TV10 Kannada Exclusive

ಅಪ್ರಾಪ್ತನಿಂದ ಬೈಕ್ ಚಾಲನೆ…ತಂದೆಗೆ ದಂಡ…ಟಿ.ನರಸೀಪುರ ನ್ಯಾಯಾಲಯದ ತೀರ್ಪು…

ಟಿ.ನರಸೀಪುರ,ನ15,Tv10 ಕನ್ನಡ ಅಪ್ರಪ್ತಾನಿಗೆ ಬೈಕ್ ಚಾಲನೆ ಮಾಡಲು ನೀಡಿದ್ದ ತಂದೆಗೆ ಟಿ.ನರಸೀಪುರ ನ್ಯಾಯಾಲಯ ಬಾರಿ ದಂಡ ವಿಧಿಸಿದೆ.ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ ಪ್ರಕರಣ ದಾಖಲಾಗಿತ್ತು.ಬಾಲಕನಿಗೆ ಬೈಕ್ ನೀಡಿದಕ್ಕೆ ತಂದೆ ಮಹೇಶ್ ಗೆ 27 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ಅಲ್ಲದೆಒಂದು ವರ್ಷ ಆರ್ ಸಿ ರದ್ದು ಮಾಡಿದೆ.ಬೈಕ್ ಚಲಾಯಿಸಿದ ಬಾಲಕನಿಗೆ 25 ವರ್ಷದವರೆಗೂ ಡಿ ಎಲ್ ನೀಡದಂತೆ ಸೂಚನೆ ನೀಡಲಾಗಿದೆ.ಯಾರು ಅಪ್ರಪ್ತಾರಿಗೆ ಬೈಕ್ ನೀಡದಂತೆ ನ್ಯಾಯಾಲಯ ಎಚ್ಚರಿಕೆ
Read More

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಗೂಡ್ಸ್ ವಾಹನ…

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಗೂಡ್ಸ್ ವಾಹನ… ಮಂಡ್ಯ,ನ15,Tv10 ಕನ್ನಡ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಫಿಲ್ಮಿ ಸ್ಟೈಲ್ ನಲ್ಲಿ ಮೇಲಕ್ಕೆಗರಿ ಪಲ್ಟಿಯಾದ ಘಟನೆಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯ ಎಂ.ಕೆ.ಫ್ಯಾಕ್ಟರಿ ತಿರುವಿನಲ್ಲಿ ನಡೆದಿದೆ.ಚಾಲಕನ ಅತಿ ವೇಗ ಘಟನೆಗೆ ಕಾರಣ ಎನ್ನಲಾಗಿದೆ.ಘಟನೆಯಲ್ಲಿ ಗೂಡ್ಸ್ ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.ಘಟನೆ ವೀಕ್ಷಿಸಿದ ಸ್ಥಳೀಯರೊಬ್ಬರು ಪ್ರತ್ಯಕ್ಷದರ್ಶಿಯೊಬ್ಬರುಅಪಘಾತದ ದೃಶ್ಯವನ್ನ ವರ್ಣಿಸಿದ್ದಾರೆ.ಗಾಯಾಳು ಚಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಶ್ರೀರಂಗಪಟ್ಟಣ ಟೌನ್ ಪೊಲೀಸ್
Read More

ಇಎಸ್ ಐ ವೈದ್ಯರ ಕ್ವಾರ್ಟರ್ಸ್ ನ ತಾರಸಿಯಲ್ಲಿ ನಿಂತ ಮಳೆ ನೀರು…ಸ್ಥಳೀಯರಿಗೆ ರೋಗರುಜಿನಗಳ ಭೀತಿ…ಪಾಲಿಕೆ ಅಧಿಕಾರಿಗಳೇ ಎಲ್ಲಿದ್ದೀರಿ…?

ಮೈಸೂರು,ನ14,Tv10 ಕನ್ನಡ ಸಾರ್ವಜನಿಕರ ಆರೋಗ್ಯ ರಕ್ಷಿಸುವ ಹೊಣೆ ವೈದ್ಯರದ್ದು.ಆದ್ರೆ ವೈದ್ಯರು ವಾಸಿಸುವ ಕ್ವಾರ್ಟರ್ಸ್ ಗಳೇ ಸಾರ್ವಜನಿಕರಿಗೆ ರೋಗಹರಡುವ ತಾಣವಾದ್ರೆ ಹೇಗೆ…?ಹೌದು ಇಂತಹ ಪರಿಸ್ಥಿತಿ ಬಂದಿರೋದು ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 4 ರ ವ್ಯಾಪ್ತಿ ವಾರ್ಡ್ ನಂಬರ್ 6 ಗೋಕುಲಂ 3 ನೇ ಹಂತದ 10 ಮುಖ್ಯರಸ್ತೆ ನಿವಾಸಿಗಳಿಗೆ. ಕೆ.ಆರ್.ಎಸ್.ಮುಖ್ಯ ರಸ್ತೆಯ ಇಎಸ್ ಐ ಆಸ್ಪತ್ರೆ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗಾಗಿ ಇಲ್ಲಿ ಕ್ವಾರ್ಟರ್ಸ್ ನಿರ್ಮಿಸಲಾಗಿದೆ.ಒಂದು ವರ್ಷದ ಹಿಂದೆ ನಿರ್ಮಿಸಿದ
Read More

ನೀರಿನ ದರ ಏರಿಕೆ…ಬಿಜೆಪಿ ಖಂಡನೆ… ಮಾಜಿ ಶಾಸಕ ಹರ್ಷವರ್ಧನ್ ನೇತೃತ್ವದಲ್ಲಿ ಪ್ರತಿಭಟನೆ…

ನಂಜನಗೂಡು,ನ14,Tv10 ಕನ್ನಡ ಕುಡಿಯುವ ನೀರಿನ ದರ ಏರಿಕೆ ಖಂಡಿಸಿ ಪ್ನಂಜನಗೂಡು ಆಡಳಿತದ ವಿರುದ್ಧ ಬಿಜೆಪಿ ಪ್ರತಿಙಟನೆ ನಡೆಸಿದೆ.ನಗರಸಭಾ ಕಚೇರಿ ಬಳಿ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.ಮಾಜಿ ಶಾಸಕ ಹರ್ಷವರ್ಧನ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.ಕುಡಿಯುವ ನೀರಿಗೆ ನೀಡುತ್ತಿರುವ ಬಿಲ್‌ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಅನಧಿಕೃತ ಬಡಾವಣೆಗಳಿಗೆ ಎನ್ಓಸಿ ನೀಡಿ ಅಧಿಕಾರಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.ತಮ್ಮಿಷ್ಟದಂತೆ ಕುಡಿಯುವ ನೀರಿನ ಬಿಲ್ ಕಳುಹಿಸುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ…
Read More

ಕಾನೂನು ಬಾಹಿರ ತಂತ್ರಜ್ಞಾನ ಬಳಕೆ…ಪೊಲೀಸ್ ಕಮೀಷನರ್ ಮೊಬೈಲ್ ನಂಬರ್ ನಕಲಿ ಮಾಡಿದ ಭೂಪ…ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಮೈಸೂರು,ನ14,Tv10 ಕನ್ನಡ ಮೈಸೂರು ನಗರ ಪೊಲೀಸ್ ಆಯುಕ್ತರ ಮೊಬೈಲ್ ನಂಬರ್ ಅನ್ನು ಕಾನೂನು ಬಾಹಿರ ತಂತ್ರಜ್ಞಾನ ಬಳಸಿ ವ್ಯಕ್ತಿಯೊಬ್ಬರಿಗೆ ಕಾಲ್ ಮರ್ಜ್ ಮಾಡುವ ಮೂಲಕ ಧಂಕಿ ಹಾಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.ಪೊಲೀಸ್ ಕಮೀಷನರ್ ಮೊಬೈಲ್ ಸಂಖ್ಯೆ ಡಿಸ್ಲ್ಲೇ ಆಗುವಂತೆ ನಕಲಿ ಕರೆ ಮಾಡಿ ಧಂಕಿ ಹಾಕಿದ ಐನಾತಿ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಮಹಮದ್ ಸೈಫ್ ಎಂಬಾತನ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.ಬನ್ನಿಮಂಟಪದ ನಿವಾಸಿ ಸಮೀರ್ ಹುಸೇನ್ ಎಂಬುವರು
Read More

ಕೆಲಸದಲ್ಲಿ ಬೇಸರ…ಕೊಡಗು ಡಿಸ್ಟ್ರಿಕ್ ಸರ್ಜನ್ ಮಿಸ್ಸಿಂಗ್…ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು…

ಮೈಸೂರು,ನ14,Tv10 ಕನ್ನಡ ಕೊಡಗು ಡಿಸ್ಟ್ರಿಕ್ ಸರ್ಜನ್ (KOIMS) ಡಾ.ನಂಜುಂಡಯ್ಯ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ.ಮೈಸೂರಿನ ಹಿನಕಲ್ ನಿವಾಸಿಯಾಗಿರುವ ಡಾ.ನಂಜುಂಡಯ್ಯ ಕೆಲಸದ ನಿಮಿತ್ತ ಕೊಡಗಿಗೆ ನವೆಂಬರ್ 11 ರಂದು ತೆರಳಿದ್ದಾರೆ.ಅಂದು ಕೆಲಸ ಮುಗಿಸಿದ ಡಾ.ನಂಜುಂಡಯ್ಯ ಮನೆಗೆ ಹಿಂದಿರುಗಿಲ್ಲ.ಪತ್ನಿ ಡಾ.ಪ್ರಿಯಾ ರವರು ಪತಿಯ ಸ್ನೇಹಿತರೊಬ್ಬರಿಗೆ ಕರೆ ಮಾಡಿದಾಗ ಕೆಲಸದಲ್ಲಿ ಬೇಸರವಾಗಿ ಹೊರಟಿದ್ದಾರೆಂದು ತಿಳಿಸಿದ್ದಾರೆ.ಅನಾಮಧೇಯ ಮಹಿಳೆಯೊಬ್ಬರು ಈ ಮಾಹಿತಿಯನ್ನ ಸ್ನೇಹಿತರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.ಕೆಲಸದಲ್ಲಿ ಬೇಸರಗೊಂಡು ನಾಪತ್ತೆಯಾದ ಪತಿಯನ್ನ ಹುಡುಕಿಕೊಡುವಂತೆ ಪತ್ನಿ ಡಾ.ಪ್ರಿಯಾ ವಿಜಯನಗರ ಪೊಲೀಸ್
Read More

ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ…ಆತ್ಮಹತ್ಯೆ ಶಂಕೆ…

ಪಿರಿಯಾಪಟ್ಟಣ,ನ14,Tv10 ಕನ್ನಡ ನೇಣುಬಿಗಿದ ಸ್ಥಿತಿಯಲ್ಲಿ ದಂಪತಿ ಶವ ಪತ್ತೆಯಾದ ಘಟನೆ ಪಿರಿಯಾಪಟ್ಟಣ ತಾಲೂಕು ತಾಲ್ಲೂಕು ದೊಡ್ಡ ಹೊನ್ನೂರು ಕಾವಲಿನ ಜಮೀನಿನ ಹಳೆಯ ಖಾಲಿ ಮನೆಯಲ್ಲಿ ಬೆಳಕಿಗೆ ಬಂದಿದೆ.ಸುರೇಶ್ (40) ಹಾಗೂ ಪತ್ನಿ ಪಲ್ಲವಿ (28) ಮೃತ ದಂಪತಿ.ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಮೃತರು ಪಿರಿಯಾಪಟ್ಟಣ ತಾಲ್ಲೂಕು ಕೊಪ್ಪ ಗ್ರಾಮದ ನಿವಾಸಿಗಳಾಗಿದ್ದಾರೆ.ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸುರೇಶ್ಉದ್ಯಮದಲ್ಲಿ ನಷ್ಟ ಹಾಗೂ ಸಾಲಗಾರರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದೆ.ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More

ಹಣಕಾಸು ವಿಚಾರ…ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ…ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ…

ಮೈಸೂರು,ನ13,Tv10 ಕನ್ನಡ ಹಣ ಕಾಸು ವಿಚಾರಕ್ಕೆ ವ್ಯಕ್ತಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದೆ.ಮೈಸೂರಿನ ಬೋಗಾದಿ ರಿಂಗ್ ರಸ್ತೆ ಯಲ್ಲಿರುವ ಟಿವಿಸ್ ಶೋರೂಮ್ ನಲ್ಲಿ ಘಟನೆ ನಡೆದಿದೆ.ಮರಟಿಕ್ಯಾತನಲ್ಲಿ ನಿವಾಸಿ ಹೊನ್ನೇಗಡ ಮೇಲೆ ಅದೇ ಗ್ರಾಮದ ಸಂದೀಪ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಸಹದ್ಯೋಗಿಗಳು ಮೊಬೈಲ್ ನಲ್ಲಿ ಚಿತ್ರೀಕರಿಸಿ ಪೊಲೀಸರಿಗೆ ನೀಡಿದ್ದಾರೆ.ಸರಸ್ವತಿಪುರಂ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದುಕೂಡಲೇ ಹಲ್ಲೆ ನಡೆಸಿದ ಸಂದೀಪ್ ನನ್ನು ಬಂದಿಸಿದ್ದಾರೆ.ಹಲ್ಲೆಗೊಳಗಾದ ಹೊನ್ನೇಗೌಡಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ…
Read More

ಉದಯಗಿರಿ ಪೊಲೀಸರ ಭರ್ಜರಿ ಬೇಟೆ…38.60 ಲಕ್ಷ ಮೌಲ್ಯದ 154 ಕೆಜಿ ಗಾಂಜಾ ವಶ…ಇಬ್ಬರು ಅಂದರ್…

ಮೈಸೂರು,ನ13,Tv10 ಕನ್ನಡ ಉದಯಗಿರಿ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ 38.60 ಲಕ್ಷ ಮೌಲ್ಯದ 154 kg 450 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರನ್ನ ಬಂಧಿಸಲಾಗಿದೆ.ಆರೋಪಿಗಳಿಂದ ಎರಡು ಮೊಬೈಲ್ ಸೀಜ್ ಮಾಡಲಾಗಿದೆ.ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಕಲ್ಯಾಣಗಿರಿಯ ಕೆಹೆಚ್ ಬಿ ಕಾಲೋನಿಯ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ ಖಚಿತ ಮಾಹಿತಿ ಆಧರಿಸಿ ಉದಯಗಿರಿ ಠಾಣೆ ಪೊಲೀಸರು ದಾಳಿ ನಡೆಸಿದಾಗ 154 ಕೆಜಿ 450 ಗ್ರಾಂ ತೂಕದ ಗಾಂಜಾ ಪತ್ತೆ
Read More

ದೇವಾಲಯದ ಗೇಟ್ ಬಿದ್ದು ಮಗು ದುರ್ಮರಣ…

ಮಂಡ್ಯ,ನ12,Tv10 ಕನ್ನಡ ದೇವಾಲಯದ ಗೇಟ್ ಬಿದ್ದು ಮಗು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಹುಂಜನಕೆರೆ ಗ್ರಾಮದಲ್ಲಿ ನಡೆದಿದೆ. ಹೆಚ್.ಎಸ್.ಜಿಷ್ಣು (5) ಮೃತ ಮಗು.ಹುಂಜನಕೆರೆ ಗ್ರಾಮದ ಚನ್ನಕೇಶವ ದೇಗುಲದಲ್ಲಿ ದುರ್ಘಟನೆ ನಡೆದಿದೆ.ನಿನ್ನೆ ಕಾರ್ತಿಕ ಮಾಸದ ಸೋಮವಾರ ಹಿನ್ನೆಲೆಕುಟುಂಬದೊಂದಿಗೆ ಜಿಷ್ಣು ಗ್ರಾಮದ ಚನ್ನಕೇಶವ ದೇಗುಲಕ್ಕೆ ತೆರಳಿದ್ದ.ಈ ವೇಳೆ ದೇಗುಲದ ಗೇಟ್ ಜಿಷ್ಣು ಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದ.ತಕ್ಷಣ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇಂದು ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.ಘಟನೆ ಸಂಬಂಧ
Read More