ಗಂಡನ ಕಿರಿಕ್ ಸಹಿಸದ ಎರಡನೇ ಪತ್ನಿ ಸಜೀವವಾಗಿ ಸುಟ್ಟು ಕೊಂದ ಘಟನೆ ಚಿಕ್ಕಬಳ್ಳಾಪುರ ಚಿಂತಾಮಣಿ ತಾಲೂಕಿನ ಕೇತನಾಯಕನಹಳ್ಳಿ ಬಳಿ ನಡೆದಿದೆ.ಸ್ಲಿಪಿಂಗ್ ಪಿಲ್ಸ್ ಕುಡಿಸಿ ಕಾರು ಸಮೇತ ಸುಟ್ಟು ಹಾಕಿದ ಎರಡನೇ ಪತ್ನಿ ಪೊಲೀಸರ ಅತಿಥಿಯಾಗಿದ್ದಾಳೆ.
ಬೆಂಗಳೂರು ನಗರದ ಕಾಡುಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಧರ್ಮೆಂದ್ರ ತನ್ನ ಎರಡನೇ ಪತ್ನಿಯಿಂದ ಮೃತನಾಗದ ದುರ್ದೈವಿ.ಪತಿಯನ್ನ ಕೊಲೆ ಮಾಡಿ ಜೈಲುಕಂಬಿ ಎಣಿಸುತ್ತಿರುವ ಶಿಲ್ಪ ಎರಡನೇ ಪತ್ನಿ.ಗಂಡನ ಕಿರುಕುಳ ತಾಳದ ಶಿಲ್ಪ ಅಯ್ಯಪ್ಪನಗರದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ಲು. ಅಯ್ಯಪ್ಪನಗರದ ಮನೆಗೂ ಹೋಗುತ್ತಿದ್ದ ಧರ್ಮೇಂದ್ರ ನಡತೆ ಬಗ್ಗೆ ಶಂಕೆ ವ್ಯಕ್ತಪಡಿಸಿ ಕಿರಿಕ್ ಮಾಡುತ್ತಿದ್ದ. ಅನೈತಿಕ ಸಂಭಂಧ ಆರೋಪ ಹೊರೆಸಿ ಕಾಟ ಕೊಡುತ್ತಿದ್ದ ಪತಿಯನ್ನ ಮುಗಿಸಲು ಸ್ಕೆಚ್ ಹಾಕಿದ ಶಿಲ್ಪ ನಿದ್ರೆ ಮಾತ್ರೆಗಳನ್ನ ಸಂಗ್ರಹಿಸಿಟ್ಟಿದ್ದಳು. ಸ್ನೇಹಿತರಾದ ಪ್ರಾವಿಜನ್ ಸ್ಟೋರ್ ಮಾಲೀಕ ಅಂಜಿನಪ್ಪ, ಕಾರು ಚಾಲಕ ಕಾಂತರಾಜು ಸೇರಿ ಮತ್ತೋರ್ವ ಅಭಿಷೇಕ್ ಜೊತೆ ಸೇರಿ ಸಂಚು ರೂಪಿಸಿದ ಶಿಲ್ಪ ಸ್ಲೀಪಿಂಗ್ ಮಾತ್ರೆಗಳನ್ನ ಕುಡಿಸಿ ಕಾರಿನಲ್ಲಿ ಮಲಗಿಸಿ ಬೆಂಕಿಹಚ್ಚಿದ್ದಾಳೆ.ಕಾರಿನ ಸಮೇತ ಧರ್ಮೇಂದ್ರ ಸುಟ್ಟು ಕರುಕಲಾಗಿದ್ದಾನೆ. ಶಿಲ್ಪ, ಅಂಜಿನಪ್ಪ, ಕಾಂತರಾಜು ರನ್ನ ಬಂಧಿಸಿದ ಚಿಂತಾಮಣಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ…