-
ಚಿಕ್ಕಬಳ್ಳಾಪುರ ಕಾರಾಗೃಹಕ್ಕೆ ಹಿರಿಯ ಎಸ್ಪಿ ದಾಳಿ...ಅಕ್ರಮ ಕರ್ಮಕಾಂಡ ಬಯಲು...*
-
ಕಬಿನಿಯಲ್ಲಿ ಚಾಲೆಂಜಿಂಗ್ ಸ್ಟಾರ್ ಸಫಾರಿ...ವಿಡಿಯೋ ವೈರಲ್...*
-
*ನೆರೆ ಸಂತ್ರಸ್ಥ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡದ ಆರೋಪ...ಚುನಾವಣೆ ಬಹಿಷ್ಕರಿಸಲು ನಿರ್ಧಾರ...*
*ನೆರೆ ಸಂತ್ರಸ್ಥ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡದ ಆರೋಪ...ಚುನಾವಣೆ ಬಹಿಷ್ಕರಿಸಲು ನಿರ್ಧಾರ...* -
*ಹೊಸವರ್ಷ ಸ್ವಾಗತಕ್ಕೆ ಸಾಂಸ್ಕೃತಿಕ ನಗರಿ ಸಜ್ಜು...ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಲಡ್ಡು ತಯಾರಿ...*
-
*ಮೈಸೂರಿನಲ್ಲೊಬ್ಬರು ಕಲಿಯುಗದ ಶ್ರವಣಕುಮಾರ...ಬಜಾಜ್ ಸ್ಕೂಟರ್ ನಲ್ಲಿ ತಾಯಿ ಜೊತೆ ದೇಶ ಪರ್ಯಟನೆ...*
-
*ಮೈಸೂರಿನಲ್ಲಿ ಬಾರಿ ಗಾತ್ರದ ಹೆಬ್ಬಾವು ರಕ್ಷಣೆ...*
*ಮೈಸೂರಿನಲ್ಲಿ ಬಾರಿ ಗಾತ್ರದ ಹೆಬ್ಬಾವು ರಕ್ಷಣೆ...*
ಮೈಸೂರಿನಲ್ಲಿ ಉರಗ ತಜ್ಞ ಸ್ನೇಕ್ ಶ್ಯಾಂ ಭಾರಿ ಗಾತ್ರದ ಹೆಬ್ಬಾವನ್ನ ರಕ್ಷಣೆ ಮಾಡಿದ್ದಾರೆ.ಕುವೆಂಪು ನಗರ ಎಂ ಬ್ಲಾಕ್ ಬಳಿ ಕಾಣಿಸಿಕೊಂಡಿದ್ದ ಹೆಬ್ಬಾವನ್ನ ರಕ್ಷಿಸಿದ್ದಾರೆ.
ಬೃಹತ್ ಗಾತ್ರದ ಹಬ್ಬಾವನ್ನ ನೋಡಿ ಬೆಚ್ಚಿಬಿದ್ದ ಸಾರ್ವಜನಿಕರು.
ಸ್ನೇಕ್ ಶ್ಯಾಮ್ ಗೆ ಕರೆಮಾಡಿ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಉರಗತಜ್ಞ ಸ್ನೇಕ್ ಶ್ಯಾಮ್ ಹಾಗೂ ಪುತ್ರ ಸೂರ್ಯರಿಂದ ಹೆಬ್ಬಾವನ್ನ ರಕ್ಷಿಸಿದ್ದಾರೆ.
ಸೆರೆಯಾದ ಹೆಬ್ಬಾವನ್ನ ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ನಗರದ ಹೃದಯ
ಭಾಗದಲ್ಲಿ ಹೆಬ್ಬಾವು ನೋಡಿ ಆತಂಕಗೊಂಡಿದ್ದ ಸಾರ್ವಜನಿಕರಿಗೆ ನಿಟ್ಟುಸಿರು ಬಿಟ್ಟಂತಾಗಿದೆ... -
*ಈ ಬಾರಿಯ ದಸರಾ ಸಿದ್ದತೆಗೆ 25 ಕೋಟಿ ಬೇಕು...ಮೇಯರ್ ತಸ್ನೀಂ ಸರ್ಕಾರಕ್ಕೆ ಒತ್ತಾಯ...*
*ಈ ಬಾರಿಯ ದಸರಾ ಸಿದ್ದತೆಗೆ 25 ಕೋಟಿ ಬೇಕು...ಮೇಯರ್ ತಸ್ನೀಂ ಸರ್ಕಾರಕ್ಕೆ ಒತ್ತಾಯ...*
ಕೊರೊನಾ ಭೀತಿಯ ಹಿನ್ನಲೆ ಸರಳ ದಸರಾ ಆಚರಣೆಗೆ ಭಾರಿ ಚರ್ಚೆಗಳು ನಡೆಯುತ್ತಿರುವ ಬೆನ್ನ ಹಿಂದೆಯೇ ಮೈಸೂರಿನ ಮೇಯರ್ ತಸ್ನೀಂ 25 ಕೋಟಿ ದಸರಾ ಅನುದಾನ ನೀಡಬೇಕೆಂದು ಸರ್ಕಾರವನ್ನ ಒತ್ತಾಯಿಸಿದ್ದಾರೆ.
ನಾಳೆ ಹೈ ಪವರ್ ಕಮಿಟಿ ಮೀಟಿಂಗ್ ನಲ್ಲಿ 25 ಕೋಟಿ ಅನುದಾನಕ್ಕಾಗಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಮೀಟಿಂಗ್ ನಲ್ಲಿ ನಮಗೆ ಕನಿಷ್ಟ 20 ಕೋಟಿಯಾದರು ಹಣ ಕೊಡಿ ಎಂದು ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ನಮಗೆ ಕಳೆದ ವರ್ಷದ ಅನುದಾನವೇ ಇನ್ನೂ ಬಿಡುಗಡೆಯಾಗಿಲ್ಲ.
ಕೊರೊನಾ ಎಫೆಕ್ಟ್ ನಿಂದಾಗಿ ಪಾಲಿಕೆ ಆರ್ಥಕ ಪರಿಸ್ಥಿತಿ ಹದಗೆಟ್ಟಿದೆ.
ಈ ಬಾರಿ ಸರಳ ದಸರಾ ಆಚರಣೆಯಾದರೂ ಸಾರ್ವಜನಿಕರ ಸೌಲಭ್ಯಕ್ಕಾಗಿ ಹಣ ಬೇಕೇ ಬೇಕು ಎಂದು ಆಗ್ರಹಿಸಿದ್ದಾರೆ.
ಮೈಸೂರು ಜನತೆಯ ಹಾಗೂ ಕಾರ್ಪೊರೇಟರ್ ಗಳಲ್ಲಿ ಉತ್ಸಾಹ ಇದೆ.
ದಸರಾ ಫಂಡ್ ಬರುತ್ತೆ ಎಂಬ ನಂಬಿಕೆ ಇರುತ್ತದೆ.
ಯುವದಸರಾ,ಆಹಾರ ಮೇಳ ಇಂತಹ ಕಾರ್ಯಕ್ರಮಗಳಿಗೆ ಖರ್ಚು ಮಾಡಲಿದ್ದ ಹಣ ಸಾರ್ವಜನಿಕರ ಸೌಲಭ್ಯಗಳಿಗೆ ಕೊಡಲಿ.
ನಾಳೆ ನಡೆಯಲಿರುವ ಉನ್ನತಪಟ್ಟದ ಸಭೆಯಲ್ಲಿ ಈ ಪ್ರಸ್ತಾವನೆ ಸಲ್ಲಿಸುತ್ತೇವೆ.
ನಾಳೆ ದಸರಾಗಾಗಿ ಘೋಷಿಸುವ ಹಣವನ್ನ ಮುಖ್ಯಮಂತ್ರಿಗಳು ಶೀಘ್ರದಲ್ಲಿ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು
ದಸರಾ ರೀತಿಯೇ ಮೈಸೂರಿನಲ್ಲಿ ಮತ್ತೊಂದು ಹಬ್ಬ ಆಚರಿಸಲು ಚಿಂತನೆ ಇದೆ ಎಂದ ತಸ್ನೀಂ
ನಾಡ ಹಬ್ಬದಂತೇ 10 ದಿನಗಳ ಕಾಲ ಮೈಸೂರು ಹಬ್ಬ ನಡೆಯಲಿದೆ ಎಂದರು.
ಕೊರೊನಾದಿಂದ ನಷ್ಟದಲ್ಲಿರುವ ಮೈಸೂರಿನ ಚೇತರಿಕೆಗಾಗಿ ಹೊಸ ಪ್ಲ್ಯಾನ್ ರೆಡಿಯಾಗಿದೆ.
ಮೈಸೂರಿನ ಆರ್ಥಿಕ ಅಭಿವೃದ್ಧಿಗಾಗಿ ಮಾರ್ಚ್ ತಿಂಗಳಲ್ಲಿ
ಮೈಸೂರು ಹಬ್ಬ ಆಚರಣೆಗೆ ಚಿಂತನೆ ನಡೆಸಲಾಗಿದೆ ಎಂದರು.
ಮೈಸೂರು ಹಬ್ಬ ಆಚರಿಸಲು ಸಹಕಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ.
ದಸರಾ ಸಂದರ್ಭದಲ್ಲಿದ್ದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮೈಸೂರು ಹಬ್ಬದಲ್ಲಿ ಇರುತ್ತದೆ ಎಂದರು.
ಪ್ರವಾಸಿಗರನ್ನ ಸೆಳೆಯಲು ಮೈಸೂರು ಹಬ್ಬ ಆಚರಣೆ ಎಂದು ಮೇಯರ್ ತಸ್ನಿಂ ಹೇಳಿದ್ದಾರೆ... -
*ಧರ್ಮಸ್ಥಳದಲ್ಲಿ ಹೆಣ್ಣು ಆನೆಮರಿಗೆ ಅದ್ಧೂರಿ ನಾಮಕರಣ...!* ಧರ್ಮಸ್ಥಳದಲ್ಲಿ ಎರಡು ತಿಂಗಳ ಹಿಂದೆ ಜನ್ಮತಾಳಿದ ಹೆಣ್ಣು
*ಧರ್ಮಸ್ಥಳದಲ್ಲಿ ಹೆಣ್ಣು ಆನೆಮರಿಗೆ ಅದ್ಧೂರಿ ನಾಮಕರಣ...!*
ಧರ್ಮಸ್ಥಳದಲ್ಲಿ ಎರಡು ತಿಂಗಳ ಹಿಂದೆ ಜನ್ಮತಾಳಿದ ಹೆಣ್ಣುಮರಿ ಆನೆಗೆ ಇಂದು ನಾಮಕರಣ ಮಾಡಲಾಯಿತು.ವೈಭವದ ಕಾರ್ಯಕ್ರಮದ ಮೂಲಕ ನಾಮಕರಣ ನೆರವೇರಿತು. ಇಂದು ಬೆಳಿಗ್ಗೆ ಆರಂಭವಾದ ಕಾರ್ಯಕ್ರಮ ಕ್ಷೇತ್ರದಲ್ಲಿ ಹೊಸ ಕಳೆ ತುಂಬಿತ್ತು. ಮರಿ ಆನೆ ಹಾಗು ಅದರ ತಾಯಿ ಲಕ್ಷ್ಮೀ ಆನೆಯನ್ನ ಮದುಮಗಳಂತೆ ಸಿಂಗರಿಸಲಾಗಿತ್ತು. ಅಮೃತವರ್ಷಿಣಿ ಸಭಾಭವನದಲ್ಲಿ ತುಲಾ ಲಗ್ನ ಸುಮುಹೂರ್ತದಲ್ಲಿ ನಾಮಕರಣ ನಡೆಯಿತು.
ಆನೆ ಮರಿಗೆ “ಶಿವಾನಿ” ಎಂದು ನಾಮಕರಣ ಮಾಡಲಾಯಿತು. ಶಿವಾನಿ ಮರಿಯನ್ನ ವಿಶೇಷವಾಗಿ ಸಿಂಗರಿಸಲಾಗಿತ್ತು. ಸಭಾಭವನ ಹಾಗೂ ದೇವಾಲಯ ವಠಾರದ ತುಂಬಾ ಶಿವಾನಿ ಕುಣಿದಾಡಿತು. ಶಿವಾನಿಯ ತುಂಟಾಟಕ್ಕೆ ಕಾರ್ಯಕ್ರಮಕ್ಕೆ ಬಂದವರೆಲ್ಲಾ ಫಿದಾ ಆದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.ವಿಶೇಷ ಕಾರ್ಯಕ್ರಮ ಗಮನ ಸೆಳೆಯಿತು... -
ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಆತಂಕ…ಬೆಳ್ಳಂಬೆಳಗ್ಗೆ ಜಾಗೃತಿಗೆ ಮುಂದಾದ ಶಾಸಕ ರಾಮದಾಸ್…
ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಆತಂಕ…ಬೆಳ್ಳಂಬೆಳಗ್ಗೆ ಜಾಗೃತಿಗೆ ಮುಂದಾದ ಶಾಸಕ ರಾಮದಾಸ್… -
ವೈಜ್ಞಾನಿಕ ಯುಗದಲ್ಲೂ ಬಹಿಷ್ಕಾರದ ಪಿಡುಗು… ಮೆಕ್ಯಾನಿಕಲ್ ಇಂಜಿನಿಯರ್ ಕುಟುಂಬ ಹೈರಾಣು…
ವೈಜ್ಞಾನಿಕ ಯುಗದಲ್ಲೂ ಬಹಿಷ್ಕಾರದ ಪಿಡುಗು… ಮೆಕ್ಯಾನಿಕಲ್ ಇಂಜಿನಿಯರ್ ಕುಟುಂಬ ಹೈರಾಣು… -
*ವೃದ್ದ ದಂಪತಿಗೆ ಕೊರೊನಾ ಪಾಸಿಟಿವ್...ಅಪಾರ್ಟ್ ಮೆಂಟ್ ಸೀಲ್ ಡೌನ್...* ಮಹಾರಾಷ್ಟ್ರ ದಿಂದ ಬಂದ ವೃದ್ದ ದಂಪತಿಗೆ ಕೊರೋ
*ವೃದ್ದ ದಂಪತಿಗೆ ಕೊರೊನಾ ಪಾಸಿಟಿವ್...ಅಪಾರ್ಟ್ ಮೆಂಟ್ ಸೀಲ್ ಡೌನ್...*
ಮಹಾರಾಷ್ಟ್ರ ದಿಂದ ಬಂದ ವೃದ್ದ ದಂಪತಿಗೆ ಕೊರೋನಾ ಪಾಸಿಟಿವ್ ಧೃಢವಾದ ಹಿನ್ನಲೆಮೈಸೂರು ವಿವಿ ಪುರಂ ೪ ನೇ ಮುಖ್ಯರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಸೀಲ್ ಡೌನ್ ಮಾಡಲಾಗಿದೆ.ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಿಂದ ಬಂದ ವೃದ್ದ ದಂಪತಿಯ ಆರೋಗ್ಯ ತಪಾಸಣೆ ನಡೆಸಿದಾಗ ಪಾಸಿಟಿವ್ ವರದಿ ಬಂದಿದೆ.ಇಡೀ ಅಪಾರ್ಟ್ ಮೆಂಟ್ ಸೀಲ್ ಡೌನ್ ಮಾಡಲಾಗಿದೆ.೩೦ ಕ್ಕೂ ಹೆಚ್ಚು ಮನೆ ನಿವಾಸಿಗಳನ್ನ ಕ್ವಾರೆಂಟೈನ್ ಮಾಡಲಾಗಿದೆ.ಆರೋಗ್ಯ ಇಲಾಖೆ ಸಿಬ್ಬಂದಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.. -
*ಮುಡಾ ಗೋಲ್ ಮಾಲ್ ಪ್ರಕರಣಕ್ಕೆ ಸಿಕ್ಕಿದೆ ಬಿಗ್ ಇಂಪ್ಯಾಕ್ಟ್...Tv10 ವರದಿ ಎಫೆಕ್ಟ್...* *Tv10 ವರದಿಗೆ ಎಚ್ಚೆತ್ತ ಮ
*ಮುಡಾ ಗೋಲ್ ಮಾಲ್ ಪ್ರಕರಣಕ್ಕೆ ಸಿಕ್ಕಿದೆ ಬಿಗ್ ಇಂಪ್ಯಾಕ್ಟ್...Tv10 ವರದಿ ಎಫೆಕ್ಟ್...*
*Tv10 ವರದಿಗೆ ಎಚ್ಚೆತ್ತ ಮುಡಾ ಅಧಿಕಾರಿಗಳು ತಮ್ಮ ಆಸ್ತಿಯನ್ನ ವಶಪಡಿಸಿಕೊಂಡಿದ್ದಾರೆ.ಇದು ಪವರ್ Tv10 ವರದಿಯ ಬಿಗ್ ಇಂಪ್ಯಾಕ್ಟ್* ಆಗಿದೆ.
ಮೈಸೂರು ನಗರದ ಪ್ರತಿಷ್ಠಿತ ಹೆಬ್ಬಾಳು ೨ ನೇ ಹಂತದ ರಚನೆಗಾಗಿ ವಿವಿಧ ಸರ್ವೆ ನಂಬರ್ ಗಳಲ್ಲಿ ೫ ಎಕ್ರೆ ೨೨ ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.ಭೂಮಾಲೀಕರಿಗೆ ೧,೩೮,೭೫೦ ರೂ ಪರಿಹಾರ ನೀಡಿ ೨ ಪ್ರೋತ್ಸಾಹ ನಿವೇಶನಗಳನ್ನ ನೀಡಲಾಗಿತ್ತು.
ಸದರಿ ಜಮೀನಿನ ಸರ್ವೆ ನಂ ೨೬೬/೩ ರ ೧೦ ಗುಂಟೆ ಜಮೀನಿಗೆ ಭೂ ಮಾಲೀಕರ ಮಕ್ಕಳು ಎನ್.ಓ.ಸಿ ಪಡೆದಿದ್ದಾರೆ.
ಎನ್.ಓ.ಸಿ.ಪಡೆದವರು ನಕಲಿ ದಾಖಲೆ ಸೃಷ್ಠಿಸಿ ಅಲಿನೇಷನ್ ಮಾಡಿಸಿದ್ದಾರೆ.
ಮುಡಾದಲ್ಲೇ ನಕ್ಷೆ ಮಂಜೂರು ಮಾಡಿಸಿಕೊಂಡಿದ್ದಾರೆ.
ಮುಡಾ ಆಸ್ತಿಗೆ ಅಲಿನೇಷನ್ ಮಾಡಿ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ.
ಮಾರಾಟವಾದ ನಿವೇಶನಗಳಿಗೆ ಮುಡಾದಲ್ಲೇ ಖಾತೆ ಆಗಿದೆ.೧೦ ಗುಂಟೆ ಜಮೀನು ಆರ್.ಟಿ.ಸಿ. ಈಗ್ಲೂ ಮುಡಾ ಹೆಸರಲ್ಲೇ ಬರುತ್ತಿದೆ.
ಈ ಅಕ್ರಮವನ್ನ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಮೂಲಕ ಬಯಲಿಗೆಳೆದಿದ್ದಾರೆ.
ಈ ಅಕ್ರಮವನ್ನ ಇತ್ತೀಚೆಗಷ್ಟೆ Tv10 ಸವಿವರವಾಗಿ ಸುದ್ದಿ ಮಾಡಿತ್ತು.Tv10 ವರದಿಗೆ ಎಚ್ಚೆತ್ತ ಮುಡಾ ಆಯುಕ್ತ ಡಿ.ಬಿ.ನಟೇಶ್ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಮ್ಮ ಆಸ್ತಿಯನ್ನ ವಶಪಡಿಸಿಕೊಂಡಿದ್ದಾರೆ.ನಿವೇಶನಗಳಲ್ಲಿ ನಿರ್ಮಿಸಿದ ನಾಲ್ಕು ಐಶಾರಾಮಿ ಮನೆಗಳ ಮೇಲೆ *ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಸ್ತಿ* ಎಂದು ಕೆಂಪು ಬಣ್ಣದಲ್ಲಿ ನಮೂದಿಸಿದ್ದಾರೆ.
ಅಲಿನೇಷನ್ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಆಯುಕ್ತ ಡಿ.ಬಿ.ನಟೇಶ್ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಹಾಗೂ ನಿವೇಶನಗಳ ಖಾತೆ ರದ್ದು ಪಡಿಸುವಂತೆ ಮುಡಾ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಕೋಟ್ಯಾಂತರ ಬೆಲೆ ಬಾಳುವ ಜಾಗ ಇದೀಗ ಮುಡಾ ಸುಪರ್ಧಿಗೆ ಬಂದಿದೆ.
*ಇದು Tv10ವರದಿ ಫಲಶೃತಿಯಾಗಿದೆ...*