TV10 Kannada Exclusive

ಸಂಕ್ರಾಂತಿ ಸಡಗರ…ರಾಸುಗಳಿಗೆ ಕಿಚಾಯಿಸಿ ಸಂಭ್ರಮ…

ಮೈಸೂರು,ಜ14,Tv10 ಕನ್ನಡ ಮೈಸೂರಿನ ಹೊರವಲಯದಲ್ಲಿರುವ ಸಿದ್ದಲಿಂಗಪುರದಲ್ಲಿ ಸಂಕ್ರಾಂತಿ ಸಡಗರ ಮನೆ ಮಾಡಿತ್ತು.ಪ್ರತಿವರ್ಷದ ಸಂಪ್ರದಾಯದಂತೆ ಇಂದು ಸಂಜೆ ರಾಸುಗಳನ್ನು ಬೆಂಕಿ ಮೇಲೆ ಕಿಚಾಯಿಸಿದ ಗ್ರಾಮಸ್ಥರು ಅರ್ಥಪೂರ್ಣವಾಗಿ ಹಬ್ಬವನ್ನ ಆಚರಿಸಿದರು.ಮುಂಜಾನೆ ರಾಸುಗಳನ್ನ ಸ್ವಚ್ಛಗೊಳಿಸಿ ಬಣ್ಣ ಬಣ್ಣಗಳಿಂದ ಸಿಂಗರಿಸಿ ವಿಶೇಷವಾಗಿ ಪೂಜಿಸಿದರು. ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದ ಮುಂಭಾಗ ಹಾಕಲಾಗಿದ್ದ ಕಿಚ್ಚಿಗೆ ರಾಸುಗಳು ಬೆದರಿ ಜಿಗಿದವು. ಪ್ರತಿವರ್ಷ ಸಂಭ್ರಮದಿಂದ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವುದು ಇಲ್ಲಿನ ಪದ್ದತಿ.ಅಲಂಕೃತಗೊಂಡ ರಾಸುಗಳ ಜತೆ ಬಂಡೂರು ತಳಿಯ ಮುದ್ದಾದ ಕುರಿಗಳು ಕಿಚ್ಚನ್ನು
Read More

ಮಗನ ಚಿಕಿತ್ಸೆಗೆ ಜರ್ಮನಿಯಿಂದ ಮೆಡಿಸಿನ್ ಕೊಡಿಸುವ ಆಮಿಷ…1.5 ಲಕ್ಷ ಕಳೆದುಕೊಂಡ ಮಹಿಳೆ…

ಮೈಸೂರು,ಜ13,Tv10 ಕನ್ನಡ ಜರ್ಮನಿಯಲ್ಲಿ ನನ್ನ ಸಹೋದರ ಡಾಕ್ಟರ್ ಎಂದು ನಂಬಿಸಿ ಮೆಡಿಸನ್ ತರಿಸಿಕೊಡುವ ಆಮಿಷ ಒಡ್ಡಿದ ಅಪರಿಚಿತನ ಮಾತು ನಂಬಿದ ಮಹಿಳೆಯೋರ್ವರು 1.5 ಲಕ್ಷ ಕಳೆದುಕೊಂಡಿದ್ದಾರೆ.ಮೈಸೂರಿನ ಗಾಯಿತ್ರಿಪುರಂ ನ ಹುಮೇರಾ ಜೈನಾಬ್ ಎಂಬ ಮಹಿಳೆ ವಂಚನೆಗೆ ಒಳಗಾದವರು.ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ವ್ಯಕ್ತಿ ತನ್ನ ಹುಮೇರಾ ಜೈನಾಬ್ ರವರ ಮಗನ ಆರೋಗ್ಯದ ಪರಿಸ್ಥಿತಿ ಅರಿತುಕೊಂಡು ಜರ್ಮನಿಯಲ್ಲಿ ನನ್ನ ಸಹೋದರ ಡಾಕ್ಟರ್ ಅಲ್ಲಿಂದ ಮೆಡಿಸನ್ ಹಾಗೂ ಚಾಕಲೇಟ್ ಗಳನ್ನ ತರಿಸಿಕೊಡುವುದಾಗಿ ನಂಬಿಸಿದ್ದಾನೆ.ಈತನ ಮಾತನ್ನ
Read More

ಶ್ರೀರಾಮ ಮಂದಿರ ಉದ್ಘಾಟನೆ ದಿನ ಮೈಸೂರಿನಲ್ಲಿ ಲಕ್ಷ ದೀಪೋತ್ಸವ…ವೀರನಗೆರೆ ಗಣಪತಿ ದೇವಸ್ಥಾನದಿಂದ ಕೋಟೆ ಆಂಜನೇಯ ದೇವಸ್ಥಾನದವರೆಗೆ ಬೆಳಗುವ ದೀಪಗಳು…

ಮೈಸೂರು,ಜ13,Tv10 ಕನ್ನಡ ಜನವರಿ 22 ಭಾರತೀಯರಿಗೆ ಐತಿಹಾಸಿಕ ದಿನ.ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಸಂಭ್ರಮ.ಭಾರತೀಯರ ಬಹುದಿನದ ಕನಸು ನನಸಾಗುವ ದಿನ.ರಾಮಮಂದಿರ ಉದ್ಘಾಟನೆ ಹಿನ್ನಲೆ ಭಾರತದಾದ್ಯಂತ ಹಲವು ಕಾರ್ಯಕ್ರಮಗಳು ನಡೆಯಲಿದೆ.ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಶ್ರೀರಾಮ ಸೇವಾ ಸಮಿತಿ ವತಿಯಿಂದ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ವೀರನಗೆರೆ ಶ್ರೀ ಗಣಪತಿ ದೇವಸ್ಥಾನದಿಂದ ಕೋಟೆ ಆಂಜನೇಯ ದೇವಸ್ಥಾನದ ವರೆಗೆ ಭಕ್ತರು ದೀಪ ಬೆಳಗಲಿದ್ದಾರೆ.ಕಾರ್ಯಕ್ರಮವನ್ನ ರಾಜಮನೆತನದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದಾರೆ.ಅಂದು
Read More

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರ ಆತಂಕ ದೂರ…

ಟಿ.ನರಸೀಪುರ,ಜ13,Tv10 ಕನ್ನಡ ಟಿ.ನರಸೀಪುರ ಸೋಸಲಿ ಹೋಬಳಿಯ ಕೊಣಗಹಳ್ಳಿ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಎಂ ನಾಗೇಂದ್ರ ಅವರ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿಗೆ ಸೆರೆಸಿಕ್ಕಿದೆ.ಹಲವಾರು ದಿನಗಳಿಂದ ಗ್ರಾಮಸ್ಥರ ಕಣ್ಣಿಗೆ ಬಿದ್ದು ಆತಂಕ ಸೃಷ್ಟಿಸಿತ್ತು.ಅಲ್ಲದೆ ಸಾಕು ಪ್ರಾಣಿಗಳನ್ನ ಬಲಿ ಪಡೆದಿತ್ತು.ಬೋನು ಇರಿಸುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನ ಒತ್ತಾಯಿಸಿದ್ದರು.ಸ್ಥಳೀಯರ ಮನವಿ ಮೇರೆಗೆ ಇರಿಸಲಾದ ಬೋನಿಗೆ ಚಿರತೆ ಸೆರೆಸಿಕ್ಕಿದೆ.ಗ್ರಾಮಸ್ಥರು ನಿರಾಳರಾಗಿದ್ದಾರೆ.ಸೆರೆಸಿಕ್ಕ ಚಿರತೆಯನ್ನ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ…
Read More

ಕಾಡಾನೆ ದಾಳಿ…ಮಹಿಳೆಗೆ ಗಾಯ…

ಹುಣಸೂರು,ಜ13,Tv10 ಕನ್ನಡ ಜಮೀನು ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಹುಣಸೂರು ತಾಲೂಕಿನ ಕಿಕ್ಕೇರಿಕಟ್ಟೆ ಬಳಿ ನಡೆದಿದೆ.ಗಾಯಗೊಂಡ ಮಹಿಳೆಯನ್ನ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮೀನಾಕ್ಷಿ ಎಂಬುವರ ಮೇಲೆ ದಾಳಿ ನಡೆಸಿದೆ.ಪತಿ ಜೋರಾಗಿ ಕೂಗಿದ ಹಿನ್ನೆಲೆ ಸ್ಥಳೀಯರು ಧಾವಿಸಿದ್ದಾರೆ.ಜನರನ್ನ ಕಂಡ ಆನೆ ಓಡಿ ಹೋಗಿದೆ…
Read More

ಸದೃಢ ಯುವಕರು ಮಾತ್ರ ದೇಶದ ಆಸ್ತಿ –ಶ್ರೀ ಲಿಂಗನಸ್ವಾಮಿ

ಧೈರ್ಯ ಸತ್ಯ ಮತ್ತು ಶಿಸ್ತಿನಿಂದ ಕೂಡಿದ ಯುವಕರಿಂದ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ ಈ ವ್ಯಕ್ತಿತ್ವ ನಿರ್ಮಾಣ ಮಾಡಲು ವಿವೇಕಾನಂದರನು ಕುರಿತು ಹೆಚ್ಚು ಅರಿಯುವುದು ಇಂದು ಅಗತ್ಯವಾಗಿದೆ ಇಂದು ಶ್ರೀ ಲಿಂಗಣ್ಣ ಸ್ವಾಮಿ ಹಿರಿಯ ಅರ್ಥಶಾಸ್ತ್ರ ಉಪನ್ಯಾಸಕರು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ವಿವೇಕಾನಂದ ಜನ್ಮ ದಿನಾಚರಣೆನ್ನು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ನಂಜನಗೂಡಿನಲ್ಲಿ ಮಾತನಾಡುತ್ತಾ ಯುವಕರಿಗೆ ಸಂದೇಶ ನೀಡಿದರು .ಭೂಗೋಳ ಶಾಸ್ತ್ರ ಉಪನ್ಯಾಸಕರು ಶ್ರೀ ಮಲ್ಲಿಕಾರ್ಜುನ್
Read More

ಮಹಾರಾಣಿ ಕಾಲೇಜು ವಿಧ್ಯಾರ್ಥಿನಿಯರಿಗೆ ಯುವನಿಧಿ ನೊಂದಣೆ ಕಾರ್ಯಕ್ರಮ…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರಿಂದ ಚಾಲನೆ…

ಮೈಸೂರು,ಜ12,Tv10 ಕನ್ನಡ ಮಹಾರಾಣಿ ಕಾಲೇಜು ವಿಧ್ಯಾರ್ಥಿನಿಯರಿಗೆ ಯುವನೊಂದಣಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮಹಾರಾಣಿ ವಿಜ್ಞಾನ ಕಾಲೇಜು ಆವರಣದಲ್ಲಿರುವ ಕಲಾ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.2022 ಹಾಗೂ 2023 ಸಾಲಿನಲ್ಲಿ ತೇರ್ಗಡೆಯಾದ ವಿಧ್ಯಾರ್ಥಿನಿಯರಿಗೆ ನೊಂದಣಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕಾರ್ಯಕ್ರಮವನ್ನ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ನಾರಾಯಣ ಮೂರ್ತಿ,ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕಿ ರಾಣಿ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು…
Read More

ಬೆಳ್ಳುಳ್ಳಿ ಕದ್ದು ಪರಾರಿಯಾಗಿದ್ದ ಆರೋಪಿ ಬಂಧನ…ಒಂದು ಲಕ್ಷ ಮೌಲ್ಯದ ಬೆಳ್ಳುಳ್ಳಿ ವಶ…

ಹುಣಸೂರು,ಜ12,Tv10 ಕನ್ನಡ ಹುಣಸೂರಿನಲ್ಲಿ ಬೆಳ್ಳುಳ್ಳಿ ಕಳ್ಳತನ ಮಾಡಿ ಪರಾರಿಯಾಗಿದ್ದಆರೋಪಿಯನ್ನ ಬಂಧಿಸಲಾಗಿದೆ. ಮಹಮದ್ ಅಜರ್ ಬಂಧಿತ ಆರೋಪಿ.ಹುಣಸೂರು ನಗರ ಠಾಣಾ ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ.ಮಹಮದ್ ಅನ್ಸರ್ ಅವರಿಗೆ ಸೇರಿದ್ದಒಂದು ಲಕ್ಷ ಮೌಲ್ಯದ ಬೆಳ್ಳುಳ್ಳಿ ಕಳ್ಳತನ ಮಾಡಿ ಅಜರ್ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ.ಈ ಸಂಬಂಧ ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅಜರ್ ಬಂಧಿಸಿದ ಪೊಲೀಸರು ಬೆಳ್ಳುಳ್ಳಿ ವಶಪಡಿಸಿಕೊಂಡಿದ್ದಾರೆ…
Read More

ಕಾಫಿತೋಟದಲ್ಲಿಸಾವನ್ನಪ್ಪಿದ‌_ಹುಲಿ

ಬಾಳೆಲೆ ಹೋಬಳಿ ಕೊಟ್ಟಗೇರಿ ಗ್ರಾಮದ ದಿಲ್ಲು ತಿಮ್ಮಯ್ಯ ಎಂಬವರ ಕಾಫಿ ತೋಟದಲ್ಲಿಅಂದಾಜು 14 ವರ್ಷ ಪ್ರಾಯದ ಹುಲಿಯ ಕಳೇಬರ ಪತ್ತೆಯಾಗಿದೆ. ತೋಟದ ಮಾಲೀಕರು ನೀಡಿದ ಮಾಹಿತಿ ಮೇರೆಗೆ ತಿತಿಮತಿ ಎಸಿಎಫ್ ಗೋಪಾಲ್, ಪೊನ್ನಂಪೇಟೆ ಆರ್‌ಎಫ್‌ಓ ಶಂಕರಪ್ಪ, ಡಿಆರ್‌ಎಫ್‌ಓ ದಿವಾಕರ್, ತಿತಿಮತಿ ವಲಯ ಡಿಆರ್‌ಎಫ್‌ಓ ರವಿಕಿರಣ್, ಚೇತನ್, ಕಲ್ಲಳ್ಳ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಿತ್ರಾಣದಿಂದ ಹುಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
Read More

ಸಿಸಿಬಿ ಪೊಲೀಸರ ಕಾರ್ಯಾಚರಣೆ..4.17 ಲಕ್ಷ ಮೌಲ್ಯದ 241 ಮೂಟೆ ಪಡಿತರ ಅಕ್ಕಿ ವಶ…

ಮೈಸೂರು,ಜ9,Tv10 ಕನ್ನಡ ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ 4.17 ಲಕ್ಷ ಮೌಲ್ಯದ 241 ಮೂಟೆ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿಯನ್ನೂ ಸಹ ವಶಕ್ಕೆ ಪಡೆಯಲಾಗಿದೆ.ಖಚಿತ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ ಹೆಬ್ಬಾಳ್ ನಲ್ಲಿರುವ ಕೆ.ಎಫ್.ಸಿ.ಐ.ಗೋದಾಮಿನಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಪಡಿತರ ಅಕ್ಕಿ ಸಿದ್ದಲಿಂಗಪುರ ಗ್ರಾಮದ ಬಳಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ.KA 09 D 9686 ನೊಂದಣಿ ಸಂಖ್ಯೆಯ ಲಾರಿಯಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ
Read More