TV10 Kannada Exclusive

ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ…ಭಾರಿ ಪ್ರಮಾಣದ ಎಂಡಿಎಂಎ ವಶಕ್ಕೆ…

ಮೈಸೂರು,ಜು26,Tv10 ಕನ್ನಡ ಮಾದಕ ವಸ್ತು ತಯಾರಿಕ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ ಭಾರಿ ಪ್ರಮಾಣದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.ಮೈಸೂರಿನ ಹೊರವಲಯದ ರಿಂಗ್ ರಸ್ತೆ ಬಳಿ ರಹಸ್ಯವಾಗಿ ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ನಡೆಸಲಾಗಿದೆ.50 ಕೆಜಿಗೂ ಹೆಚ್ಚು ಎಂಡಿಎಂಎ ವಶಕ್ಕೆ ಪಡೆದಿದ್ದಾರೆಂದು ಹೇಳಲಾಗಿದೆ.ಮಹಾರಾಷ್ಟ್ರದಿಂದ ಬಂದ ಮಾದಕವಸ್ತು ನಿಯಂತ್ರಣಾ ಘಟಕದ ಅಧಿಕಾರಿಗಳು ಮೈಸೂರು ಎನ್.ಆರ್.ಠಾಣಾ ಪೊಲೀಸರ ನೆರವಿನಿಂದ ದಾಳಿ ನಡೆಸಿದ್ದಾರೆ.ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.ಕೋಟ್ಯಾಂತರ ಬೆಲೆಯ ಎಂಡಿಎಂಎ
Read More

ಗಾಂಜಾ ವ್ಯಸನಿಗಳ ವಿರುದ್ದ ಮೇಟಗಳ್ಳಿ ಠಾಣಾ ಪೊಲೀಸರ ಸಮರ…ಕಾರ್ಯಾಚರಣೆಗೆ ಕತ್ತಲು ಅಡ್ಡಿ…ಕೆಟ್ಟು ನಿಂತ ಬೀದಿ ದೀಪಗಳು…ಕಣ್ಮುಚ್ಚಿ ಕುಳಿತ ಪಾಲಿಕೆ ಅಧಿಕಾರಿಗಳು…

ಮೈಸೂರು,ಜು25,Tv10 ಕನ್ನಡ ಗಾಂಜಾ ವ್ಯಸನಿಗಳ ವಿರುದ್ದ ಮೇಟಗಳ್ಳಿ ಠಾಣಾ ಪೊಲೀಸರು ಸಮರ ಸಾರಿದ್ದಾರೆ.ಮೇಟಗಳ್ಳಿಯ ಸ್ಮಶಾನದಲ್ಲಿ ಗಾಂಜಾ ವ್ಯಸನಿಗಳ ಕಾಟಕ್ಕೆ ಬ್ರೇಕ್ ಹಾಕಲು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಆದ್ರೆ ಪೊಲೀಸರ ಕಾರ್ಯಾಚರಣೆಗೆ ನಗರ ಪಾಲಿಕೆ ಅಧಿಕಾರಿಗಳು ಸ್ಪಂದಿಸದಿರುವುದು ವಿಷಾಧನೀಯ.ಇಂದು ಸ್ಮಶಾನದಲ್ಲಿ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.ಇನ್ಸ್ಪೆಕ್ಟರ್ ಅರುಣ್ ರವರು ತಡಮಾಡದೆ ತಮ್ಮ ಸಿಬ್ಬಂದಿಗಳ ಸಮೇತ ಸ್ಮಶಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ.ಆದ್ರೆ ದಾಳಿ ನಡೆಸಿದ ಸಮಯದಲ್ಲಿ ಬೀದಿ ದೀಪಗಳು ಕೆಟ್ಟುನಿಂತ ಪರಿಣಾಮ
Read More

ಸಿಡಿಮದ್ದು ಸ್ಪೋಟ…ಮಹಿಳೆಗೆ ಗಾಯ…ಕವರ್ ಓಪನ್ ಮಾಡಿದಾಗ ಘಟನೆ…

ಹುಣಸೂರು,ಜು25,Tv10 ಕನ್ನಡ ಮನೆ ಬಳಿ ದೊರೆತ ಕವರ್ ಒಂದು ಮಹಿಳೆಯೊಬ್ಬಳನ್ನ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ.ಕವರ್ ಓಪನ್ ಮಾಡಿದಾಗ ಸ್ಪೋಟಗೊಂಡು ಮಹಿಳೆಗೆ ಗಂಭೀರ ಗಾಯವಾಗಿದೆ.ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಹುಳಿಯಾಳು ಗ್ರಾಮದಲ್ಲಿ ಘಟನೆ ನಡೆದಿದೆ.ಕಮಲಮ್ಮ (54) ಸ್ಪೋಟದಿಂದ ಗಾಯಗೊಂಡುಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…
Read More

ಮೈಸೂರು ನಗರ ವ್ಯಾಪ್ತಿಯ 37 ಪಿಎಸ್ಸೈ ಗಳಿಗೆ ವರ್ಗಾವಣೆ…ಪೊಲೀಸ್ ಕಮೀಷನರ್ ಆದೇಶ…

ಮೈಸೂರು ನಗರ ವ್ಯಾಪ್ತಿಯ 37 ಪಿಎಸ್ಸೈ ಗಳಿಗೆ ವರ್ಗಾವಣೆ…ಪೊಲೀಸ್ ಕಮೀಷನರ್ ಆದೇಶ… ಮೈಸೂರು,ಜು24,Tv10 ಕನ್ನಡ ಮೈಸೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳ 37 ಪಿಎಸ್ಸೈ ಗಳಿಗೆ ವರ್ಗಾವಣೆ ಮಾಡಲಾಗಿದೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶಿಸಿದ್ದಾರೆ.ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದ್ದು ತಕ್ಷಣವೇ ಜಾರಿಗೆ ಬರುವಂತೆ ಆದೇಶಿಸಿದ್ದಾರೆ…
Read More

ನ್ಯಾಯಾಲಯವನ್ನೇ ಯಾಮಾರಿಸಿದ ಭೂಪ…ಒಂದೇ ಆಸ್ತಿ ಪ್ರತ್ಯೇಕ ಆಧಾರ್ ಕಾರ್ಡ್ ಬಳಸಿ ಆರೋಪಿಯ ಜಾಮೀನಿಗೆ ಬಳಕೆ…ಆಸ್ತಿ ಮಾಲೀಕನ ವಿರುದ್ದ FIR…

ಮೈಸೂರು,ಜು22,Tv10 ಕನ್ನಡ ಒಂದೇ ಆಸ್ತಿಯನ್ನ ಬೇರೆ ಬೇರೆ ಆಧಾರ್ ಕಾರ್ಡ್ ಗಳನ್ನ ಬಳಸಿ ವಿವಿದ ನ್ಯಾಯಾಲಯಗಳಲ್ಲಿ ಆರೋಪಿಗಳ ಜಾಮೀನಿಗೆ ಬಳಸಿದ ಆರೋಪದ ಮೇಲೆ ಆಸ್ತಿ ಮಾಲೀಕನ ವಿರುದ್ದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಹೆಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ವೀರಭದ್ರಶೆಟ್ಟಿ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಆದೇಶದಂತೆ ನ್ಯಾಯಾಲಯದ ಸಿಬ್ಬಂದಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದ ಆರೋಪಿ ಅಪ್ಸರ್ ಎಂಬಾತನಿಗೆ
Read More

ನಾಳೆಯಿಂದ ಮೂರು ದಿನಗಳ ಕಾಲ ಡಿಸಿಎಂ ಅಲಭ್ಯ..

ಬೆಂಗಳೂರು,ಜು21,Tv10 ಕನ್ನಡ ಅನ್ಯಕಾರ್ಯ ನಿಮಿತ್ತ ನಾಳೆಯಿಂದ ಮೂರು ದಿನಗಳ ಕಾಲ ಯಾರನ್ನೂ ಭೇಟಿ ಆಗಲು ಸಾಧ್ಯವಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ತಾವೂ ಯಾರನ್ನೂ ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ವಿಷಾದಿಸುತ್ತೇನೆ. ಯಾರೂ ತಪ್ಪು ತಿಳಿಯಬಾರದು ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ…
Read More

ಎಬಿಜಿಪಿ ಮೈಸೂರು ಜಿಲ್ಲಾ ಉಪಾಧ್ಯಕ್ಷರಾಗಿ ವಿಕ್ರಂ ಅಯ್ಯಂಗಾರ್ ನೇಮಕ…

ಮೈಸೂರು,ಜು21,Tv10 ಕನ್ನಡ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಜಿಲ್ಲಾ ಉಪಾಧ್ಯಕ್ಷರಾಗಿ ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್ ನೇಮಕಗೊಂಡಿದ್ದಾರೆ. ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಎಬಿಜಿಪಿ ಜಿಲ್ಲಾ ಅಭ್ಯಾಸ ವರ್ಗದಲ್ಲಿ ವಿಕ್ರಂ ಅಯ್ಯಂಗಾರ್ ರವರಿಗೆ ನೇಮಕ ಪತ್ರವನ್ನು ಕರ್ನಾಟಕ ಪ್ರಾಂತ ಅಧ್ಯಕ್ಷರಾದ ನರಸಿಂಹ ನಕ್ಷತ್ರಿ ರವರು ಪತ್ರ ನೀಡಿ ಶುಭ ಕೋರಿದರು.ಈ ಸಂದರ್ಭದಲ್ಲಿ ಪ್ರಾಂತದ ಕಾರ್ಯದರ್ಶಿ ಗಾಯಿತ್ರಿ ನಾಡಿಗ್, ವನವಾಸಿ ಕಲ್ಯಾಣ ಪ್ರಾಂತದ ಕೋಶಾಧ್ಯಕ್ಷ ಉಮೇಶ್ ಪ್ರಸಾದ್, ಅಖಿಲ
Read More

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ…540 ಗ್ರಾಂ ಗಾಂಜಾ ವಶ…

ನಂಜನಗೂಡು,ಜು21,Tv10 ಕನ್ನಡ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ನಂಜನಗೂಡು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.ಮೊಹಮ್ಮದ್ ಮಸೂದ್ (30) ಬಂಧಿತ ಆರೋಪಿ.ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿಬೈಕ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.ಇನ್ಸ್ಪೆಕ್ಟರ್ ಸಿ.ಎಂ ರವೀಂದ್ರ, ಪಿಎಸ್ಐ ಕೃಷ್ಣಕಾಂತಕೋಳಿ ನೇತೃತ್ವದ ತಂಡದಿಂದ ದಾಳಿ ನಡೆಸಿ ಮೊಹಮ್ಮದ್ ಮಸೂದ್ ವಶಕ್ಕೆ ಪಡೆದಿದ್ದಾರೆ.29 ಪೊಟ್ಟಣಗಳ ಒಟ್ಟು 540 ಗ್ರಾಂ ಗಾಂಜಾ, 550 ರೂ. ನಗದು ಹಾಗೂ ದ್ವಿಚಕ್ರ ವಾಹನ ವಶ ಪಡಿಸಿಕೊಂಡಿದ್ದಾರೆ.ನಂಜನಗೂಡು ಪಟ್ಟಣ
Read More

ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ…ಸಿಎಂ ಸಿದ್ದರಾಮಯ್ಯಗೆ ಡಿಕೆಶಿ ಸಾಥ್…

ಹೆಚ್.ಡಿ.ಕೋಟೆ,ಜು20,Tv10 ಕನ್ನಡ ಹೆಚ್.ಡಿ.ಕೋಟೆ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಬಾಗಿನ ಅರ್ಪಿಸಿದರು.ಸಂಪ್ರದಾಯದಂತೆ ಭರ್ತಿಯಾದ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.ಸಿಎಂ‌ ಸಿದ್ದರಾಮಯ್ಯ ಗೆ ಡಿಸಿಎಂ ಡಿಕೆ.ಶಿವಕುಮಾರ್, ಸಚಿವ ಹೆಚ್.ಸಿ ಮಹದೇವಪ್ಪ ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಹಲವರು ಸಾಥ್ ನೀಡಿದರು.ನಾಡಿನ ಒಳಿತಿಗಾಗಿ ನಾಯಕರು ಪ್ರಾರ್ಥನೆ ಸಲ್ಲಿಸಿದರು…
Read More

ಮತ್ತೆ ಶುರುವಾಯ್ತು ಖಾಸಗಿ ಫೈನಾನ್ಸ್ ಗಳ ಹಾವಳಿ…ಮನೆಗೆ ಬೀಗ ಜಡಿಸ ಸಿಬ್ಬಂದಿ…ಮನೆ ಮಾಲೀಕರ ಪರ ನಿಂತ ರೈತ ಮುಖಂಡರು…

ನಂಜನಗೂಡು,ಮೇ8,Tv10 ಕನ್ನಡ ಖಾಸಗಿ ಫೈನಾನ್ಸ್ ಗಳಿಗೆ ಸರ್ಕಾರ ಖಡಕ್ ವಾರ್ನಿಂಗ್ ನೀಡಿದ್ದರೂ ಲೆಕ್ಕಿಸದ ಸಿಬ್ಬಂದಿಗಳು ತಮ್ಮ ದರ್ಪ ಮುಂದುವರೆಸಿದ್ದಾರೆ.ನಂಜನಗೂಡಿನಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಮತ್ತೆ ಚಾಲ್ತಿಗೆ ಬಂದಿದೆ.ವಾಸದ ಮನೆಗೆ ಬೀಗ ಹಾಕಿ ಮನೆ ಗೋಡೆಗಳ ಮೇಲೆ ಕಪ್ಪುಶಾಯಿಯಲ್ಲಿ ಬರೆದು ದರ್ಪ ಪ್ರದರ್ಶಿಸಿದ್ದಾರೆ. ಸೂರಳ್ಳಿ ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಮಲ್ಲಿಗಮ್ಮ ಎಂಬುವರು. 30.11.2023 ರಂದು ವಾಸದ ಮನೆಯ ಪತ್ರಗಳನ್ನು ನೀಡಿ 5 ಲಕ್ಷ ರೂಗಳನ್ನು ಮೈಸೂರು ಮೂಲದ ಜನ
Read More