TV10 Kannada Exclusive

ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ…ನಟಿ ಮಿಲನನಾಗರಾಜ್ ರಿಂದ ಉದ್ಘಾಟನೆ…

ಮೈಸೂರು,ಅ16,Tv10 ಕನ್ನಡ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಆಯೋಜಿಸಿದ್ದ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಇಂದು ನಗರದ ಐನಾಕ್ಸ್ ಮಾಲ್ ನಲ್ಲಿ ಚಲನಚಿತ್ರ ನಟಿ ಮಿಲನಾ ನಾಗರಾಜ್ ಉದ್ಘಾಟಿಸಿದರು. ಕನ್ನಡದ ಖ್ಯಾತ ನಟರಾದ ಡಾ. ರಾಜಕುಮಾರ್ ಮತ್ತು ಖ್ಯಾತ ಹಾಸ್ಯ ನಟರಾದ ನರಸಿಂಹರಾಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಿದರು. ಉದ್ಘಾಟನೆಗೊಂಡ ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಪ್ರೇಕ್ಷಕರು ಪಾಲ್ಗೊಂಡು ಚಿತ್ರೋತ್ಸವವನ್ನ ಯಶಸ್ವಿಯಾಗಿಸಿದರು. ಈ ಸಂದರ್ಭದಲ್ಲಿ ದಸರಾ ಚಲನಚಿತ್ರೋತ್ಸವ ಸಮಿತಿಯ
Read More

ಯುವ ದಸರಾ ಪೋಸ್ಟರ್ ಬಿಡುಗಡೆ..

ಮೈಸೂರು,ಅ16,Tv10 ಕನ್ನಡ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ “ಯುವ ದಸರಾ” ಪೋಸ್ಟರ್ ಅನ್ನು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಯುವ ದಸರಾ ಉಪಸಮಿತಿಯ ಉಪವಿಶೇಷಾಧಿಕಾರಿ ಸೀಮಾ ಲಾಟ್ಕರ್ ಅವರು, ಕಾರ್ಯಾಧ್ಯಕ್ಷ ಕೆ.ಆರ್.ರಕ್ಷೀತ್ ಅವರು, ಸಮನ್ವಯಾಧಿಕಾರಿ ಎಂ.ಕೆ.ಸವಿತಾ ಅವರು, ಕಾರ್ಯದರ್ಶಿ ಶುಭಾ, ಸಹ ಕಾರ್ಯದರ್ಶಿ ಹೆಚ್.ಚನ್ನಪ್ಪ ಹಾಜರಿದ್ದರು…
Read More

ನಾದಭ್ರಹ್ಮನಿಗೆ ಸರಸ್ವತಿ ವಿಗ್ರಹ ನೀಡಿ ಗೌರವ…

ಮೈಸೂರು,ಅ15,Tv10 ಕನ್ನಡ ದಸರಾ ಉದ್ಘಾಟಿಸಿದ ಹಂಸಲೇಖಾಗೆ ಸರಸ್ವತಿಯ ಗಂಧದ ವಿಗ್ರಹ ನೀಡಿ ಗೌರವಿಸಲಾಯಿತು.ವೀಣಾಧಾರಿಯಾದ ಸರಸ್ವತಿ ವಿಗ್ರಹವನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿ ಗೌರವಿಸಿದರು…
Read More

ದಸರಾ 2023:ವಿದ್ಯುಕ್ತ ಚಾಲನೆ ನೀಡಿದ ನಾದಭ್ರಹ್ಮ ಹಂಸಲೇಖಾ…

ಮೈಸೂರು,ಅ15,Tv10 ಕನ್ನಡ ಮೈಸೂರು ದಸರಾ 2023 ಕ್ಕೆಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಿದ್ದಾರೆ.ಬೆಳಗ್ಗೆ 10:17 ಕ್ಕೆ ದಸರಾ ಉದ್ಘಾಟನೆ ಮಾಡಲಾಯಿತು.ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಕಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಹಲವರಿಂದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದರು…
Read More

ಮಿನಿ ವಿಧಾನ ಸೌಧದಲ್ಲಿ ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ…ಅಧಿಕಾರಿ ಸಿಬ್ಬಂದಿಗಳಿಗೆ ಖಡಕ್ ಸೂಚನೆ…

ಮಿನಿ ವಿಧಾನ ಸೌಧದಲ್ಲಿ ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ…ಅಧಿಕಾರಿ ಸಿಬ್ಬಂದಿಗಳಿಗೆ ಖಡಕ್ ಸೂಚನೆ… ಮೈಸೂರು,ಅ14,Tv10 ಕನ್ನಡ ಮೈಸೂರು ಮಿನಿ ವಿಧಾನಸೌಧ ತಹಸೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.ವಿವಿದ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಸಮ್ಮುಖದಲ್ಲಿ ಅಹವಾಲು ಸ್ವೀಕರಿಸಿದರು.ಒಟ್ಟು 9 ಅರ್ಜಿಗಳನ್ನ ಸ್ವೀಕರಿಸಲಾಗಿದ್ದು ಸಂಭಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ರವಾನಿಸಿ ಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದರು.ಡಿವೈಎಸ್ಪಿಗಳಾದ ವಿ.ಕೃಷ್ಣಯ್ಯ ಹಾಗೂ ಮಾಲತೇಶ್ ನೇತೃತ್ವದಲ್ಲಿ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.ಸಾರ್ವಜನಿಕರು ದೂರು ನೀಡಲು ಬಂದಾಗ
Read More

ಮೈಸೂರು:ಸರಣಿ ಅಪಘಾತ…ಎರಡು ಬಸ್ ಹಾಗೂ ಕಾರು ನಜ್ಜುಗುಜ್ಜು…15 ಕ್ಕೂ ಹೆಚ್ಚು ಮಂದಿಗೆ ಗಾಯ…ಉರುಳಿ ಬಿದ್ದ ದಸರಾ ಲೈಟಿಂಗ್ ಕಮಾನು…

ಮೈಸೂರು:ಸರಣಿ ಅಪಘಾತ…ಎರಡು ಬಸ್ ಹಾಗೂ ಕಾರು ನಜ್ಜುಗುಜ್ಜು…15 ಕ್ಕೂ ಹೆಚ್ಚು ಮಂದಿಗೆ ಗಾಯ…ಉರುಳಿ ಬಿದ್ದ ದಸರಾ ಲೈಟಿಂಗ್ ಕಮಾನು… ಮೈಸೂರು,ಅ13,Tv10 ಕನ್ನಡ ಎರಡು ಬಸ್ ಹಾಗೂ ಒಂದು ಕಾರ್ ನಡುವೆ ನಡೆದ ಅಪಘಾತದಲ್ಲಿ 15 ಕ್ಕೂ ಹೆಚ್ಚುಮಂದಿ ಗಾಯಗೊಂಡ ಘಟನೆ ಮೈಸೂರಿನ ಮಣಿಪಾಲ್ ಆಸ್ಪತ್ರೆ ಬಳಿ ನಡೆದಿದೆ.ಢಿಕ್ಕಿ ಹೊಡೆದ ರಭಸಕ್ಕೆ ನಿಯಂತ್ರಣ ಕಳೆದುಕೊಂಡ ಬಸ್ ದಸರಾ ಲೈಟಿಂಗ್ ಹಾಕಲು ಅಳವಡಿಸಲಾಗಿದ್ದ ಕಮಾನಿಗೆ ಢಿಕ್ಕಿ ಹೊಡೆದಿದೆ.ಕಬ್ಬಿಣದ ಕಮಾನು ಬಸ್ ಮೇಲೆ ಉರುಳಿ
Read More

ದಸರಾ:ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಗೆ ಅಧಿಕೃತ ಆಹ್ವಾನ…

ಮೈಸೂರು,ಅ13,Tv10 ಕನ್ನಡ ನಾಡಹಬ್ಬ ಮೈಸೂರು ದಸರಾ ಉತ್ಸವದ ಹಿನ್ನೆಲೆ ರಾಜ್ಯ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ರವರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ ನೀಡಿದರು.ಅರಮನೆಯಲ್ಲಿರುವ ನಿವಾಸದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾಗಿ ಸಾಂಪ್ರದಾಯಿಕವಾಗಿ ಫಲತಾಂಬೂಲ ನೀಡಿ ದಸರಾ ಉತ್ಸವಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.ಇದೇ ವೇಳೆ ಸರ್ಕಾರದಿಂದ ಪ್ರತಿವರ್ಷ ನೀಡಲಾಗುವ ಗೌರವಧನದ ಚೆಕ್ ನೀಡಿದರು.ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ
Read More

ನಗರಪಾಲಿಕೆ ಅಧಿಕಾರಿಗಳ ಕಾರ್ಯಾಚರಣೆ…ಲಕ್ಷಾಂತರ ಮೌಲ್ಯದ ನಿಷೇಧಿತ ಪ್ಲಾಸ್ಟಿಕ್ ವಶ…

ಮೈಸೂರು,ಅ12,Tv10 ಕನ್ನಡ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುವ ಮಳಿಗೆ ಹಾಗೂ ಗೊಡೌನ್ ಗಳ ಮೇಲೆ ದಾಳಿ ನಡೆಸಿದ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ಪದಾರ್ಥಗಳನ್ನ ವಶಪಡಿಸಿಕೊಂಡಿದ್ದಾರೆ.ಡಿ.ದೇವರಾಜ ಅರಸ್ ರಸ್ತೆಯಲ್ಲಿರುವ ರಮೇಶ್ ಏಜೆನ್ಸಿ,ಭಾಗ್ಯಲಕ್ಷ್ಮಿ ಏಜೆನ್ಸಿ ಸೇರಿದಂತೆ ನಾಲ್ಕು ಕಡೆ ದಾಳಿ ನಡೆಸಿದ ಅಧಿಕಾರಿಗಳು 9734 ಕೆಜಿ ನಿಷೇಧಿತ ಪ್ಲಾಸ್ಟಿಕ್ ಪದಾರ್ಥಗಳನ್ನ ವಶಪಡಿಸಿಕೊಂಡಿದ್ದಾರೆ.ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಸಮ್ಮುಖದಲ್ಲೇ ಕಾರ್ಯಾಚರಣೆ ನಡೆದಿದೆ.ಕಾರ್ಯಾಚರಣೆ ವೇಳೆ ಸ್ಥಳೀಯ ಕಾರ್ಪೊರೇಟರ್ ಪ್ರಮೀಳಾ
Read More

ಚಾಮುಂಡಿಬೆಟ್ಟ ಸೇರಿದಂತೆ ಟೌನ್ ಹಾಲ್ ಒಳಾವರಣ ಹೊರತು ಪಡಿಸಿ ನಗರದಲ್ಲಿ 30 ಗಂಟೆಗಳ ಕಾಲ 144 ಸೆಕ್ಷನ್ ಜಾರಿ…ನಗರ ಪೊಲೀಸ್

ಮೈಸೂರು,ಅ12,Tv10 ಕನ್ನಡ ಮಹಿಷ ದಸರಾ ಹಾಗೂ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಹಿನ್ನಲೆ ಮೈಸೂರು ನಗರದಲ್ಲಿ ಅಕ್ಟೋಬರ್ 12 ಮಧ್ಯ ರಾತ್ರಿಯಿಂದ ಅಕ್ಟೋಬರ್ 14 ಮುಂಜಾನೆ 6 ಗಂಟೆ ವರೆಗೆ ಚಾಮುಂಡಿ ಬೆಟ್ಟ ಸೇರಿದಂತೆ ಟೌನ್ ಹಾಲ್ ಒಳ ಆವರಣ ಹೊರತು ಪಡಿಸಿ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಆದೇಶಿಸಿದ್ದಾರೆ.ಮಹಿಷ ದಸರಾ ಆಚರಣಾ ಸಮಿತಿ ಹಾಗೂ ಕೆಲವು ಸಂಘಸಂಸ್ಥೆಗಳು ನೀಡಿರುವ ಕರೆ
Read More

ದಸರಾ 2023:ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಧಿಕೃತ ಆಹ್ವಾನ…

ಮೈಸೂರು,ಅ11,Tv10 ಕನ್ನಡ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ರವರು ಇಂದು ಅಧಿಕೃತವಾಗಿ ಆಹ್ವಾನಿಸಿದರು. ಮೈಸೂರಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿ ಮಾಡಿ, ಶಾಲು ಹೊದಿಸಿ, ವಿಶೇಷ ಪುಷ್ಪಮಾಲಿಕೆಯೊಂದಿಗೆ ಸನ್ಮಾನಿಸಿ, ಫಲತಾಂಬೂಲದ ಜೊತೆಗೆ ಆಹ್ವಾನ ಪತ್ರಿಕೆ ನೀಡುವ ಮೂಲಕ ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಆತ್ಮೀಯವಾಗಿ ಕೋರಿದರು. ಈ ವೇಳೆ ಮೇಯರ್ ಶಿವಕುಮಾರ್, ಶಾಸಕರಾದ ರವಿಶಂಕರ್,
Read More