TV10 Kannada Exclusive

ಮೖಸೂರಿನಲ್ಲಿ ಯುವಕನ ಕೊಲೆ…5 ಮಂದಿಯ ತಂಡದಿಂದ ಕೃತ್ಯ…ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ…

ಮೈಸೂರಿನಲ್ಲಿ ಯುವಕನ ಬರ್ಬರ ಕೊಲೆಯಾಗಿದೆ.ವರುಣ ಗ್ರಾಮದ ಹೊರವಲಯದ ಹೋಟೆಲ್ ಬಳಿ ಕೃತ್ಯ ನಡೆದಿದೆ.ಕಾರ್ತಿಕ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಕಾರ್ತಿಕ್ ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ.ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.5 ಜನರ ತಂಡದಿಂದ ದುಷ್ಕೃತ್ಯ ನಡೆದಿದೆ.ನೆನ್ನೆ ತಡರಾತ್ರಿ ನಡೆದಿರುವ ಕೊಲೆ.ಕೊಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊಲೆಯಾದ ಕಾರ್ತಿಕ್ ರೌಡಿ ಶೀಟರ್ ಎಂದು ಹೇಳಲಾಗಿದೆ…
Read More

ಮೈಸೂರು ಸಿನಿಮಾ ಸೊಸೈಟಿಯ ಅಂತರಾಷ್ಟ್ರೀಯ ಚಿತ್ರೋತ್ಸವದ ಪರಿದೃಶ್ಯ ನಾಲ್ಕನೇ ಆವೃತ್ತಿಯ ಬ್ರೋಷರ್ ಬಿಡುಗಡೆ…ಕಿರುಚಿತ್ರ,ಸಾಕ್ಷ್ಯಚಿತ್ರಗಳಿಗೆ ಆಹ್ವಾನ…

ಮೈಸೂರು,ಏ28,Tv10 ಕನ್ನಡ ಮೈಸೂರು ಸಿನಿಮಾ ಸೊಸೈಟಿಯ ಪ್ರಮುಖ ಚಿತ್ರೋತ್ಸವವಾದ ಪರಿದೃಶ್ಯ ನಾಲ್ಕನೇ ಆವೃತ್ತಿಯ ಬ್ರೋಷರ್ ಬಿಡುಗಡೆ ಮಾಡಲಾಯಿತು. 6/02/2026 ರಿಂದ 8/02/2026 ವರೆಗೆ ನಡೆಯುವ ಚಿತ್ರೋತ್ಸವವನ್ನ ವಿದ್ಯಾರ್ಥಿ ಮತ್ತು ವೃತ್ತಿಪರ ವಿಭಾಗಗಳಿಗೆ ಆಯೋಜಿಸಲಾಗಿದೆ.ಪರಿದೃಶ್ಯ ನಾಲ್ಕನೇ ಆವೃತ್ತಿಯ ಚಿತ್ರೋತ್ಸವಕ್ಕೆ ಕಿರುಚಿತ್ರ ಮತ್ತು ಸಾಕ್ಷ ಚಿತ್ರಗಳನ್ನು ಆಹ್ವಾನಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಅಧ್ಯಕ್ಷ ಚೇತನ್ ಎಂ ತಿಳಿಸಿದರು‌.ಈ ಸ್ಪರ್ಧೆಯಲ್ಲಿ ಭಾಗವಹಿಸಲು ಚಿತ್ರಗಳು 1/01/2024ರ ನಂತರ ಚಿತ್ರೀಕರಣಗೊಂಡಿರಬೇಕು.ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಕಿರುಚಿತ್ರ ಅತ್ಯುತ್ತಮ ನಿರ್ದೇಶಕ,
Read More

ಹುಲಿ ದಾಳಿ…ಹಸು ಸಾವು…

ಹುಣಸೂರು,ಜು14,Tv10 ಕನ್ನಡ ಹುಲಿದಾಳಿಗೆ ಹಸು ಬಲಿಯಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಕೆ.ಜೆ.ಹಬ್ಬನಕುಪ್ಪೆಯಲ್ಲಿ ನಡೆದಿದೆ.ಅಲ್ಲದೆಗೌರಿಪುರದಲ್ಲಿ ಹುಲಿ ದಾಳಿಯಿಂದ ಹಸುವೊಂದು ಗಾಯಗೊಂಡಿದೆ.ನಾಗರಹೊಳೆ ಉದ್ಯಾನದ ಬಳಿಯ ಕಚುವಿನ ಹಳ್ಳಿಯ ರುಕ್ಮಿಣಿ ಶ್ರೀನಿವಾಸರಿಗೆ ಸೇರಿದ ಹಸು ಸಾವನ್ನಪ್ಪಿದರ.ನಂಜಾಪುರ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಪಕ್ಕದ ಕುರುಚಲು ಅರಣ್ಯ ಪ್ರದೇಶದಲ್ಲಿ ಹಾಗೂನಂಜಾಪುರದ ರೈತ ನಟರಾಜ್‌ರಿ ಎಂಬುವವರಿಗೆ ಸೇರಿದ ಹಸುವಿಗೆ ಗಾಯವಾಗಿದೆ.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…
Read More

ಹಿರಿಯ ಪತ್ರಿಕೋದ್ಯಮಿ…ಮೈಸೂರು ಮಿತ್ರ ಸಂಸ್ಥಾಪಕ…ಡಾ.ಕೆ.ಬಿ.ಗಣಪತಿ ನಿಧನ…

ಮೈಸೂರು,ಜು13,Tv10 ಕನ್ನಡ ಹಿರಿಯ ಪತ್ರಕರ್ತ ಹಾಗೂ ಪತ್ರಿಕೋದ್ಯಮಿ ಮತ್ತು ಪತ್ರಿಕಾರಂಗದ ಹಲವು ಪ್ರಶಸ್ತಿಗಳ ಒಡೆಯ ಡಾ.ಕೆ.ಬಿ.ಗಣಪತಿ(85) ಇಂದು ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ.ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಕೆ.ಬಿ.ಗಣಪತಿ ರವರು ನಿಧನ ಹೊಂದಿದ್ದಾರೆ.ಮೈಸೂರು ಸ್ಥಳೀಯ ಪತ್ರಿಕೆಗಳಲ್ಲಿ ನಂಬರ್ ಒನ್ ಸ್ಥಾನ ಪಡೆದು ಜನಮಾನಸದಲ್ಲಿ ಹೆಗ್ಗಳಿಕೆಗೆ ಪಾತ್ರವಾದ ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ಸಂಸ್ಥಾಪಕರಾಗಿದ್ದ ಡಾ.ಕೆ.ಬಿ.ಗಣಪತಿ ರವರು ಅಪಾರ ಸ್ನೇಹಿತರು,ಹಿತೈಷಿಗಳು,ಬಂಧುಗಳು ಹಾಗೂ ಕುಟುಂಬವರ್ಗವನ್ನ ಅಗಲಿದ್ದಾರೆ.ಇಂದು ಮಧ್ಯಾಹ್ನ
Read More

3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತು… ಅಪರಾಧಿಗೆ ಜೀವಾವಧಿ ಶಿಕ್ಷೆ…

ಮಂಡ್ಯ,ಜು12,Tv10 ಕನ್ನಡ ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನಲೆ ಅಪರಾಧಿಗೆ ಮಂಡ್ಯ ಜಿಲ್ಲಾ ಜಿಲ್ಲಾ ಸತ್ರ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ತೀರ್ಪು ಪ್ರಕಟವಾಗಿದೆ.53 ವರ್ಷದ ಶಿವಣ್ಣ ಎಂಬಾತ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ.2023 ಡಿಸೆಂಬರ್ 11ರಂದು ನಡೆದಿದ್ದ ಪ್ರಕರಣ.3 ವರ್ಷದ ಬಾಲಕಿ ಮೇಲೆ ಎರಗಿದ್ದ ಕಾಮುಕ ಶಿವಣ್ಣ.ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮ ಒಂದರಲ್ಲಿ ಘಟನೆ ನಡೆದಿತ್ತು.ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನ ಪುಸಲಾಯಿಸಿ ಕರೆದುಕೊಂಡು
Read More

ಅಸಲಿ ಇದ್ದರೂ ನಕಲಿ ವ್ಯಕ್ತಿಗಳಿಂದ ಆಸ್ತಿ ಕಬಳಿಸಲು ಸಂಚು…ಐವರ ವಿರುದ್ದ ಹಿರಿಯ ಉಪನೊಂದಣಾಧಿಕಾರಿಗಳಿಂದ ಪ್ರಕರಣ ದಾಖಲು…

ಮೈಸೂರು,ಜು10,Tv10 ಕನ್ನಡ ಅಸಲಿ ವ್ಯಕ್ತಿ ಇದ್ದರೂ ನಕಲಿ ವ್ಯಕ್ತಿಗಳು ಆಸ್ತಿಯನ್ನ ಕಬಳಿಸಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಮೈಸೂರು ಪೂರ್ವ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನಡೆದಿದೆ.ಸಂಚು ರೂಪಿಸಿ ಸಿಕ್ಕಿಬಿದ್ದ ಐದು ಭೂಗಳ್ಳರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ಉಪನೊಂದಣಾಧಿಕಾರಿ ಹೆಚ್.ಎಲ್.ನಾಗರಾಜು ರವರು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನ ನೆಹರೂ ನಗರದ ನಿವಾಸಿಗಳಾದ ಉಮೇರಾಖಾನಂ,ಸೈಯದ್ ಇರ್ಫಾನ್,ಸಲ್ಮಾ ಸುಲ್ತಾನ,ಅಕ್ರಮ್ ಹಾಗೂ ಜೋಹರ್ ಆಲಮ್ ವಿರುದ್ದ ಪ್ರಕರಣ ದಾಖಲಾಗಿದೆ.ಗಾಯಿತ್ರಿಪುರಂ ನಿವಾಸ
Read More

ಹೃದಯ ಅಪಘಾತದಿಂದ ಗದ್ದಿಗೆ ಅರ್ಚಿಕರು ಸಾವು

ಹುಣಸೂರು ತಾಲೂಕಿನ ಗದ್ದಿಗೆ ಚಂಡುಗಣ್ಣ ಸ್ವಾಮಿ ಎಂಬ ಹೆಸರಿನ ಪ್ರಸಿದ್ದ ದೇವಸ್ಥಾನದಲ್ಲಿ ಕೆಂಡಗಣ್ಣ ಸ್ವಾಮಿ ಎಂಬ ಅರ್ಚಕರು ಬೆಳಗಿನ ಜಾವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತಯಾರಿ ನಡೆಸುವ ವೇಳೆ ಹೃದಯ ಅಪಘಾತದಿಂದ ಸಾವನಪ್ಪಿರುವುದು 4:30. ರಲ್ಲಿ ನಡೆದಿದೆ
Read More

ಹೃದಯಾಘಾತದಿಂದ ಯುವಕ ಸಾವು…

ಮೈಸೂರು,ಜು10,Tv10 ಕನ್ನಡ ಮೈಸೂರಿನಲ್ಲಿ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ.ದರ್ಶನ್ ಚೌದ್ರಿ (29) ಸಾವನ್ನಪ್ಪಿದ ಯುವಕ.ಮೈಸೂರಿನ ಚಾಮರಾಜ ಮೊಹಲ್ಲಾದ ನಿವಾಸಿಯಾಗಿದ್ದುದೇವರಾಜ ಮೊಹಲ್ಲಾದಲ್ಲಿ ಬಣ್ಣದ ಅಂಗಡಿ ಮಾಲೀಕನಾಗಿದ್ದ.ನೆನ್ನೆ ರಾತ್ರಿ ದಿಢೀರ್ ಎದೆ ನೋವು ಕಾಣಿಸಿಕೊಂಡಿದೆ.ತಕ್ಷಣ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಮಾರ್ಗಮಧ್ಯೆ ದರ್ಶನ್ ಸಾವನ್ನಪ್ಪಿದ್ದಾನೆ…
Read More

ಆರ್.ಟಿ.ಐ.ಮಾಹಿತಿ ಪತ್ರಿಕೆ ಅಸ್ತಿತ್ವಕ್ಕೆ…ಭಾಷ್ಯಂ ಸ್ವಾಮೀಜಿ ರವರಿಂದ ಬಿಡುಗಡೆ…

ಮೈಸೂರು,ಜು7,Tv10 ಕನ್ನಡ ಮೈಸೂರಿನ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ಇಂದು ಆರ್.ಟಿ.ಐ.ಮಾಹಿತಿ ಪತ್ರಿಕೆ ಬಿಡುಗಡೆ ಮಾಡಲಾಯಿತು.ದೇವಾಲಯದ ಸಂಸ್ಥಾಪಕರಾದ ಪ್ರೊ.ಭಾಷ್ಯಂ ಸ್ವಾಮೀಜಿ ರವರು ಬಿಡುಗಡೆ ಮಾಡಿದರು.ಈ ವೇಳೆ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸ್ ಗುರೂಜಿ,ಪಿಜಿಆರ್ ಎಸ್ಎಸ್ ಪಂಚಾಯತ್ ಗ್ರಾಮೀಣ ಅಭಿವೃದ್ದಿ ರೈತರ ಸೇವಾ ಸಮಿತಿ ರಾಜ್ಯಾಧ್ಯಕ್ಷರಾದ ಯಾದವ್ ಹರೀಶ್,ಉಪಾಧ್ಯಕ್ಷರಾದ ಸತೀಶ್,ಖಜಾಂಚಿ ಮಂಜುಳಾ,ಪ್ರಧಾನ ಕಾರ್ಯದರ್ಶಿ ರವೀಂದ್ರ,ಸಹ ಕಾರ್ಯದರ್ಶಿ ಪಲ್ಲವಿ,ಸಂಘಟನಾ ಕಾರ್ಯದರ್ಶಿ ಝಾನ್ಸಿರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು…
Read More

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ ಮಹಿಳೆ ಮೇಲೆ FIR…

ಮೈಸೂರು,ಜು6,Tv10 ಕನ್ನಡ ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಸಭ್ಯ ಹಾಗೂ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ರಾಪಿನ್ ಕಂಪನಿಗೆ ಸೇರಿದ ಸಾಮಾಜಿಕ ಜಾಲತಾಣದಲ್ಲಿ ಮೃಣಾಲಿನಿ ಮನೋಹರ್ ಎಂಬುವರು ಪೋಸ್ಟ್ ಮಾಡಿದ್ದಾರೆಂದು ನೊಂದ ಉದ್ಯೋಗಿ ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ.ವ್ಯಕ್ತಿಯೊಬ್ಬರ ಜೊತೆ ಸಂಭಂಧ ಇದೆ ಎಂದು ಸುಳ್ಳು ಮಾಹಿತಿ ಹಾಕಿದ್ದಾರೆ.ಫೇಸ್ ಬುಕ್ ಮೆಸೆಂಜರ್ ನಲ್ಲಿ ಕ್ಕೈಂಟ್ಸ್ ಗಳನ್ನ ಗುರಿಯಾಗಿಸಿಕೊಂಡು ನನ್ನ ವಿರುದ್ದ ಅಶ್ಲೀಲವಾಗಿ ಕೆಟ್ಟಪದಗಳನ್ನ ಬಳಸಿ
Read More