TV10 Kannada Exclusive

ಗಾಂಜಾ ಸೇವನೆ ಮಾಡ್ತೀಯ ಎಂದು ಬೆದರಿಸಿ 10 ಸಾವಿರ ಕಿತ್ತ ಖದೀಮರು…ನಾಲ್ವರ ವಿರುದ್ದ FIR ದಾಖಲು…

ಮೈಸೂರು,ಜ20,Tv10 ಕನ್ನಡ ಗಾಂಜಾ ಸೇವನೆ ಮಾಡುತ್ತಿದ್ದೀಯ ಪೊಲೀಸರನ್ನ ಕರೆಸ್ತೀನಿ,ಮನೆಯವರನ್ನ ಕರೆಸ್ತೀನಿ ಎಂದು ಬೆದರಿಕೆ ಹಾಕಿದ ನಾಲ್ವರು ಯುವಕರ ತಂಡ ಖಾಸಗಿ ಕಂಪನಿ ಉದ್ಯೋಗಿಯಿಂದ 10 ಸಾವಿರ ಪೀಕಿದ ಘಟನೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕನಗರದಲ್ಲಿ ನಡೆದಿದೆ.ಪಡುವಾರಹಳ್ಳಿ ನಿವಾಸಿಗಳಾದ ವರುಣ್,ಒಂಟೆ ಹಾಗೂ ಇನ್ನಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ.ಖಾಸಗಿ ಕಂಪನಿಯೊಂದರ ಟೆಕ್ನಿಕಲ್ ಅಡ್ವೈಸರ್ ಆಗಿರುವ ಚಿರಾಗ್ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿನಾಯಕನಗರದಲ್ಲಿ ಬಾಡಿಗೆ ಪಡೆದಿದ್ದ ಕೊಠಡಿಯಲ್ಲಿ ಒಂಟಿಯಾಗಿ ಕುಳಿತಿದ್ದ ವೇಳೆ
Read More

ಯೂಟ್ಯೂಬ್ ನಲ್ಲಿ ಬಂದ ಲಿಂಕ್ ಎಫೆಕ್ಟ್…ವೈದ್ಯನಿಗೆ 29.70 ಲಕ್ಷ ಉಂಡೆನಾಮ…

ಮೈಸೂರು,ಜ20,Tv10 ಕನ್ನಡ ಯೂಟ್ಯೂಬ್ ನಲ್ಲಿ ಬಂದ ಲಿಂಕ್ ಒಂದರ ಮೆಸೇಜ್ ಫಾಲೋ ಮಾಡಿದ ಮೈಸೂರಿನ ವೈದ್ಯರೊಬ್ಬರು 29.71 ಲಕ್ಷ ಹಣ ಕಳೆದುಕೊಂಡಿದ್ದಾರೆ.ಶ್ರೀರಾಂಪುರ ನಿವಾಸಿ ಡಾ.ಪಿ.ಶ್ರೀನಿವಾಸ ಮೂರ್ತಿ ಹಣ ಕಳೆದುಕೊಂಡವರು.ಈ ಕುರಿತಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯೂಟ್ಯೂಬ್ ವೀಕ್ಷಿಸುತ್ತಿದ್ದ ವೇಳೆ ಲಿಂಕ್ ಒಂದು ಬಂದಿದೆ.ಇದನ್ನ ಓಪನ್ ಮಾಡಿದಾಗ ಇಂಟರ್ ನ್ಯಾಷನಲ್ ಕಾಂಪಿಟೇಷನ್ ನಲ್ಲಿ ಭಾಗವಹಿಸಲು ಇಚ್ಛೆ ಇದೆಯಾ ಎಂದು ಕೇಳಿದ್ದಾರೆ.ಇದಕ್ಕೆ ಡಾ.ಶ್ರೀನಿವಾಸ ಮೂರ್ತಿ ಒಪ್ಪಿಕೊಂಡು ಅವರು ಹೇಳಿದಂತೆ ಕೆವೈಸಿ
Read More

ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಡಾಲಿ ಧನಂಜಯ ಮದುವೆ ಆಹ್ವಾನ ಪತ್ರಿಕೆ ವಿತರಣೆ…

ನಂಜನಗೂಡು,ಜ19,Tv10 ಕನ್ನಡ ದಕ್ಷಿಣಕಾಶಿ ನಂಜನಗೂಡಿಗೆ ಆಗಮಿಸಿದ ನಟ ಡಾಲಿ ಧನಂಜಯಶ್ರೀಕಂಠಶ್ವರನ ಸನ್ನಿಧಿಯಲ್ಲಿ ಮದುವೆ ಆಹ್ವಾನ ಪತ್ರ ಇಟ್ಟು ಪೂಜೆ ನೆರವೇರಿಸಿ ಪ್ರಾರ್ಥಿಸಿದರು.ನಟ ಡಾಲಿ ಧನಂಜಯಗೆ ಶಾಸಕ ದರ್ಶನ್ ಧ್ರುವನಾರಾಯಣ್ ಸಾಥ್ ನೀಡಿದರು.ದೇವಸ್ಥಾನ ಅರ್ಚಕರು ಸಿಬ್ಬಂದಿಗೆ ಆಮಂತ್ರಣ ಪತ್ರ ನೀಡಿ ಮದುವೆಗೆ ಆಹ್ವಾನಿಸಿದರು. ಧನಂಜಯಇಂದು ಮೈಸೂರಿನ ವಿವಿಧ ಗಣ್ಯರು ಸ್ನೇಹಿತರಿಗೆ ಮದುವೆ ಆಹ್ವಾನ ಪತ್ರಿಕೆ ನೀಡಲಿದ್ದಾರೆ…
Read More

ರಕ್ಷಣೆ ನೀಡಬೇಕಾದ ಪೊಲೀಸರಿಂದ ನಿಂದನೆ ಆರೋಪ…ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ…

ಸರಗೂರು,ಜ18,Tv10 ಕನ್ನಡ ಗಂಡ ಹಾಗೂ ಮನೆಯವರು ನೀಡುತ್ತಿರುವ ಕಿರುಕುಳದ ಬಗ್ಗೆ ದೂರು ನೀಡಲು ಠಾಣೆಗೆ ತೆರಳಿದ ಮಹಿಳೆ ಹಾಗೂ ಸಹೋದರನಿಗೆ ಪೊಲೀಸರು ನಿಂದಿಸಿದ್ದಾರೆಂಬ ಆರೋಪ ಕೇಳಿಬಂದಿದೆ.ಪೊಲೀಸರ ವರ್ತನೆ ಹಾಗೂ ಗಂಡನ ಮನೆಯವರ ಕಿರುಕುಳದಿಂದ ಮನನೊಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಸರಗೂರು ತಾಲೂಕು ಮುಳ್ಳೂರು ಗ್ರಾಮದಲ್ಲಿ ಘಟನೆ ನಡೆದಿದೆ.ವಿಷ ಸೇವಿಸಿದ ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಳ್ಳೂರು ಗ್ರಾಮದ ಮಹಾಲಕ್ಷ್ಮಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ.ಸರಗೂರು ಪೊಲೀಸ್
Read More

ಎಟಿಎಂ ಗೆ ಹಣ ಹಾಕದೆ ಲಪಟಾಯಿಸಿದ ನೌಕರ…5.80 ಲಕ್ಷ ವಂಚನೆ…ಇಬ್ಬರ ವಿರುದ್ದ FIR ದಾಖಲು…

ಹುಣಸೂರು,ಜ18,Tv10 ಕನ್ನಡ ಹಣ ಎಟಿಎಂಗೆ ತುಂಬದೆ‌ ತೆಗೆದುಕೊಂಡ ಹೋದ ಆರೋಪ ಹಿನ್ನಲೆ ಇಬ್ಬರ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಣ ತುಂಬದೆ ತೆಗೆದುಕೊಂಡು ಹೋದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಹಿನ್ನಲೆ ಪ್ರಕರಣ ದಾಖಲಾಗಿದೆ.ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ಎಂಬುವವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.ಎಟಿಎಂಗೆ ಹಣ‌ ತುಂಬವ ಏಜೆನ್ಸಿ‌ ಪಡೆದಿದ್ದ ಟಿ ಎಲ್ ಎಂಟರ್‌ಪ್ರೈಸಸ್ ನಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್ ಮೈಸೂರು ಜಿಲ್ಲೆಯ ಒಟ್ಟು 16
Read More

ಶೀಲ ಶಂಕೆ: ಪತಿಯಿಂದಲೇ ಪತ್ನಿ ಕೊಲೆ…

ಎಚ್.ಡಿ.ಕೋಟೆ,ಜ16,Tv10 ಕನ್ನಡ ಪತ್ನಿ ಶೀಲ ಶಂಕಿಸಿ ಪತಿ ಮಚ್ಚಿನಿಂದ ಪತ್ನಿ ಕುತ್ತಿಗೆ ಸೀಳಿ ಕೊಂದ ಘಟನೆ ಹೆಚ್.ಡಿ.ಕೋಟೆ ತಾಲೂಕು ಕಣಿಯನಹುಂಡಿ ಗ್ರಾಮದಲ್ಲಿ ನಡೆದಿದೆ.ತೇಜಸ್ವಿನಿ(26) ಮೃತ ದುರ್ದೈವಿ.ಪತಿ ದೇವರಾಜು ನಿಂದ ಕೃತ್ಯ.ಕಳೆದ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ.ಇಬ್ಬರು ಮಕ್ಕಳೊಂದಿಗೆ ತೋಟದ ಮನೆಯಲ್ಲಿ ವಾಸವಾಗಿದ್ದ ಕುಟುಂಬ.ಘಟನೆ ನಡೆದ ಒಂದೇ ತಾಸಿನಲ್ಲಿ ಆರೋಪಿಯನ್ನ ದಸ್ತಗಿರಿ ಮಾಡಿದ ಪೊಲೀಸರು.ಎಚ್.ಡಿ.ಕೋಟೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು.ಘಟನ ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್, ಅಡಿಷಿನಲ್ ಎಸ್ಪಿ ಮಲ್ಲಿಕ್, ಡಿವೈಎಸ್ಪಿ
Read More

ಮಕರ ಸಂಕ್ರಾಂತಿ: ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವ…

ಮೈಸೂರು,ಜ14,Tv10ಮೈಸೂರಿನ ಚಾಮುಂಡಿ ಬೆಟ್ಟದ ಪಾದದ ಬಳಿ ಇರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಅಂಗವಾಗಿ ಲಕ್ಷದೀಪೋತ್ಸವ ಏರ್ಪಡಿಸಲಾಗಿತ್ತು ಶಾಸಕದ್ವಯರಾದ ಜಿ ಟಿ ದೇವೇಗೌಡ ಹಾಗೂ ಶ್ರೀವತ್ಸರವರು ದೀಪೋತ್ಸವಕ್ಕೆ ಚಾಲನೆ ನೀಡಿದರು.ಸಾವಿರಾರು ಭಕ್ತರು ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ್,ಹರಿದಾಸ್, ಸುರೇಂದ್ರ,ಮಾಜಿ ಅಧ್ಯಕ್ಷರಾದ ಮಾಂಬಳಿ ಪಾಪೇಗೌಡರು ಹಾಜರಿದ್ದರು…
Read More

ಪ್ರವಾಸಿ ತಾಣಗಳಲ್ಲಿ ದುಪ್ಪಟ್ಟು ಪಾರ್ಕಿಂಗ್ ಶುಲ್ಕ ವಸೂಲಿ ಆರೋಪ…ಕಣ್ಮುಚ್ಚಿ ಕುಳಿತ ತಾಲೂಕು ಆಡಳಿತ…ಪ್ರವಾಸಿಗರು ಗರಂ…

ಶ್ರೀರಂಗಪಟ್ಟಣ,ಜ14,Tv10 ಕನ್ನಡ ಶ್ರೀರಂಗಪಟ್ಟಣ ಗೋಸಾಯಿಘಾಟ್ ಹಾಗೂ ಸಂಗಮದಲ್ಲಿ ದುಪ್ಪಟ್ಟು ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆಂದು ಪ್ರವಾಸಿಗರು ಆರೋಪಿಸಿದ್ದಾರೆ.ಗುತ್ತಿಗೆದಾರರು ಶ್ರೀರಂಗಪಟ್ಟಣ ಗೋಸಾಯಿ ಘಾಟ್ ಹಾಗೂ ಟೌನ್ ಮುನಿಸಿಪಲ್ ಕೌನ್ಸಿಲ್ ಎಂದು ನಕಲಿ ಬಿಲ್ ಸೃಷ್ಟಿಸಿ ರಾಜಾರೋಷವಾಗಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪ ಬಂದಿದೆ.ಈ ಬಗ್ಗೆ ಪ್ರವಾಸಿಗರು ಹಲವಾರು ಬಾರಿ ಮೌಖಿಕವಾಗಿ ಪುರಸಭೆ ಹಾಗೂ ಮುಜರಾಯಿ ಇಲಾಖೆಗೆ ಮಾಹಿತಿ ನೀಡಿದ್ದರೂ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಂಡಿಲ್ಲ.ಟೆಂಡರ್ ದಾರರು ನಿಗದಿತ ಶುಲ್ಕಗಳ ನಾಮಫಲಕಗಳನ್ನ
Read More

ಹುಲ್ಲಹಳ್ಳಿ ಗ್ರಾ.ಪಂ.ಅವ್ಯವಹಾರಗಳ ಸಮಗ್ರ ತೆನಿಖೆಗೆ ಆದೇಶ…ವಿಶೇಷ ತಂಡ ರಚನೆ…ಒಂದು ವರದಲ್ಲಿ ವರದಿ ಸಲ್ಲಿಸುವಂತೆ ಸೂಚನೆ…

ನಂಜನಗೂಡು,ಜ13,Tv10 ಕನ್ನಡ ಹುಲ್ಲಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿರುವ ಭ್ರಷ್ಟಾಚಾರ,ಅವ್ಯವಹಾರಗಳ ಬಗ್ಗೆ ಸಮಗ್ರ ತೆನಿಖೆ ನಡೆಸುವಂತೆ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ.ಇದಕ್ಕಾಗಿ ವಿಶೇಷ ತಂಡ ರಚಿಸಿ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.ನಂಜನಗೂಡು ತಾಲೂಕು ಪಂಚಾಯ್ತಿಯ ಸಹಾಯಕ ಲೆಕ್ಕಾಧಿಕಾರಿ ಶ್ರೀಕಂಠನಾಯ್ಕ,ದ್ವಿತೀಯ ದರ್ಜೆ ಸಹಾಯಕ ಲೆಕ್ಕಾಧಿಕಾರಿ ಶ್ರೀನಿವಾಸ ಮೂರ್ತಿ ರವರನ್ನೊಳಗೊಂಡ ತಂಡ ರಚಿಸಲಾಗಿದೆ. ಹುಲ್ಲಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ವಿರುದ್ದ ಹಣಕಾಸು ದುರುಪಯೋಗ,ನಿರ್ವಹಣೆಯಲ್ಲಿ ಲೋಪದೋಷಗಳ ಬಗ್ಗೆ ದೂರುಗಳು ಬಂದ ಹಿನ್ನಲೆ
Read More

ತಂದೆಯಾದ ಸಂಭ್ರಮದಲ್ಲೇ ಕೊನೆ ಉಸಿರೆಳೆದ ತಂದೆ…ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ಮನಕಲಕುವ ಘಟನೆ…

ಮೈಸೂರು,ಜ13,Tv10 ಕನ್ನಡ ತಂದೆಯಾದ ಸಂಭ್ರಮದಲ್ಲಿ ರಾತ್ರಿ ಮಲಗಿದ ತಂದೆ ಚಿರನಿದ್ರೆಗೆ ಜಾರಿದ ಮನಕಲಕುವ ಘಟನೆ ಮೈಸೂರಿನ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ನಡೆದಿದೆ.ಆಸ್ಪತ್ರೆಯಲ್ಲಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ರೆ ಇತ್ತ ಪತಿ ರಾತ್ರಿ ಸಂತಸದಿಂದ ಮಲಗಿದವರು ಮುಂಜಾನೆಯ ಸೂರ್ಯನ ಕಿರಣಗಳನ್ನ ನೋಡಿಲ್ಲ.ಜನ್ಮ ನೀಡಿದ ತಾಯಿ ಚೆಲುವಾಂಬ ಆಸ್ಪತ್ರೆಯ ಐಸಿಯೂ ನಲ್ಲಿ ಚೇತರಿಸಿಕೊಳ್ಳುತ್ತಿದ್ದರೆ ಪತಿ ಆಸ್ಪತ್ರೆ ಆವರಣದಲ್ಲಿ ರಾತ್ರಿ ಮಲಗಿದವರು ಸಾವಿಗೆ ಶರಣಾಗಿದ್ದಾರೆ. ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ಗ್ರಾಮದ ರಾಜೇಶ್(35) ಮೃತ
Read More