32 C
Mysore
Monday, March 30, 2020
Home All News ಮೈಸೂರಿನಲ್ಲಿ ೩ ನೇ ಪಾಸಿಟಿವ್ ಪ್ರಕರಣ…ಹೆಚ್ಚಿದ ಆತಂಕ…ಸಾರ್ವಜನಿಕರೇ ಎಚ್ಚರ…ಎಚ್ಚರ…

ಮೈಸೂರಿನಲ್ಲಿ ೩ ನೇ ಪಾಸಿಟಿವ್ ಪ್ರಕರಣ…ಹೆಚ್ಚಿದ ಆತಂಕ…ಸಾರ್ವಜನಿಕರೇ ಎಚ್ಚರ…ಎಚ್ಚರ…

ಕೊರೊನಾ ಮಾಹಾಮಾರಿಯ ನಾಗಾಲೋಟಕ್ಕೆ ಕಡಿವಾಣ ಇಲ್ಲದಂತಾಗಿದೆ.ಮೈಸೂರು ಜಿಲ್ಲೆಯಲ್ಲಿ ಮೂರನೇ ಪಾಸಿಟಿವ್ ದೃಢಪಟ್ಟಿದೆ.ಸಾಂಸ್ಕೃತಿಕ ನಗರಿ ಬೆಚ್ಚಿಬಿದ್ದಿದೆ.ಮಾರಣಾಂತಕ ವೈರಸ್ ತಡೆಗಟ್ಟಲು ಜಿಲ್ಲಾಡಳಿತ ನಡೆಸುತ್ತಿರುವ ಹರಸಾಹಸಕ್ಕೆ ಮೂರನೇ ಪಾಸಿಟಿವ್ ಆತಂಕ ತಂದಿದೆ.ಮೈಸೂರು ಜಿಲ್ಲೆಯಲ್ಲಿ ಮತ್ತಷ್ಟು ಬಿಗಿಯಾಗಲಿದೆ ಲಾಕ್ ಡೌನ್ ಘೋಷಣೆ.

ಅರಮನೆಗಳ ನಗರಿಗೆ ಕೊರೊನಾ ವೈರಸ್ ಮತ್ತಷ್ಟು ಭೀತಿ ಸೃಷ್ಟಿಯಾಗುವಂತೆ ಮಾಡಿದೆ.ಈವತ್ತು ಬಂದ ಲ್ಯಾಬ್ ವರದಿ ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟಿದೆ.೩೫ ವರ್ಷ ವಯಸ್ಸಿನ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ.ಮೈಸೂರಿನ ನಿವಾಸಿಯಾದ ಈತ ನಂಜನಗೂಡಿನ ಫಾರ್ಮಾಸ್ಯೂಟಿಕಲ್ ಕಂಪನಿಯೊಂದರಲ್ಲಿ ಕ್ವಾಲಿಟಿ ಅಶ್ಯೂರೆನ್ಸ್ ವಿಭಾಗದ ಮುಖ್ಯಸ್ಥ.ಕೊರೊನಾ ವೈರಸ್ ಸೋಂಕು ಶಂಕೆ ಹಿನ್ನಲೆ ಈತನನ್ನ‌ ನಿಗಾದಲ್ಲಿ ಇರಿಸಲಾಗಿತ್ತು.ಲ್ಯಾಬ್ ವರದಿ ಪಾಸಿಟಿವ್ ಎಂದು ಹೇಳಿದೆ.ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಈತನಿಗೆ ಚಿಕಿತ್ಸೆ

ಮುಂದುವರೆಸಲಾಗಿದೆ.ಈತನ ಚಲನವಲನಗಳ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ.ತಪಾಸಣೆಗೆ ಒಳಗಾಗುವ ಮುನ್ನ ಈತ ೭ ಮಂದಿಯನ್ನ ಸಂಪರ್ಕಿಸಿರುವ ಮಾಹಿತಿ ಕಲೆಹಾಕಿದೆ.೭ ಮಂದಿಯನ್ನೂ ಸಹ ಹೋಂ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ

ಮೈಸೂರಿನಲ್ಲಿ ಈಗಾಗಲೇ ನಿಗಾದಲ್ಲಿ ಇರುವವರ ಸಂಖ್ಯೆ ೧೧೨೨.ಮನೆಯಲ್ಲಿ ೧೪ ದಿನದ ಐಸೋಲೇಷನ್ ಗೆ ಒಳಗಾದವರು ೮೯೬. ನಿಗದಿತ ೧೪ ದಿನಗಳ‌ ಐಸೋಲೇಷನ್ ಪೂರೈಸಿದವ್ರು ೨೨೩. ಸ್ಯಾಂಪಲ್ ಪರಿಶೀಲನೆ ಸಂಖ್ಯೆ ೫೯ ಈ ಪೈಕಿ ನೆಗೆಟಿವ್ ೫೬ ಬಂದಿದೆ.ಮೂರು ಪಾಸಿಟಿವ್ ಪ್ರಕರಣ ವರದಿ ಬಂದಿದ್ದು ಸಹಜವಾಗೇ ಹೆಚ್ಚಾಗಿದೆ.ಲಾಕ್ ಡೌನ್ ಘೋಷಣೆ ಮಾಡಿದ್ರೂ ಜನ ಅನಾವಶ್ಯಕವಾಗಿ ಮನೆಯಿಂದ ಹೊರಬಂದು ವೈರಾಣು ಹರಡುವಿಕೆಗೆ ಪ್ರೋತ್ಸಾಹ ಕೊಡುತ್ತಿದ್ದಾರೆ.ಈ ಬೆಳವಣಿಗೆ ಜಿಲ್ಲಾಡಳಿತಕ್ಕೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ

ವಿದೇಶದಿಂದ ವಾಪಸಾದ ವ್ಯಕ್ತಿಗಳ ಸಂಪರ್ಕದಿಂದ ವೈರಸ್ ಹರಡುವಿಕೆಗೆ ಕಾರಣ ಎನ್ನಲಾಗಿದೆ.ಮೂರನೇ ಪಾಸಿಟಿವ್ ವ್ಯಕ್ತಿ ಇಂತಹವರ ಸಂಪರ್ಕ ಪಡೆದಿಲ್ಲವೆಂದೇ ಹೇಳಲಾಗಿದೆ.ಹೀಗಿದ್ದೂ ಪಾಸಿಟಿವ್ ವರದಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.ಇನ್ನಾದ್ರೂ ಸಾರ್ವಜನಿಕ್ರು ಸರ್ಕಾರದ ಆದೇಶಗಳನ್ನ ಪಾಲಿಸದಿದ್ದಲ್ಲಿ ಪಶ್ಚಾತ್ತಾಪ ಪಡುವ ದಿನ ದೂರವಿರಲ್ಲ. ಮೈಸೂರಿನ ನಾಗರೀಕರೆ ಹುಷಾರ್…

LEAVE A REPLY

Please enter your comment!
Please enter your name here

- Advertisment -

Most Popular

ಜಿಲ್ಲಾಡಳಿತದಿಂದ ಕೊರೊನ ಜಾಗೃತಿ ಭರ್ಜರಿ…ಎಪಿಎಂಸಿಕಾರ್ಮಿಕರಿಗೆ ಇಲ್ಲ ಸೇಫ್ಟಿ…

ಇದೊಂದು ವಿಪರ್ಯಾಸದ ಸಂಗತಿ ಅಂದರೆ ತಪ್ಪಿಲ್ಲ.ಇಡೀ ಜಗತ್ತೇ ಕೊರೊನಾ ಹೆಸರೇಳಿದರೆ ಬೆಚ್ಚಿಬೀಳುತ್ತಿದೆ.ಮೈಸೂರಿನಲ್ಲಂತೂ ಭರ್ಜರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೆ ಎಪಿಎಂಸಿ ಆವರಣವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇಫ್ಟಿ ಬಗ್ಗೆ ತಲೆಯೇ ಕೊಡಿಸಿಕೊಂಡಿಲ್ಲ.ಇಲ್ಲಿನ ಪೌರಕಾರ್ಮಿಕರು ಸಂಪೂರ್ಣವಾಗಿ...

ಮನೆಯಿಂದ ಹೊರಬಂದರೆ ಕರೊನಾ…ಒಳಗಿದ್ದರೆ ನಗೀನಾ…ಹುಣಸೂರು ಜನತೆಗೆ ಹಾವಿನ ಕಾಟ…

ಕೊರೊನಾ ವೈರಸ್ ಮನುಕುಲಕ್ಕೆ ಭೀತಿ ಹುಟ್ಟಿಸಿದೆ.ಗೃಹಬಂಧನವೇ ಮುಕ್ತಿಗೆ ದಾರಿ.ಮನೆಯಲ್ಲಿದ್ದರೆ ಮಾತ್ರ ಸೇಫ್.ಹುಣಸೂರಿನ‌ ಶಬ್ಬೀರ್ ನಗರದ ನಿವಾಸಿಗಳಿಗೆ ಮನೆಯೂ ಸೇಫಾಗಿಲ್ಲ ಯಾಕೆ ಗೊತ್ತಾ…? ಹಾವುಗಳ ಕಾಟ.ನಿನ್ನೆ ರಾತ್ರಿಯಂತೂ ಎರಡು ಹಾವುಗಳ ಓಡಾಟ...

ಅಸಮರ್ಥ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…ಹಳ್ಳಿಹಕ್ಕಿ ಕಿಡಿ…

ಕೊರೊನಾ ವೈರಸ್ ವಿಚಾರದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಮೌನ ಮುರಿದಿದ್ದಾರೆ.ಇಷ್ಟು ದಿನ ಮೌನವಹಿಸಿದ್ದ ವಿಶ್ವನಾಥ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.ಸಮರ್ಥ ಅಧಿಕಾರಿಗಳನ್ನ‌ ಮೈಸೂರಿಗೆ ವರ್ಗಾಯಿಸಿ.ಅಸಮರ್ಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ...

ಕೊರೊನಾ ಪಾಸಿಟಿವ್‌ ೧೨ ಕ್ಕೆ ಏರಿಕೆ…ಆತಂಕವೂ ಹೆಚ್ಚಾಗುತ್ತಿದೆ…

ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪಟ್ಟಿ ಬೆಳೆಯುತ್ತಿದೆ.ಒಂದು ವಾರದ ಅಂತರದಲ್ಲಿ ೯ ಮಂದಿ ಸೋಂಕಿತರು ಪಟ್ಟಿಗೆ ಸೇರಿದ್ದಾರೆ. ಜೊತೆಗೆ ಕ್ವಾರೆಂಟೈನ್ ಗೆ ಒಳಗಾದವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ.ಸೋಂಕಿತರ...

Recent Comments