32 C
Mysore
Wednesday, September 22, 2021
Home All News ಮೈಸೂರು ಕುರುಬಾರಹಳ್ಳಿ ಸರ್ವೆ ನಂ 4 ರಲ್ಲಿ ಲಲಿತಮಹಲ್ ಪ್ಯಾಲೇಸ್ ಕಾಂಪೌಂಡ್ ನಿರ್ಮಾಣ ಕಾಮಗಾರಿ ಆರಂಭ…

ಮೈಸೂರು ಕುರುಬಾರಹಳ್ಳಿ ಸರ್ವೆ ನಂ 4 ರಲ್ಲಿ ಲಲಿತಮಹಲ್ ಪ್ಯಾಲೇಸ್ ಕಾಂಪೌಂಡ್ ನಿರ್ಮಾಣ ಕಾಮಗಾರಿ ಆರಂಭ…

ಮೈಸೂರಿನ ವಿವಾದಿತ ಜಮೀನಿನಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ದೊರೆತಿದೆ.ಬಿಗಿ ಪೊಲೀಸ್ ಬಂದೋ ಬಸ್ತ್ ನಡುವೆ ಕಾಮಗಾರಿ ಆರಂಭವಾಗಿದೆ.ಮೈಸೂರು ತಾಲೂಕು ಕಸಬಾ ಹೋಬಳಿ ಕುರುಬಾರಹಳ್ಳಿ ಸರ್ವೆ ನಂ 4 ರ ವಿವಾದಿತ ಜಮೀನಿನಲ್ಲಿ ಲಲಿತಮಹಲ್ ಪ್ಯಾಲೇಸ್ ಗೆ ಸಂಭಂಧಿಸಿದಂತೆ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ದೊರೆತಿದೆ. ಸದರಿ ಜಮೀನಿಗೆ ಸಂಭಂಧಿಸಿದಂತೆ ಆರ್.ಟಿ.ಸಿ.ಯ ಕಾಲಂ ನಂ 9 ರಲ್ಲಿ ಖಾತೆ ಮಾಡಿಸಿದ ಸಂಭಂಧ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ರಿವ್ಯೂ ಅರ್ಜಿ ಅಂತಿಮ ಆದಶಕ್ಕೆ ಒಳಪಟ್ಟಿದ್ದರೂ ಕಾಮಗಾರಿ ಆರಂಭವಾಗಿದೆ.

ಈ ಹಿಂದೆ ಕುರುಬಾರಹಳ್ಳಿ ಸರ್ವೆ ನಂ.4 ರ ಜಮೀನು ‘ಬಿ’ ಖರಾಬು ಎಂದು ಆರ್.ಟಿ.ಸಿ.ಯಲ್ಲಿ ಧೃಢೀಕರಣವಾಗಿತ್ತು.ಈ ಮಧ್ಯೆ ಉಚ್ಚನ್ಯಾಯಾಲಯ ಖಾತೆದಾರರ ಪರವಾಗಿ ಆದೇಶ ನೀಡಿತ್ತು.ಅಲ್ಲದೆ ಕಂಟೆಂಪ್ಟ್ ಮಾಡಿದ ವ್ಯಕ್ತಿಗಳಿಗೆ ಖಾತೆ ಮಾಡಿತ್ತು.ಆದರೂ ಪ್ರಕರಣ ಇನ್ನೂ ಬಾಕಿ ಇರುವುದು ದಾಖಲೆಗಳು ತಿಳಿಸುತ್ತದೆ.ರಾಜಮಾತೆ ಶ್ರೀ ಪ್ರಮೋದಾ ದೇವಿ ಒಡೆಯರ್ ರವರು ಸಕ್ಷಮ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ.ಮೇಲ್ಮನವಿ ಸಲ್ಲಿಸಲು ಮೈಸೂರು ತಹಸೀಲ್ದಾರ್ ರವರು ದಿನಾಂಕ 19-8-2021 ರಂದು ಹಿಂಬರಹವನ್ನೂ ನೀಡಿದ್ದಾರೆ.ಇವೆಲ್ಲವುಗಳ ಮಧ್ಯೆ ಆರ್.ಟಿ.ಸಿ.ಕಲಂ 9 ರಲ್ಲಿ ಖಾತೆ ಮಾಡಿಸಿದ ಸಂಭಂಧ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ರಿವ್ಯೂ ಅರ್ಜಿ ಅಂತಿಮ ಆದೇಶಕ್ಕೆ ಒಳಪಟ್ಟಿದೆ. ಇಂತಹ ಸಂಧರ್ಭದಲ್ಲಿ ಸದರಿ ಸ್ಥಳದಲ್ಲಿ ಯಾವುದೇ ಕಾಮಗಾರಿಗಳು ನಡೆಯಬಾರದೆಂಬ ನಿಯಮಗಳಿವೆ.ಎಲ್ಲವನ್ನೂ ಗಾಳಿಗೆ ತೂರಿರುವ ಪ್ರವಾಸೋದ್ಯಮ ಇಲಾಖೆ ಲಲಿತಮಹಲ್ ಪ್ಯಾಲೇಸ್ ಪರವಾಗಿ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿರುವುದು ಸೂಕ್ತವೇ…? ಎಂಬ ಪ್ರಶ್ನೆ ಎದುರಾಗಿದೆ.ಈ ಬೆಳವಣಿಗೆ ಬಗ್ಗೆ ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...

Recent Comments