32 C
Mysore
Thursday, June 4, 2020
Home All News ಮೈಸೂರಿನ ಅಂದವನ್ನ ಹೆಚ್ಚಲು ನೆರವಾದ ಗುಲ್ ಮೊಹರ್ ಗೆ ಬೀಳಲಿದೆ ಕೊಡಲಿ ಪೆಟ್ಟು…

ಮೈಸೂರಿನ ಅಂದವನ್ನ ಹೆಚ್ಚಲು ನೆರವಾದ ಗುಲ್ ಮೊಹರ್ ಗೆ ಬೀಳಲಿದೆ ಕೊಡಲಿ ಪೆಟ್ಟು…

ಮೈಸೂರಿನ‌ ಅಂದವನ್ನ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಗುಲ್ ಮೊಹರ್ ಗೆ ಕಂಟಕ ಶುರುವಾಗಿದೆ. ಸಾಂಸ್ಕೃತಿಕ ನಗರಿಯ ಆಕರ್ಷಣೆಗೆ ತನ್ನದೇ ಕೊಡುಗೆ ಕೊಟ್ಟ ಗುಲ್ ಮೊಹರ್ ಮರಗಳು ಇತಿಹಾಸ ಸೇರುವ ಲಕ್ಷಣಗಳು ಕಾಣುತ್ತಿದೆ.ದುರ್ಬಲ ಮರಗಳು ಅನ್ನೋ ಕಾರಣ ನೀಡಿ ಕೊಡಲಿ ಹಾಕಲು ನಿರ್ಧರಿಸಲಾಗಿದೆ.ಸುಡು ಬೇಸಿಗೆಯ ವಾತಾವರಣದಲ್ಲಿ ಕಣ್ಣಿಗೆ ಮುದ ನೀಡುತ್ತಿದ್ದ ಗುಲ್ ಮೊಹರ್ ಮೈಸೂರಿಗರಿಂದ ದೂರವಾಗುವ ಹಂತಕ್ಕೆ ತಲುಪಿದೆ.ಗುಲ್ ಮೊಹರ್ ಮರಗಳ ತೆರುವಿಗೆ ಪಾಲಿಕೆ ನಿರ್ಧರಿಸಿದೆ. ಪಾಲಿಕೆ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿದೆ

ಹಚ್ಚ ಹಸಿರಿನ ನಡುವೆ ಕೆಂಪು ಬಣ್ಣದ ಸೀರೆಯನ್ನ ಉಟ್ಟು ವೈಯ್ಯಾರದಂತೆ ನಳನಳಿಸುತ್ತಾ ಆಹ್ಲಾದಕರ ತಂಗಾಳಿ ನೀಡಿ ಮುದಗೊಳಿಸುತ್ತಿದ್ದ ಗುಲ್ ಮೊಹರ್ ಗೆ ಮೈಸೂರಿನಲ್ಲಿ ಕಂಟಕ ಬಂದಿದೆ.ಮೈಸೂರಿನ‌ ಆಕರ್ಷಣೆಯನ್ನ ಹೆಚ್ಚಿಸಲು ವರವಾಗಿದ್ದ ಗುಲ್ ಮೊಹರ್ ಮರಗಳನ್ನ ತೆರವುಗೊಳಿಸಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಅತಿಯಾದ ಉಷ್ಣಾಂಶದಲ್ಲೂ ಕೆಂಪು ಬಣ್ಣದ ಹೂಗಳನ್ನ ಹೊದ್ದು ಪ್ರವಾಸಿಗರನ್ನ ಸೆಳೆಯುತ್ತಿದ್ದ ಗುಲ್ ಮೊಹರ್ ಮರಗಳಿಗೀಗ ಸಂಕಷ್ಟ ಕಾಲ ಬಂದಿದೆ.ದುರ್ಬಲ ಮರಗಳು ಆಸ್ತಿಪಾಸ್ತಿ ಹಾಗೂ ಪ್ರಾಣಹಾನಿಗೆ ಕಾರಣವಾಗುತ್ತಿದೆ ಎಂಬ ಕಾರಣಕ್ಕೆ ತೆರುವು ಮಾಡಲು ಪಾಲಿಕೆ ನಿರ್ಧರಿಸಿದೆ.ಮಳೆಗಾಲದಲ್ಲಿ ಬುಡಸಮೇತ ಉರುಳಿ ಬೀಳುವುದರಿಂದ ಅಪಾಯ ಕಟ್ಟಿಟ್ಟಬುತ್ತಿ ಎಂಬ ನಿರ್ಧಾರಕ್ಕೆ ಬಂದಿರುವ ಪಾಲಿಕೆ ಅಧಿಕಾರಿಗಳು ತೆರವಿಗೆ ಆದೇಶ ನೀಡಿದ್ದಾರೆ.ತೆರುವಾಗುವ ಸ್ಥಳದಲ್ಲಿ ವಿವಿದ ಬಗೆಯ ಹೂ ಗಿಡಗಳ ಸಸಿಗಳನ್ನ ನೆಡಲು ನಿರ್ಧರಿಸಲಾಗಿದೆ.ಸಧ್ಯಕ್ಕೆ ದುರ್ಬಲ ಮರಗಳನ್ನ ಮಾತ್ರ ತೆರುವುಗೊಳಿಸುವುದಾಗಿ ಹೇಳಲಾಗುತ್ತಿದೆ.ಮುಂದಿನ ದಿನಗಳಲ್ಲಿ ಗುಲ್ ಮೊಹರ್ ಸಸಿಗಳನ್ನ ಹಾಕದಂತೆಯೂ ಆದೇಶವಾಗಿದೆ.

ಯಾವುದೇ ಮರಗಳನ್ನ ಉಳಿಸಿ ಬೆಳೆಸಬೇಕಿದ್ದಲ್ಲಿ ವರ್ಷಗಳೇ ಬೇಕಾಗುತ್ತದೆ.ಈಗಾಗಲೇ ನಗರದ ಅಭಿವೃದ್ದಿಯ ಹೆಸರಲ್ಲಿ ಸಾಕಷ್ಟು ಮರಗಳು ಹನನವಾಗಿದೆ.ಇದೀಗ ದುರ್ಬಲ ಎಂಬ ಹೆಸರಿನಲ್ಲಿ ಗುಲ್ ಮೊಹರ್ ಗೆ ಅಂತಿಮ‌ ದಿನಗಳು ಎದುರಾಗಿದೆ.ಮೈಸೂರಿನ‌ ಅಂದವನ್ನ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದ ಮರಗಳನ್ನ ಉರುಳಿಸುವ ಬದಲು ಅಪಾಯ ತಪ್ಪುವಂತೆ ಪರ್ಯಾಯ ಮಾರ್ಗ ಆಲೋಚಿಸುವಂತೆ ಸಾರ್ವಜನಿಕರ ಅನಿಸಿಕೆಯಾಗಿದೆ.ಪರಿಸರ ತಜ್ಞರ ಜೊತೆ ಚರ್ಚಿಸಿ ಮರಗಳನ್ನ ನಿರ್ವಹಣೆ ಮಾಡಿದ್ರೆ ಒಳಿತು ಅಂತಾರೆ ಮೈಸೂರಿಗರು

ಉಷ್ಣವಲಯದ ವಾತಾವರಣಕ್ಕೆ ಹೊಂದಿಕೊಂಡು ಅನಾದಿ ಕಾಲದಿಂದ ಮನುಕುಲಕ್ಕೆ ನೆರವಾಗಿದ್ದ ಮರಗಳಿಗೆ ಗರಗಸ ಬೀಳುತ್ತೆ ಅಂದ್ರೆ ನೋವಿನ ಸಂಗತಿ. ಕೆಂಪುಬಣ್ಣದ ಸುಂದರಿಯನ್ನ ಕಳೆದುಕೊಳ್ಳುವುದು ಸುಲಭ ಆದ್ರೆ ಮತ್ತೆ ನೋಡುವ ಅವಕಾಶ ಖಂಡಿತಾ ಸಿಗಲ್ಲ.ಗುಲ್ ಮೊಹರ್ ತೆರವು ಮಾಡುವ ಮುನ್ನ ಪಾಲಿಕೆ ಅಧಿಕಾರಿಗಳು ಮತ್ತೊಮ್ಮೆ ಯೋಚಿಸಬೇಕಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಅತೀಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದರೆ ಕಾನೂನು ರೀತ್ಯಾ ಕ್ರಮ

ಮೈಸೂರು ಜೂನ್.3. ಮೈಸೂರು ನಗರದ ಜೆ.ಎನ್.ನರ್ಮ್-ಬಿ.ಎಸ್.ಯು.ಪಿ ಹಂತ-1 ಮತ್ತು ಹಂತ 2 ರ ಯೋಜನೆಯಡಿ ಕೆಸರೆ ಸರ್ವೆ ನಂ.484/1 ಮತ್ತು 484/2 ರಲ್ಲಿ ಒಟ್ಟು 252 ಮನೆಗಳನ್ನು ನಿರ್ಮಿಸಿದ್ದು, ಸದರಿ...

ಗಡಸು ಮರದ ಜಾತಿಯ ಗಿಡಗಳನ್ನು ನೆಡಲು ಸಹಕರಿಸಿ

ಮೈಸೂರು, ಜೂನ್.3 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಮರದ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದ್ದು, ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನ ಅವಧಿಯಲ್ಲಿ ಮಳೆ ಹಾಗೂ...

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136 ನೇ ಹುಟ್ಟು ಹಬ್ಬ

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136...

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ.

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ...

Recent Comments