೆಡುಕು ಮಾಡುವಂತೆ ಕಿಡಿಗೇಡಿಗಳು ಪ್ರಚೋದಿಸುತ್ತಿದ್ದರೆ ಮೈಸೂರಿನ ರಾಘವೇಂದ್ರ ಬಡಾವಣೆಯಲ್ಲಿ ದೇವಸ್ಥಾನದ ಅಭಿವೃದ್ದಿಗಾಗಿ ಮುಸ್ಲಿಂ ಸಮುದಾಯದ ಮುಖಂಡರು ಕೈಜೋಡಿಸಿ ಭಾವೈಕ್ಯತೆ ಮೆರೆದಿದ್ದಾರೆ.ಶಿಥಿಲಗೊಂಡಿದ್ದ ದೇವಸ್ಥಾನಕ್ಕೆ ಪುನಶ್ವೇತನ ನೀಡಲು ಹಿಂದು ಮುಸ್ಲಿಂ ಸಮುದಾಯದ ಮುಖಂಡರು ಒಂದಾಗಿ ವಿಶೇಷ ರೂಪ ನೀಡಿದ್ದಾರೆ.ಎರಡು ಸಮುದಾಯದ ಒಗ್ಗಟ್ಟಿನಿಂದ ಅಭಿವೃದ್ದಿಯಾದ ಶನೇಶ್ವರ ಆದಿಶಕ್ತಿ ದೇವಾಲಯ ಇಂದು ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಾ ಭಕ್ತರನ್ನ ಆಕರ್ಷಿಸುತ್ತಿದೆ. ರಾಘವೇಂದ್ರ ಬಡಾವಣೆ 10 ನೇ ಕ್ರಾಸ್ ನಲ್ಲಿ ಸುಮಾರು
Read More

ಬೆಳಗಾವಿ ಜಿಲ್ಲೆಯ ಮರಾಠಿ ಪುಂಡರಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ…ಸಿಎಂ ಗೆ ಮನವಿ ಪತ್ರ…

ಮೈಸೂರು,ಫೆ25,Tv10 ಕನ್ನಡ ಮುಖ್ಯಮಂತ್ರಿಗಳಿಗೆ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಮನವಿಬೆಳಗಾವಿ ಜಿಲ್ಲೆಸುಳೇಬಾವಿ ಗ್ರಾಮದ ಹೊರವಲಯದಲ್ಲಿ ಕರ್ತವ್ಯ ನಿರತ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನಿರ್ವಾಹಕ ಮಹದೇವಪ್ಪ ಅವರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಮರಾಠಿ ಪುಂಡರನ್ನು ಕರಠಿಣ ಶಿಕ್ಷೆಗೆ ಒಳಪಡಿಸಿ ರಾಜ್ಯದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿಪ್ರಜ್ಞಾವಂತ ನಾಗರಿಕ ವೇದಿಕೆಯ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿಗಳಾದ ಶಿವರಾಜು ರವರಿಗೆ
Read More

ಅಪಾರ್ಟ್ ಮೆಂಟ್ ನ ಫ್ಲಾಟ್ ಮಾರಾಟಕ್ಕೆ ಬಾಡಿಗೆದಾರನಿಂದ ಅಡ್ಡಿ…ಪಿಹೆಚ್ಡಿ ವ್ಯಾಸಂಗ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ…ಮಿಸ್ಸಿಂಗ್ ಕಂಪ್ಲೇಂಟ್ ದಾಖಲು…

ಮೈಸೂರು,ಫೆ25,Tv10 ಕನ್ನಡ ಅಪಾರ್ಟ್ ಮೆಂಟ್ ನಲ್ಲಿ ಫ್ಲಾಟ್ ಮಾರಾಟ ಮಾಡಲು ಅಡ್ಡಿಪಡಿಸಿದ ಬಾಡಿಗೆದಾರನ ವರ್ತನೆಗೆ ಬೇಸತ್ತ ಪಿಹೆಚ್ಡ್ ವ್ಯಾಸಂಗ ಮಾಡುತ್ತಿದ್ದ ವ್ಯಕ್ತಿ ಮನನೊಂದು ನಾಪತ್ತೆಯಾಗಿರುವ ಪ್ರಕರಣವೊಂದು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮುಂಬೈ ಮೂಲದ ಸತೀಶ್ ಚಂದ್ರ ನಾಪತ್ತೆಯಾದವರು.ಪತಿಯನ್ನ ಹುಡುಕಿಕೊಡುವಂತೆ ಪತ್ನಿ ರಮ್ಯ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ. ಸತೀಶ್ ಚಂದ್ರ ರವರು ಮುಂಬೈ ನ ಟಾಟಾ ಇನ್ಸ್ಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ನಲ್ಲಿ ಪಿಹೆಚ್ಡ್ಮಿ
Read More

ನಾಡಿನಾದ್ಯಂತ ಶಿವರಾತ್ರಿ ಹಬ್ಬಕ್ಕೆ ಸಕಲ ಸಿದ್ಧತೆ‌…ತ್ರಿಣೇಶ್ವರ ದೇವಾಲಯ ತಲುಪಿದ ಚಿನ್ನದ ಕೊಳಗ…

ಮೈಸೂರು,ಫೆ25,Tv10 ಕನ್ನಡ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಿವರಾತ್ರಿ ಆಚರಣೆಗೆ ಶಿವನ ದೇಗುಲಗಳಲ್ಲಿ ಸಕಲ ಸಿದ್ದತೆ ನಡೆಯುತ್ತಿದೆ.ಜಗತ್ಪ್ರಸಿದ್ಧ ಅರಮನೆ ಆವರಣದಲ್ಲಿರುವತ್ರಿಣೇಶ್ವರ ಸ್ವಾಮಿಯ ದೇಗುಲದಲ್ಲಿ ಮೂಲದೇವರಿಗೆ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತದೆ.ವರ್ಷಕ್ಕೊಮ್ಮೆ ಮಾತ್ರ ಶಿವನ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತದೆ.ಜಯಚಾಮರಾಜೇಂದ್ರ ಒಡೆಯರ್ ಅವರು ಕಾಣಿಕೆ ರೂಪದಲ್ಲಿ ಚಿನ್ನದ ಮುಖವಾಡ ನೀಡಿದ್ದಾರೆ.ಶ್ರೀ ಕಂಠದತ್ತನರಸಿಂಹರಾಜ ಒಡೆಯರ್ ಜನಿಸಿದ ನೆನಪಿನಾರ್ಥ 1953ರಲ್ಲಿ ಚಿನ್ನದ ಮುಖವಾಡ ನೀಡಿದ್ದಾರೆ.ವರ್ಷಪೂರ್ತಿ ಜಿಲ್ಲಾ ಖಜಾನೆಯಲ್ಲಿ ಇರುವ ಚಿನ್ನದ ಮುಖವಾಡಶಿವರಾತ್ರಿ ಹಬ್ಬದ ದಿನದಂದು ಮಾತ್ರ
Read More

ಕುಂಭಮೇಳದಲ್ಲಿ ಕನ್ನಡಾಭಿಮಾನ ಮೆರೆದ ಶಾಸಕ ಎ.ಮಂಜು…

ಮೈಸೂರು,ಫೆ24,Tv10 ಕನ್ನಡ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಕುಂಭಸ್ನಾನ ಮಾಡಿದ ಅರಕಲಗೂಡು ಜೆಡಿಎಸ್ ಶಾಸಕ ಎ.ಮಂಜು ಕನ್ನಡ ಧ್ವಜ ಪ್ರದರ್ಶಿಸಿ ಕನ್ನಡಾಭಿಮಾನ ಪ್ರದರ್ಶಿಸಿದ್ದಾರೆ.ಪುಣ್ಯ ಸ್ನಾನ ಮಾಡಿದ ಶಾಸಕ ಎ ಮಂಜುಕರ್ನಾಟಕ ರಾಜ್ಯ ಹಾಗೂ ರಾಜ್ಯದ ಜನರಿಗೆ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.ಸಮೃದ್ದಿ ಕರ್ನಾಟಕ ಭುವನೇಶ್ವರಿ ಚಿತ್ರದ ಬಾವುಟ ಹಿಡಿದು ಪುಣ್ಯಸ್ನಾನ ಮಾಡಿದ್ದಾರೆ…
Read More

ಗೃಹಿಣಿ ಅನುಮಾನಾಸ್ಪದ ಸಾವು…ಮರ್ಯಾದಾ ಹತ್ಯೆ ಶಂಕೆ…ಸಮಗ್ರ ತೆನಿಖೆ ನಡೆಸುವಂತೆ ಗ್ರಾಮಸ್ಥರ ಆಗ್ರಹ…

ನಂಜನಗೂಡು,ಫೆ21,Tv10 ಕನ್ನಡ ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ಕೂಗು ಕೇಳಿ ಬರುತ್ತಿದೆ.ಅನುಮಾನಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ ಸಾವಿನ ಬಗ್ಗೆ ಸಮಗ್ರ ತೆನಿಖೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಪತಿ ಹಾಗೂ ತಮ್ಮ ಇಬ್ಬರೂ ಸೇರಿ ಹತ್ಯೆ ಮಾಡಿರಬಹುದೆಂಬ ಶಂಕೆಯನ್ನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.ಹುಲ್ಲಹಳ್ಳಿ ಠಾಣೆ ಪೊಲೀಸರು ಕೂಡಲೇ ಈ ಪ್ರಕರಣದ ಬಗ್ಗೆ ತೆನಿಖೆ ಕೈಗೊಳ್ಳಬೇಕಿದೆ. ದುಗ್ಗಹಳ್ಳಿ ಗ್ರಾಮದ ಸುಚಿತ್ರ(38) ಅನುಮಾನಾಸ್ಪದವಾಗಿ ಮೃತಪಟ್ಟ ಗೃಹಿಣಿ.ಈಕೆಯ ಪತಿ ರವಿ ಹಾಗೂ ಈಕೆಯ ತಮ್ಮ ಸತೀಶ ಸೇರಿ
Read More