32 C
Mysore
Monday, March 30, 2020
Home All News ಹೋಂ ಕ್ವಾರೆಂಟೈನ್ ಆದೇಶವನ್ನು ಉಲ್ಲಂಘಿಸಿದ ವ್ಯಕ್ತಿಯ ಮೇಲೆ ವಿ.ವಿ.ಪುರಂ ಪೊಲೀಸರಿಂದ ಪ್ರಕರಣ ದಾಖಲು.

ಹೋಂ ಕ್ವಾರೆಂಟೈನ್ ಆದೇಶವನ್ನು ಉಲ್ಲಂಘಿಸಿದ ವ್ಯಕ್ತಿಯ ಮೇಲೆ ವಿ.ವಿ.ಪುರಂ ಪೊಲೀಸರಿಂದ ಪ್ರಕರಣ ದಾಖಲು.

ದಿನಾಂಕ: 22.03.2020 ರಂದು ಆಸ್ಟ್ರೇಲಿಯಾ ದೇಶದಿಂದ ಭಾರತಕ್ಕೆ ವಿ.ವಿ.ಮೊಹಲ್ಲಾ ವಾಸಿಯು ವಿಮಾನದ ಮೂಲಕ ಭಾರತಕ್ಕೆ ಬಂದಿರುತ್ತಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸದರಿ ವ್ಯಕ್ತಿಯ ಮುಂಗೈಗೆ ಸೀಲ್ ಮಾಡಿ ಈತನು ವೈರಾಣು ಭಾದಿತ ದೇಶದಿಂದ ಬಂದವನಾಗಿದ್ದು ಆತನಿಗೆ 14 ದಿವಸಗಳ ಕಾಲ ಹೋಂ ಕ್ವಾರೆಂಟೈನ್ಗೆ ಒಳಪಡಿಸಲಾಗಿತ್ತು.
ದಿನಾಂಕ: 06.04.2020 ರವರೆಗೆ ಇವರು ಹೋಂ ಕ್ವಾರೆಂಟೈನ್ ನಲ್ಲಿರಬೇಕೆಂದು ಸೂಚಿಸಲಾಗಿತ್ತು. ಈ ಬಗ್ಗೆ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಮಾಡಿರುವ ಆದೇಶದ ಬಗ್ಗೆ ಹಾಗೂ ತಾನು ವೈರಾಣು ಸೋಂಕಿನ ಭಾದಿತ ದೇಶದಿಂದ ಬಂದಿರುವವನೆಂಬ ಅರಿವಿದ್ದರೂ ಮತ್ತು ತಾನು ಸಾರ್ವಜನಿಕವಾಗಿ ಓಡಾಡಿದರೇ ವೈರಾಣುವಿನ ಸೋಂಕು ಇತರರಿಗೂ ಹರಡಬಹುದೆಂಬ ತಿಳುವಳಿಕೆ ಉಳ್ಳವನಾಗಿದ್ದರೂ ಸಹ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಿ ಸಾರ್ವಜನಿಕರೊಂದಿಗೆ ಬೆರೆತು ಮಾನ್ಯ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ. ಆದ್ದರಿಂದ ಈತನ ಮೇಲೆ ವಿ.ವಿ.ಪುರಂ ಪೊಲೀಸ್ ಠಾಣಾ ಮೊ.ನಂ.41/2020 ಕಲಂ.188.269.271.ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಮೈಸೂರು ಲಾಕ್ ಡೌನ್…ಮನೆಗೇ ಬರುತ್ತೆ ಕಡಿಮೆ ದರದ ಪ್ರಾವಿಷನ್…ಯೋಜನೆ ತಂದ್ರು ಶಾಸಕ ರಾಮದಾಸ್…

ಕೊರೊನಾ ವೈರಸ್ ನಿಂದ ಘೋಷಿಸಿದ ಲಾಕ್ ಡೌನ್ ಸಖತ್‌ಎಫೆಕ್ಟ್ ಆಗಿದೆ.ಮನೆಯಿಂದ ಹೊರಗೆ ಬರಬಾರದೆಂಬ ನಿಯಮ ಕೆಲವರಿಗಂತೂ ಸಂಕಷ್ಟ ತಂದಿದೆ.ದಿನಸಿ ಸಾಮಾನು ತರಲೂ ಕಷ್ಟವಾಗುತ್ತಿದೆ.ಹೊರಗೆ ಬಂದರೆ ಪೊಲೀಸರ ಕರೊನಾ ಹೆದರಿಕೆ ಮನೆಯಲ್ಲಿದ್ದರೆ...

ಜಿಲ್ಲಾಡಳಿತದಿಂದ ಕೊರೊನ ಜಾಗೃತಿ ಭರ್ಜರಿ…ಎಪಿಎಂಸಿಕಾರ್ಮಿಕರಿಗೆ ಇಲ್ಲ ಸೇಫ್ಟಿ…

ಇದೊಂದು ವಿಪರ್ಯಾಸದ ಸಂಗತಿ ಅಂದರೆ ತಪ್ಪಿಲ್ಲ.ಇಡೀ ಜಗತ್ತೇ ಕೊರೊನಾ ಹೆಸರೇಳಿದರೆ ಬೆಚ್ಚಿಬೀಳುತ್ತಿದೆ.ಮೈಸೂರಿನಲ್ಲಂತೂ ಭರ್ಜರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೆ ಎಪಿಎಂಸಿ ಆವರಣವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇಫ್ಟಿ ಬಗ್ಗೆ ತಲೆಯೇ ಕೊಡಿಸಿಕೊಂಡಿಲ್ಲ.ಇಲ್ಲಿನ ಪೌರಕಾರ್ಮಿಕರು ಸಂಪೂರ್ಣವಾಗಿ...

ಮನೆಯಿಂದ ಹೊರಬಂದರೆ ಕರೊನಾ…ಒಳಗಿದ್ದರೆ ನಗೀನಾ…ಹುಣಸೂರು ಜನತೆಗೆ ಹಾವಿನ ಕಾಟ…

ಕೊರೊನಾ ವೈರಸ್ ಮನುಕುಲಕ್ಕೆ ಭೀತಿ ಹುಟ್ಟಿಸಿದೆ.ಗೃಹಬಂಧನವೇ ಮುಕ್ತಿಗೆ ದಾರಿ.ಮನೆಯಲ್ಲಿದ್ದರೆ ಮಾತ್ರ ಸೇಫ್.ಹುಣಸೂರಿನ‌ ಶಬ್ಬೀರ್ ನಗರದ ನಿವಾಸಿಗಳಿಗೆ ಮನೆಯೂ ಸೇಫಾಗಿಲ್ಲ ಯಾಕೆ ಗೊತ್ತಾ…? ಹಾವುಗಳ ಕಾಟ.ನಿನ್ನೆ ರಾತ್ರಿಯಂತೂ ಎರಡು ಹಾವುಗಳ ಓಡಾಟ...

ಅಸಮರ್ಥ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…ಹಳ್ಳಿಹಕ್ಕಿ ಕಿಡಿ…

ಕೊರೊನಾ ವೈರಸ್ ವಿಚಾರದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಮೌನ ಮುರಿದಿದ್ದಾರೆ.ಇಷ್ಟು ದಿನ ಮೌನವಹಿಸಿದ್ದ ವಿಶ್ವನಾಥ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.ಸಮರ್ಥ ಅಧಿಕಾರಿಗಳನ್ನ‌ ಮೈಸೂರಿಗೆ ವರ್ಗಾಯಿಸಿ.ಅಸಮರ್ಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ...

Recent Comments