TV10 Kannada Exclusive

ಅನಿವಾಸಿ ಭಾರತೀಯರಿಂದ ಗೀತ ಪಠಣ…ಗಣಪತಿ ಶ್ರೀಗಳ ಸಾನಿಧ್ಯದಲ್ಲಿ ಕಾರ್ಯಕ್ರಮ…

ಕುರುಕ್ಷೇತ್ರ,ಡಿ25,Tv10 ಕನ್ನಡ ಹರಿಯಾಣ ರಾಜ್ಯದ ಕುರುಕ್ಷೇತ್ರದಲ್ಲಿ ನೂರಾರು ಅನಿವಾಸಿ ಭಾರತೀಯರು ಸಂಪೂರ್ಣ ಗೀತ ಪಠನ ನಡೆಸಿದರು. ಭಗವದ್ಗೀತೆಯ ಜನ್ಮಸ್ಥಳವಾದ ಕುರುಕ್ಷೇತ್ರದಲ್ಲೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗುರು ಮಹೋತ್ಸ್‌ವ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಅಭೂತಪೂರ್ವ ಯಶಸ್ವಿಗೊಳಿಸಿದರು.ಅಮೇರಿಕಾ, ಕೆನಡಾ, ಟ್ರಿನಿಡಾಡ್ ಮತ್ತು ಟೊಬಾಗೊ, ಯುಕೆ, ಜರ್ಮನಿ, ಸ್ವಿಟ್ಜರ್ಲೆಂಡ್, ಯುಎಇ, ಕುವೈತ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ 400 ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಗುರು ಮಹೋತ್ಸ್‌ವ ಸ್ಮರಣೆಯೊಂದಿಗೆ ಸಂಪೂರ್ಣ ಗೀತೆಯನ್ನು ಪಠಿಸಿ ಅನನ್ಯ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
Read More

ಭಾಷ್ಯಂ ಸ್ವಾಮೀಜಿ ರಿಂದ ನೂತನ ಕ್ಯಾಲೆಂಡರ್ ಬಿಡುಗಡೆ…

ಮೈಸೂರು,ಡಿ25,Tv10 ಕನ್ನಡ ಮೈಸೂರಿನ ವೇದಮಾತೆ ಶ್ರೀ ಗಾಯತ್ರಿ ವೃಂದ ವತಿಯಿಂದ ಹೊರತರಲಾಗಿರುವ 2025 ನೇ ಸಾಲಿನ ನೂತನ ಕ್ಯಾಲೆಂಡರ್ ಅನ್ನು ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹ ದೇವಾಲಯದ ಆವರಣದಲ್ಲಿ ಸಂಸ್ಥಾಪಕರಾದ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರು ಇಂದು ಬಿಡುಗಡೆ ಮಾಡಿದರು.ಈ ವೇಳೆ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್,ವೃಂದದ ಅಧ್ಯಕ್ಷರಾದ ದಿನೇಶ್,ಕಾರ್ಯದರ್ಶಿ ಮುರುಳಿ, ಮಧುಸೂದನ್ವಾಸು ಗುರುನಾಥ್ ಇನ್ನಿತರರು ಉಪಸ್ಥಿತರಿದ್ದರು…
Read More

ಲಾಲ್ ಬಾಗ್ ತೋಟದ ಸುತ್ತ ತಂತಿ ಬೇಲಿ ನಿರ್ಮಿಸಿ…ಸಿಎಂ ಗೆ ನಟ,ನಿರ್ದೇಶಕ ಅನಿರುದ್ದ ಜತಕರ ಮನವಿ…

ಬೆಂಗಳೂರು,ಡಿ25,Tv10 ಕನ್ನಡ ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಲಾಲ್ ಬಾಗ್ ತೋಟದ ಸುತ್ತ ನಿರ್ಮಿಸಿರುವ ಗೋಡೆಗಳ ಬದಲಿಗೆ ತಂತಿ ಬೇಲಿ ನಿರ್ಮಿಸುವಂತೆ ಸಿಎಂ ಸಿದ್ದರಾಮಯ್ಯ ರವರಿಗೆ ನಟ,ನಿರ್ದೇಶಕ ಅನಿರುದ್ದ ಜತಕರ ಪತ್ರ ನೀಡಿ ಮನವಿ ಮಾಡಿದ್ದಾರೆ. ಸಿಲಿಕಾನ್ ಸಿಟಿಯ ಲಾಲ್ ಬಾಗ್ ಉದ್ಯಾನವನ,ಪರಿಸರ ಪ್ರೇಮಿಗಳಿಗೆ,ಪ್ರಕೃತಿ ಸೌಂದರ್ಯ ಸವಿಯುವ ಜನರಿಗೆ ಆಕರ್ಷಕ ಕೇಂದ್ರ ಬಿಂದು.ಪ್ರಸ್ತುತ ಲಾಲ್ ಬಾಗ್ ಸುತ್ತಲೂ ನಿರ್ಮಿಸಿರುವ ಗೋಡೆಗಳು ಹಾಗೂ ಅದರ ಮೇಲೆ ಮೂಡಿಸಲಾದ ಅಂದವಾದ ಬಣ್ಣ ಬಣ್ಣದ
Read More

ಚಾಕುವಿನಿಂದ ಇರಿದು ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ…ಆರೋಪಿಗಳಿಗಾಗಿ ಶೋಧ…

ಮೈಸೂರು,ಡಿ23,Tv10 ಕನ್ನಡ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆಮೈಸೂರು ಹೊರವಲಯದ ಬೆಲವತ್ತ ಗ್ರಾಮದಲ್ಲಿ ನಡೆದಿದೆ.ಹನುಮಂತು (57) ಕೊಲೆಯಾದ ವ್ಯಕ್ತಿ.ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದ್ವೇಷ ಹಿನ್ನೆಲೆ ಕೊಲೆ ನಡೆದಿರುವ ಶಂಕೆ.ನೆನ್ನೆ ರಾತ್ರಿ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಂತಕರು ಕೃತ್ಯ ಎಸಗಿದ್ದಾರೆ.ರಿಯಲ್ ಎಸ್ಟೇಟ್ ವೃತ್ತಿ ನಡೆಸುತ್ತಿದ್ದ ಹನುಮಂತುತಮ್ಮ ಜಮೀನು ಮಾರಾಟ ಸಂಬಂಧ ಕೆಲವರೊಂದಿಗೆ ವೈಮನಸ್ಯ ಹೊಂದಿದ್ದರೆಂದು ಹೇಳಲಾಗಿದೆ.ಆರೋಪಿಗಳ ಪತ್ತೆಗೆಮೇಟಗಳ್ಳಿ ಠಾಣೆ ಪೊಲೀಸರು ಜಾಲ ಬೀಸಿದ್ದಾರೆ…
Read More

ಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕನ ಅನುಚಿತ ವರ್ತನೆ…ಮಹಿಳೆಯ ವಿಡಿಯೋ ಚಿತ್ರೀಕರಣ ಆರೋಪ…ಡಿಪೋ ಮ್ಯಾನೇಜರ್ ಗೆ ದೂರು…

ನಂಜನಗೂಡು,ಡಿ21,Tv10 ಕನ್ನಡ ಮಹಿಳಾ ಪ್ರಯಾಣಿಕರೊಂದಿಗೆ ಕೆಎಸ್ ಆರ್ ಟಿಸಿ ಬಸಿ ನಿರ್ವಾಹಕನ ವಿರುದ್ದ ಸಂಘಟಕರು ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.ನಂಜನಗೂಡಿನಿಂದ ಚಿಕ್ಕಬರಗಿ ಗ್ರಾಮಕ್ಕೆ ತೆರಳುವ ಬಸ್ ಸಂಖ್ಯೆ KA59 F 0879 ನ ಚಾಲಕ ಹಾಗೂ ನಿರ್ವಾಹಕ ಮಂಜುನಾಥ್ ವಿರುದ್ದ ದೂರು ನೀಡಲಾಗಿದೆ.ಮಹಿಳೆಯೊಬ್ಬರೊಂದಿಗೆ ಮಾತನಾಡುವಾಗ ಅಶ್ಲೀಲ ಪದ ಬಳಸಿ ಆಕೆಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂದು ಆರೋಪಿಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ದಿನಾಂಕ 20-12-2024 ರಂದು
Read More

ಸರೋಜಿನಿ ಮಹಿಷಿ ವರದಿ ಶೀಘ್ರ ಅನುಷ್ಠಾನವಾಗಲಿ…87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಆಗ್ರಹ…

ಮಂಡ್ಯ,ಡಿ20,Tv10 ಕನ್ನಡ ಸಕ್ಕರೆ ನಾಡಿನಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೊಳಗಿದೆ.ಎಲ್ಲೆಲ್ಲೂ ಕನ್ನಡ ಕಂಪು ಪಸರಿಸುತ್ತಿದೆ.ಸಾಹಿತ್ಯ ಸಮ್ಮೇಳನವನ್ನ ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷರಾದ ಗೊ.ರೂ.ಚೆನ್ನಬಸ್ಸಪ್ಪ ಕನ್ನಡ ಭಾಷೆಯ ರಕ್ಷಣೆ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ಕಿವಿಮಾತು ಹೇಳಿದ್ದಾರೆ.ಭಾಷಣದ ಉದ್ದಕ್ಕೂ ಕನ್ನಡದ ಉಳಿವು ಹಾಗೂ ಏಳಿಗೆ ಬಗ್ಗೆ ಸಲಹೆಗಳನ್ನ ನೀಡಿದ್ದಾರೆ.ಕನ್ನಡವು ಕಾವ್ಯ, ಕವನ, ನಾಟಕ, ಕಾದಂಬರಿ, ವ್ಯಾಕರಣ ಮುಂತಾದ ಪರಂಪರೆಯ ಸಾಹಿತ್ಯಕ್ಕೆ ಸೀಮಿತವಾಗಿ ಉಳಿದಿಲ್ಲ.ವಿಜ್ಞಾನ, ತಂತ್ರಜ್ಞಾನ, ಕಾನೂನು, ವೈದ್ಯಕೀಯ ಮುಂತಾದ
Read More

ಭೂಗಳ್ಳರಿಗೆ ಶಾಕ್…25 ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನು ವಶಕ್ಕೆ…ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ…

ಮೈಸೂರು,ಡಿ20,Tv10 ಕನ್ನಡ ನಕಲಿ ದಾಖಲೆ ಸೃಷ್ಟಿಸಿಕೊಂಡು ಸರ್ಕಾರಿ ಜಮೀನು ಕಬಳಿಸಿದ್ದ ಭೂಗಳ್ಳರಿಗೆ ಜಿಲ್ಲಾಡಳಿತ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ.25 ಕೋಟಿ ಬೆಲೆ ಬಾಳುವ 5 ಎಕ್ರೆ 20 ಗುಂಟೆ ಜಮೀನನ್ನ ವಶಪಡಿಸಿಕೊಳ್ಳಲಾಗಿದೆ.ಜಿಲ್ಲಾಧಿಕಾರಿಗಳ ನ್ಯಾಯಾಲಯದ ಪ್ರಕರಣ ಸಂಖ್ಯೆ RP-64/2024 ದಿನಾಂಕ 03-12-2024 ರ ತೀರ್ಪಿನಂತೆ ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಇಂದು ತಮ್ಮ ಸಿಬ್ಬಂದಿಗಳ ಸಮೇತ ಕಾರ್ಯಾಚರಣೆ ನಡೆಸಿ ಜಮೀನನ್ನ ವಶಕ್ಕೆ ಪಡೆದಿದ್ದಾರೆ.ಮೈಸೂರು ತಾಲೂಕು, ಜಯಪುರ ಹೋಬಳಿ, ಕೇರ್ಗಳ್ಳಿ ಗ್ರಾಮದ ಸರ್ವೆ ನಂಬರ್ 60
Read More

ಅಪರಾಧ ತಡೆ ಮಾಸಾಚರಣೆ…ಮಹಿಳೆಯರಿಗೆ ಅರಿವು…ಅಪರಾಧಗಳ ಕುರಿತು ಕಾರ್ಯಾಗಾರ…

ಮೈಸೂರು,ಡಿ19,Tv10 ಕನ್ನಡ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮೈಸೂರು ನಗರ ಪೊಲೀಸ್ ವತಿಯಿಂದ ವಿಜಯನಗರ ಉಪವಿಭಾಗ ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಅಪರಾಧಗಳ ಕುರಿತ ಕಾನೂನು ಕಾರ್ಯಾಗಾರ ಏರ್ಪಡಿಸಲಾಗಿತ್ತು.ಕೆ.ಆರ್.ಎಸ್.ರಸ್ತೆಯಲ್ಲಿರುವ ಗೋವಿಂದರಾವ್ ಮೆಮೋರಿಯಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ನೂರಾರು ಮಹಿಳೆಯರು ಕಾನೂನಿನ ಬಗ್ಗೆ ಮಾಹಿತಿ ಪಡೆದುಕೊಂಡರು.ಮಹಿಳೆಯರ ವಿರುದ್ದ ನಡೆಯುತ್ತಿರುವ ಶೋಷಣೆ,ದೌರ್ಜನ್ಯ,ಲೈಂಗಿಕ ಕಿರುಕುಳ,ವರದಕ್ಷಿಣೆ ಕಿರುಕುಳ,ಆನ್ ಲೈನ್
Read More

ಮಲಿನವಾಗುತ್ತಿರುವ ಹುಲ್ಲಹಳ್ಳಿ ನಾಲೆ ನೀರು…ಕಾವೇರಿ ನೀರಾವರಿ ನಿಗಮದಿಂದ ದೇಬೂರು ಗ್ರಾ.ಪಂ. ಪಿಡಿಓ ಗೆ ಪತ್ರ…

ನಂಜನಗೂಡು,ಡಿ18,Tv10 ಕನ್ನಡ ನಂಜನಗೂಡು ತಾಲೂಕು ದೇಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹುಲ್ಲಹಳ್ಳಿ ನಾಲೆಯ ಕೆಕವು ಭಾಗಗಳಲ್ಲಿ ನಾಲೆ ನೀರು ಮಲಿನವಾಗುತ್ತಿದೆ.ಕೆಲವು ಹಳ್ಳಿಗಳಿಂದ ಬರುತ್ತಿರುವ ಚರಂಡಿ ನೀರು ನಾಲೆಗೆ ಸೇರುತ್ತಿರುವುದರಿಂದ ಮಲಿನವಾಗುತ್ತಿದೆ.ಅಲ್ಲದೆ ಸರ್ವಿಸ್ ರಸ್ತೆಗಳ ಇಕ್ಕೆಲಗಳಲ್ಲಿ ತ್ಯಾಜ್ಯಗಳನ್ನ ಸುರಿಯಲಾಗುತ್ತಿದೆ.ಹೀಗಾಗಿ ಪರಿಸರ,ನೀರು, ಅಂತರ್ಜಲ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.ಹೀಗಾಗಿ ಕೂಡಲೇ ಸ್ವಚ್ಛತೆಗೆ ಆಧ್ಯತೆ ನೀಡುವಂತೆ ಪಿಡಿಓ ಗೆ ಕಾವೇರಿ ನೀರಾವರಿ ನಿಗಮದಿಂದ ಪತ್ರ ರವಾನೆಯಾಗಿದೆ.ಕಾವೇರಿ ನೀರಾವರಿ ಅಧಿನಿಯಮ 1965 ರ
Read More

ಕೇಂದ್ರ ಕಾರಾಗೃಹ ಆವರಣದಲ್ಲಿ ನಿಷೇಧಿತ ವಸ್ತುಗಳು ಪತ್ತೆ…ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಮೈಸೂರು,ಡಿ18,Tv10 ಕನ್ನಡ ಮೈಸೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ನಿಷೇಧತ ವಸ್ತುಗಳು ಪತ್ತೆಯಾಗಿದೆ.ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕಪ್ಪು ಬಣ್ಣದ ಬಟ್ಟೆಯಿಂದ ಸುತ್ತಿದ್ದ ಪ್ಯಾಕೆಟ್ ಕಂಡು ಬಂದಿದೆ.ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಿದಾಗ ಪ್ಯಾಕೆಟ್ ನಲ್ಲಿ ಒಂದು ಮೊಬೈಲ್,ಒಂದು ಬ್ಯಾಟರಿ,ಗಾಂಜಾ ಕಂಡು ಬಂದಿದೆ.ಸ್ಮಶಾನಕ್ಕೆ ಹೊಂದಿಕೊಂಡಂತೆ ಇರುವ ಕಾರಾಗೃಹದ ಗೋಡೆ ಒಳಗೆ ವಸ್ತುಗಳು ಪತ್ತೆಯಾಗಿದೆ.ಹೊರಗಿನಿಂದ ಅನಾಮಧೇಯ ವ್ಯಕ್ತಿಗಳು ಕಾರಾಗೃಹದ ಒಳಗೆ ಎಸೆದಿರಬಹುದೆಂದು ಶಂಕಿಸಲಾಗಿದೆ.ಈ ಸಂಭಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More