TV10 Kannada Exclusive

ಕೇರಳದಲ್ಲಿ ಗುಡ್ಡಕುಸಿದು ದುರಂತ…ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ…ಸಮರೋಪಾದಿಯಲ್ಲಿ ಪರಿಹಾರ ಕಾರ್ಯ…

ಕೇರಳ,ಆ1,Tv10 ಕನ್ನಡಕೇರಳ ಗುಡ್ಡ ಕುಸಿತ ದುರಂತದಲ್ಲಿಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ.ಕೇರಳ ಸರ್ಕಾರ ಅಧಿಕೃತವಾಗಿ ಘೋಷಿಸಿದ ಸಾವಿನ ಸಂಖ್ಯೆ 173.ನಾಪತ್ತೆಯಾದವರ ಸಂಖ್ಯೆ 227.ಸುರಕ್ಷಿತವಾಗಿ ರಕ್ಷಣೆಯಾದವರು 1592.ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆದಾಖಲಾದವರು ಅಂದಾಜು 200.ಮೃತ ಮಕ್ಕಳ ಸಂಖ್ಯೆ 23.ನಿನ್ನೆ ಒಂದೇ ದಿನ ಪತ್ತೆಯಾದ ಮೃತ ದೇಹಗಳು 92.ಕುಟುಂಬಸ್ಥರಿಗೆ ಹಸ್ತಾಂತರವಾದ ಮೃತ ದೇಹಗಳು 75.ಅನಧಿಕೃತ ಸಾವಿನ ಸಂಖ್ಯೆ 250 ಕ್ಕೂ ಹೆಚ್ಚು ಎಂದು ಹೇಳಲಾಗಿದೆ…
Read More

ಪ್ರವಾಹದ ನೀರಿಗೆ ಪಂಪ್ ಹೌಸ್ ಜಲಾವೃತ… ಕುಡಿಯುವ ನೀರಿಗೆ ಸಂಕಷ್ಟ…

ನಂಜನಗೂಡು,ಆ1,Tv10 ಕನ್ನಡಕೇರಳದ ವೈನಾಡು ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ.ಈಗಾಗಲೇ 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಕಪಿಲಾ ನದಿಗೆ ಬಿಡುಗಡೆಮಾಡಲಾಗಿದೆ.ಮಳೆ ಪ್ರಮಾಣ ಹೆಚ್ಚಾದ ಹಿನ್ನಲೆ ಬಿಡುಗಡೆ ಪ್ರಮಾಣ 80 ಸಾವಿರ ಕ್ಯೂಸೆಕ್ಸ್ ದಾಟುವ ಸಾಧ್ಯತೆ ಇದೆ.ನಂಜನಗೂಡಿನ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಗರಕ್ಕೆ ದಿನನಿತ್ಯ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ದೇಬೂರು ಗ್ರಾಮದ ಬಳಿ ಇರುವ ಕುಡಿಯುವ ನೀರಿನ ಸರಬರಾಜು ಪಂಪ್ ಹೌಸ್ ಸಹ
Read More

ಕಾವೇರಿ,ಕಪಿಲೆ ಆರ್ಭಟ…ಇಡೀ ಗ್ರಾಮವೇ ಜಲಾವೃತ…ಜನಜೀವನ ಅಸ್ತವ್ಯಸ್ತ…ನೆರವಿಗೆ ಧಾವಿಸಿದ ಜಿಲ್ಲಾಡಳಿತ…

ಮೈಸೂರು,ಆ1,Tv10 ಕನ್ನಡ ಕಾವೇರಿ,ಕಪಿಲೆ ಪ್ರವಾಹಕ್ಕೆ ಟಿ.ನರಸೀಪುರ ತಾಲೂಕು ತಲಕಾಡು ಹೋಬಳಿಯ ನದಿ ಪಾತ್ರದಲ್ಲಿರುವ ತಡಿಮಾಲಂಗಿ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.ಜನಜೀವನ ಅಸ್ತವ್ಯಸ್ಥವಾಗಿದೆ. ದೈನಂದಿನ ಕೆಲಸ ಕಾರ್ಯಗಳು ಸ್ಥಗಿತವಾಗಿದೆ.ಗ್ರಾಮದ ಇಡೀ ರಸ್ತೆಗಳು ಜಲಾವೃತವಾಗಿದೆ.ಗ್ರಾಮದ ಬಹುತೇಕ ಮಂದಿ ಕಾಳಜಿ ಕೇಂದ್ರ ಆಶ್ರಯ ಪಡೆದಿದ್ದಾರೆ.ಜಿಲ್ಲಾಡಳಿತ ಸಮರೋಪಾದಿಯಲ್ಲಿ ನಿರಾಶ್ರಿತರ ನೆರವಿಗೆ ಧಾವಿಸಿದೆ.ಅಲ್ಲಲ್ಲಿ ಕಾಳಜಿ ಕೇಂದ್ರಗಳನ್ನ ಸ್ಥಾಪಿಸಿ ನಿರಶ್ರಿತರಿಗೆ ನೆರವಾಗಿದ್ದಾರೆ.ನಿನ್ನೆ ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಸರ್ಕಾರದ ವಿಪ್ಪತ್ತು ನಿರ್ವಹಣೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ರವರು ಭೇಟಿ ನೀಡಿ
Read More

ಡಾ.ಬಾಬು ಜಗಜೀವನ್ ರಾಮ್ ಭವನಕ್ಕೆ ಕಾಯ್ದಿರಿಸಿದ್ದ ಜಾಗ ಒತ್ತುವರಿ…ತೆರುವುಗೊಳಿಸಿ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ…

ಮೈಸೂರು,ಜು31,Tv10 ಕನ್ನಡಒತ್ತುವರಿಯಾಗಿದ್ದ ಡಾ.ಬಾಬು ಜಗಜೀವನ್ ರಾಮ್ ಭವನ ಕಟ್ಟಡ ನಿರ್ಮಾಣಕ್ಕಾಗಿಕಾಯ್ದಿರಿಸಿದ್ದ ಜಾಗವನ್ನ ತಾಲೂಕು ಆಡಳಿತ ತೆರುವುಗೊಳಿಸಿದೆ.ಸುಮಾರು ಒಂದು ಕೋಟಿ ಬೆಲೆ ಬಾಳುವ ಜಾಗವನ್ನ ತೆರುವುಗೊಳಿಸಿ ವಶಕ್ಕೆ ಪಡೆದು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ.ಮೈಸೂರು ತಾಲೂಕು ಕಸಬ ಹೋಬಳಿ ಬಂಡೀಪಾಳ್ಯ ಗ್ರಾಮದ ಸರ್ವೆ ನಂ.60 ರಲ್ಲಿ 20 ಗುಂಟೆ ಜಮೀನು 2018-19 ರಲ್ಲಿ ಡಾ.ಜಗಜೀವನ್ ರಾಮ್ ಭವನ ನಿರ್ಮಿಸುವ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿತ್ತು.ಸದರಿ ಜಾಗವನ್ನ ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು.ಈ ಕುರಿತಂತೆ ತಹಸೀಲ್ದಾರ್
Read More

ದೈನಂದಿನ ಕಚೇರಿ ಕೆಲಸಗಳ ನಿರ್ವಹಣೆಗೆ ಅನುಮತಿ ನೀಡಿ…ಮುಡಾ ಆಯುಕ್ತರಿಂದ ಸರ್ಕಾರಕ್ಕೆ ಪತ್ರ…

ಮೈಸೂರು,ಜು31,Tv10 ಕನ್ನಡ ಮುಡಾ ವಿವಾದ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.ಅಧಿವೇಶನದಲ್ಲೂ ಸಹ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.ವಿವಾದವೊಂದು ಸಿಎಂ ಗೂ ಕಂಟಕವಾಗಿ ನಿಂತಿದೆ.ಈ ಎಲ್ಲಾ ಹಿನ್ನಲೆ ಸರ್ಕಾರ ಈ ಹಿಂದೆ ಕೆಲವು ಷರತ್ತುಗಳನ್ನ ಹೇರಿದೆ.ಯಾವುದೇ ಸಭೆಗಳನ್ನ ನಡೆಸಬಾರದು,ಕಡತಗಳ ವಿಲೇವಾರಿ ಮಾಡಬಾರದು,ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನ ಅನುಷ್ಠಾನಗೊಳಿಸಬಾರದು,ಸರ್ಕಾರದ ನಿರ್ದೇಶನವಿಲ್ಲದೆ ಯಾವುದೇ ನಿವೇಶನ ವಿಲೇವಾರಿ ಕುರಿತು ಕ್ರಮ ಜರುಗಿಸಬಾರದೆಂಬ ಷರತ್ತುಗಳನ್ನ ಹಾಕಿದೆ.ಹೀಗಾಗಿ ಮುಡಾ ದಲ್ಲಿ ದೈನಂದಿನ ಕಚೇರಿ ಕೆಲಸಗಳಿಗೆ ಅಡಚಣೆ ಆಗಿದೆ.ಈ
Read More

ಕಾಳಜಿ ಕೇಂದ್ರಕ್ಕೆ ವಿಪ್ಪತ್ತು ನಿರ್ವಹಣೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಭೇಟಿ…ನಿರಾಶ್ರಿತರ ಸಮಸ್ಯೆಗೆ ಸ್ಪಂದನೆ…

ಮೈಸೂರು,ಜು31,Tv10 ಕನ್ನಡಕಾವೇರಿ ಪ್ರವಾಹಕ್ಕೆ ಟಿ.ನರಸೀಪುರ ತಾಲೂಕಿನ ನದಿ ಪಾತ್ರದ ಜನತೆ ನಲುಗಿದ್ದಾರೆ.ಕಾವೇರಿಯ ಆರ್ಭಟಕ್ಕೆ ಸಾಕಷ್ಟು ಮಂದಿನಿರಾಶ್ರಿತರಾಗಿದ್ದಾರೆ.ಜಿಲ್ಲಾಡಳಿತ ಸಮರೋಪಾದಿಯಲ್ಲಿ ನಿರಾಶ್ರಿತರ ನೆರವಿಗೆ ಧಾವಿಸಿದೆ.ಅಲ್ಲಲ್ಲಿ ಕಾಳಜಿ ಕೇಂದ್ರಗಳನ್ನ ಸ್ಥಾಪಿಸಿ ನಿರಶ್ರಿತರಿಗೆ ನೆರವಾಗಿದ್ದಾರೆ.ಟಿ.ನರಸೀಪುರ ತಾಲೂಕಿನ ತಲಕಾಡು ಹೋಬಳಿ ತಡಿಮಾಲಂಗಿ ಗ್ರಾಮದಲ್ಲಿ ಸ್ಥಾಪನೆಯಾದ ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಇಂದು ಸರ್ಕಾರದ ವಿಪ್ಪತ್ತು ನಿರ್ವಹಣೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ರವರು ಭೇಟಿ ನೀಡಿ ಸಮಸ್ಯೆಗಳನ್ನ ಆಲಿಸಿದ್ದಾರೆ.ನಿರಶ್ರಿತರಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.ರಶ್ಮಿ ಮಹೇಶ್ ರವರಿಗೆ
Read More

ಬಿಡಾಡಿ ದನಗಳು ಪಿಂಜರಾಪೋಲ್ ವಶಕ್ಕೆ…ಪಾಲಿಕೆ ನಿರ್ಧಾರ…ಕಾರ್ಯಾಚರಣೆ ಯಾವಾಗ…?

ಮೈಸೂರು,ಆ1,Tv10,ಕನ್ನಡಬಿಡಾಡಿ ದನಗಳ ಉಪಟಳದಿಂದ ಸಂಚಾರ ಮುಕ್ತಗೊಳಿಸಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.ರಸ್ತೆಗಳ ಮಧ್ಯೆ ನಿಂತ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟುಮಾಡುವ ದನಗಳನ್ನ ವಶಕ್ಕೆ ಪಡೆದು ದಂಡ ವಿಧಿಸಿ ನಂತರ ಎಚ್ಚೆತ್ತುಕೊಳ್ಳದಿದ್ದಲ್ಲಿ ಪಿಂಜರಾಪೋಲ್ ವಶಕ್ಕೆ ನೀಡಲು ನಿನ್ನೆ ನಡೆದ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ಆದರೆ ಈ ಕಾರ್ಯಾಚರಣೆ ಎಂದಿನದ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.ಯಾಕಂದ್ರೆ ಈ ಹಿಂದೆಯೂ ಪಾಲಿಕೆ ಅಧಿಕಾರಿಗಳು ಇಂತಹ ಹೇಳಿಕೆಗಳನ್ನ ನೀಡಿ ಕೇವಲ ಹೇಳಿಕೆಗೆ ಮಾತ್ರ ಸೀಮಿತವಾದದ್ದು ಸಾರ್ವಜನಿಕರಿಗೆ
Read More

ಕಾವೇರಿ ಮಾತೆಗೆ ಸಿಎಂ ಸಿದ್ದರಾಮಯ್ಯ ರಿಂದ ಬಾಗಿನ ಸಮರ್ಪಣೆ…

ಮಂಡ್ಯ,ಜು29,Tv10 ಕನ್ನಡ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೃಷ್ಣರಾಜಸಾಗರ ಜಲಾಶಯವು ತುಂಬಿರುವ ಶುಭ ಸಂದರ್ಭದಲ್ಲಿ ಕಾವೇರಿ ಮಾತೆಯ ಪೂಜೆ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಅದ್ದೂರಿಯಿಂದ ನೆರವೇರಿತು.ಮುಖ್ಯಮಂತ್ರಿ ಸಿದ್ದರಾಮಯ್ಯ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್. ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಸೇರಿದಂತೆ ಸಚಿವರು, ಶಾಸಕರು, ಅಧಿಕಾರಿಗಳು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಹಾಲು. ಪುಷ್ಪ ಸಮರ್ಪಿಸಿ ಬಾಗಿನ ಸಮರ್ಪಣೆ ಮಾಡಿದರು. ನಂತರ ವೇದಿಕೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ
Read More

ಕೆಆರ್ ಎಸ್ ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ…ನದಿಪಾತ್ರದ ಜನತೆಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ…

ಮಂಡ್ಯ,ಜು27,Tv10 ಕನ್ನಡಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆ ಕೆ.ಆರ್.ಎಸ್ ಜಲಾಶಯದಿಂದ 1,30,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತದೆ.ಹೀಗಾಗಿಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿನ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ಹಾಗೂ ರೈತರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಡಾ ಕುಮಾರ ಅವರು ಮನವಿ ಮಾಡಿದ್ದಾರೆ…
Read More

ಮುಡಾ ನಗರ ಯೋಜಕ ಸದಸ್ಯ ಶೇಷ ಅಮಾನತು ಆದೇಶ ರದ್ದು…ನಗರಾಭಿವೃದ್ದಿ ಕಾರ್ಯದರ್ಶಿಗೆ 5 ಸಾವಿರ ದಂಡ…

ಮೈಸೂರು,ಜು27,Tv10 ಕನ್ನಡನಕ್ಷೆ ಅನುಮೋದನೆ ಹಾಗೂ ಇನ್ನಿತರ ಕೆಲಸಗಳಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಆರೋಪದ ಮೇಲೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಗರ ಯೋಜಕ ಸದಸ್ಯ ಶೇಷ ರವರ ಅಮಾನತು ಆದೇಶವನ್ನ ಕರ್ನಾಟಕ ಆಡಳಿತ ನ್ಯಾಯಮಂಡಳಿ ವಜಾಗೊಳಿಸಿದೆ.ಈ ಸಂಭಂಧ ನಿಯಮಾನುಸಾರ ಪರಿಶೀಲನೆ ನಡೆಸದೆ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನಲೆ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗೆ ಕೆಎಟಿ 5 ಸಾವಿರ ದಂಡ ವಿಧಿಸಿದೆ.ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಗರ ಯೋಜಕ ಸದಸ್ಯರಾಗಿದ್ದ ಆರ್.ಶೇಷ ರವರು ನಕ್ಷೆ
Read More