20 C
Mysore
Tuesday, February 25, 2020
Home All News ಕೊಲ್ಲಲು ಬಂದಿದ್ದು ಪತ್ನಿಯನ್ನ…ಬಲಿಯಾಗಿದ್ದು ಮಾವ…ಶೀಲ‌ ಶಂಕೆ ಎಫೆಕ್ಟ್…

ಕೊಲ್ಲಲು ಬಂದಿದ್ದು ಪತ್ನಿಯನ್ನ…ಬಲಿಯಾಗಿದ್ದು ಮಾವ…ಶೀಲ‌ ಶಂಕೆ ಎಫೆಕ್ಟ್…

ಪತ್ನಿಯ ನಡತೆ ಬಗ್ಗೆ ಅನುಮಾನದ ರೋಗ ಅಂಡಿಸಿಕೊಂಡ ಪತಿರಾಯ ಕೊಲ್ಲಲು ಬಂದಾಗ ಅಡ್ಡ ಬಂದ ಮಾವನಿಗೆ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಉದಯಗಿರಿಯ ಗೌಸಿಯಾನಗರದಲ್ಲಿ ನಡೆದಿದೆ.ಆಟೋ ಡ್ರೈವರ್
ಸಲೀಂ(೫೦)ಅಳಿಯನಿಂದ ಕೊಲೆಯಾದ ದುರ್ದೈವಿ ಮಾವ.
ಅಳಿಯ ನದೀಂ ಅಹಮದ್ ಖಾನ್ ಪರಾರಿಯಾಗಿದ್ದಾನೆ.
ಪತ್ನಿ ಹಸೀನಾ ನಡತೆ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ ನದೀಂ ಆಗಾಗ ಜಗಳವಾಡುತ್ತಿದ್ದ.ಇಬ್ಬರ ಜಗಳವನ್ನ ಬಿಡಿಸಲು ಮಾವ ಸಲೀಂ‌ ಮಧ್ಯ ಪ್ರವೇಶಿಸುತ್ತಿದ್ದ.ಗಂಡನ ವರ್ತನೆಗೆ ಬೇಸತ್ತ ಪತ್ನಿ ಹಸೀನಾ ತವರು ಮನೆ ಸೇರಿಕೊಂಡಿದ್ದಳು.
ಇಂದು ಮುಂಜಾನೆ ಮಾವನ ಮನೆಗೆ ಬಂದ ನದೀಂ ಚಾಕು ಸಮೇತ ಬಂದಿದ್ದ.ನಮಾಜ್ ಮಾಡಲು ಹೋಗುತ್ತಿದ್ದ ಮಾವನ ಜೊತೆ ನದೀಂ ಕಿರಿಕ್ ಮಾಡಿ ಪತ್ನಿಯನ್ನ ಮುಗಿಸಲು ಮನೆ ಒಳಗೆ ನುಗ್ಗಲು ಯತ್ನಿಸಿದ.ಈ ವೇಳೆ ಮಾವ ಸಲೀಂ‌ ಅಡ್ಡಿಯಾಗಿ ಮನ ಒಲಿಸಲು ಯತ್ನಿಸಿದ.ನೀನು ಇದ್ದರೆ ತಾನೆ ಅವಳನ್ನ ಕೊಲ್ಲಲು ಆಗಲ್ಲ ಎಂದು ಆವಾಜ್ ಹಾಕಿ ಮಾವನಿಗೆ ಚಾಕುವಿನಿಂದ ಇರಿದ.ಕತ್ತು ಮುಖದ ಮೇಲೆ ಚಾಕುವಿನಿಂದ ಇರಿದ ನದೀಂ ಪರಾರಿಯಾದ.ತೀವ್ರ ಗಾಯಗೊಂಡ ಸಲೀಂ ರನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನದೀಂ ಬಂಧನಕ್ಕೆ ಜಾಲ‌ಬೀಸಲಾಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಧೂಳು ಹಿಡಿಯುತ್ತಿದೆ ಸಾರ್ವಜನಿಕ ಗ್ರಂಥಾಲಯ…೪೦.೫೦ ಲಕ್ಷ ಖರ್ಚು ವ್ಯರ್ಥ…?

ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಾಣ ಮಾಡಿದ ಸಾರ್ವಜನಿಕ ಗ್ರಂಥಾಲಯ ಧೂಳು ಹಿಡಿಯುತ್ತಿದೆ.ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ತಲೆ ಎತ್ತಿ ನಿಂತಿರುವ ಕಟ್ಟಡ ಬಳಕೆ ಬಾರದೆ ನಿರಪಯುಕ್ತವಾಗಿದೆ.ಉದ್ಘಾಟನೆಯಾಗಿ ಎರಡು ವರ್ಷ ಕಳೆದ್ರೂ ಬಳಕೆಗೆ ಬಾರದ...

ತುಕ್ಕು ಹಿಡಿಯುತ್ತಿದೆ ಶವಸಾಗಿಸುವ ವಾಹನ ಮುಕ್ತಿ…ಬಳಸಿಕೊಳ್ಳಲು ಅಧಿಕಾರಿಗಳಿಗೆ ಇಲ್ಲ ಇಚ್ಛಾಶಕ್ತಿ…

ಬಡಜನತಗೆ ಉಪಯೋಗವಾಗಲೆಂದು ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಕೊಡುಗೆ ನೀಡಿದ ಶವಸಾಗಿಸುವ ಮುಕ್ತಿ ವಾಹನ ಮೂಲೆಗೆ ಸೇರಿದೆ.ನಂಜನಗೂಡು ನಗರಸಭೆ ಆವರಣದಲ್ಲಿ ತುಕ್ಕು ಹಿಡಿಯುತ್ತಾ ಅನಾಥವಾಗಿ ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ...

ನಿವೇದಿತಾ ಗೌಡ weds ಚಂದನ್ ಶೆಟ್ಟಿ…

ಆ ದಿನಗಳು ಬಂತು.ಯುವ ದಸರಾದಲ್ಲಿ ಬಹಿರಂಗವಾಗಿ ಉಂಗುರ ಬದಲಿಸಿ ಗರ್ಲ್ ಫ್ರೆಂಡ್ ನಿವೇದಿತಾ ಗೌಡಗೆ ಮದುವೆಗ ಆಫರ್ ಕೊಟ್ಟ ಚಂದನ್‌ ಶೆಟ್ಟಿ ಕನಸು ನನಸಾಗುವ ದಿನ ಬಂದಿದೆ.ಸ್ಯಾಂಡಲ್ ವುಡ್ ಗೊಂಬೆ...

ಕುಕ್ಕರಳ್ಳಿ ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ…ಅತಿಯಾದ ಮಧ್ಯ ಸೇವನೆ ಶಂಕೆ…

ಕುಕ್ಕರಳ್ಳಿ ಕೆರೆಯ ಬಳಿಯ ನೀರಿನ ತೊಟ್ಟಿಯಲ್ಲಿ ಮೃತದೇಹ ಪತ್ತೆಯಾಗಿದೆ.ವಿದ್ಯುತ್ ಲೈನ್ ಕ್ಲಿಯರ್ ಮಾಡುವ ಸಂಧರ್ಭದಲ್ಲಿ ಲೈನ್ ಮೆನ್ ಗಳ ಕಣ್ಣಿಗೆ ಮೃತದೇಹ ಕಂಡುಬಂದಿದೆ.ನಂತರ ಜಯಲಕ್ಷ್ಮಿ ಠಾಣೆ ಪೋಲಿಸರಿಗೆ ಮಾಹಿತಿ ನೀಡಲಾಗಿದೆ.ಹೆಚ್...

Recent Comments