32 C
Mysore
Thursday, June 4, 2020
Home All News ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡಿ…ಮೇಯರ್ ತಸ್ನೀಂ ಸರ್ಕಾರಕ್ಕೆ ಮನವಿ…

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡಿ…ಮೇಯರ್ ತಸ್ನೀಂ ಸರ್ಕಾರಕ್ಕೆ ಮನವಿ…

ಪವಿತ್ರ ರಂಜಾನ್ ಹಬ್ಬ ಹಿನ್ನಲೆ ಮೈಸೂರಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅನುಮತಿ ನೀಡುವಂತೆ ಪ್ರಥಮಪ್ರಜೆ ತಸ್ನೀಂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಒಂದುವೇಳೆ ಈದ್ಗಾ ಮೈದಾನದಲ್ಲಿ ಅನುಮತಿ ಇಲ್ಲದಿದ್ದಲ್ಲಿ ಮಸೀದಿಗಳಲ್ಲಾದ್ರೂ ಪ್ರಾರ್ಥನೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.ನಾವು ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಮಾಡುತ್ತೇವೆ.ನಿಮ್ಮ ಷರತ್ತುಗಳ‌ ಅನ್ವಯ ಪ್ರಾರ್ಥನೆ ಮಾಡುತ್ತೇವೆ.ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಿ ಎಂದು ಕಳಕಳಿಯ ಮನವಿ ಮಾಡಿದ್ದಾರೆ.ಕೊರೊನಾ ಹಾವಳಿಯಿಂದ ಮಸೀದಿ ಮಂದಿರಗಳಲ್ಲಿ ಜನ ಸೇರಬಾರದೆಂಬ ಉದ್ದೇಶದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲಾಗಿದೆ.ಸೋಮವಾರ ಪವಿತ್ರ ರಂಜಾನ್ ಹಬ್ಬ ಇದೆ.ಮುಸ್ಲಿಂ ಸಮುದಾಯದವರಿಗೆ ಸಾಮೂಹಿಕ ಪ್ರಾರ್ಥನೆ ಪ್ರಾಮುಖ್ಯತೆ ಪಡೆಯುತ್ತದೆ.ಧರ್ಮಗುರುಗಳ ಸಂದೇಶ ರವಾನೆ ಆಗುತ್ತದೆ.ಈ ಕ್ಷಣಕ್ಕಾಗಿ ಇಡೀ ಸಮುದಾಯ ಕಾದಿರುತ್ತದೆ.ಕೊರೊನಾ ವಿಚಾರದಲ್ಲಿ ಧಾರ್ಮಿಕ ಚಟುವಟಿಕೆಗಳು ಸ್ಥಗಿತಗೊಂಡಿದೆ.ಈ ವರ್ಷ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ.ಆದರೆ ಮೇಯರ್ ತಸ್ನೀಂ ರವರು ಸಾಮೂಹಿಕ ಪ್ರಾರ್ಥನೆಗಾಗಿ ಭರ್ಜರಿ ಬ್ಯಾಂಟಿಂಗ್ ಮಾಡಿದ್ದಾರೆ. ಸರ್ಕಾರ ತಸ್ನೀಂ ಮನವಿಗೆ ಪುರಸ್ಕಾರ ಮಾಡುತ್ತೋ ಇಲ್ವವೋ ಗೊತ್ತಿಲ್ಲ ಆದರೆ ಮನವಿ ಇದೀಗ ಸರ್ಕಾರಕ್ಕೆ ತಲುಪಿದೆ. ಇದರವಜೊತೆಗರ
ರಂಜಾನ್ ಹಬ್ಬ ಹಿನ್ನಲೆ ನಾಳೆ ಭಾನುವಾರ ಲಾಕ್ ಡೌನ್ ಗೆ ರಿಲಾಕ್ಸೇಷನ್ ಕೊಡ ನೀಡುವಂತೆ ಮನವಿ ಮಾಡಿದ್ದಾರೆ.
ಸೋಮವಾರ ಹಬ್ಬ ಖಚಿತವಾದ್ರೆ ಭಾನುವಾರ ಲಾಕ್ ಡೌನ್ ರಿಲಾಕ್ಸೇಷನ್ ಗೆ ಅನುಮತಿ ಕೋರಿದ್ದಾರೆ.ಹಬ್ಬದ ಹಿಂದಿನ ದಿನವಾದರಿಂದ ಭಾನುವಾರ ಅಗತ್ಯ ಪದಾರ್ಥ ಖರೀದಿ‌ ಮಾಡಲು ಅವಕಾಶ ಮಾಡಿ ಕೊಡುವಂತೆ ಮನವಿ ಮಾಡಿದ್ದಾರೆ.
ಹಾಗೊಂದು ವೇಳೆ ಒಂದು ದಿನ ರಿಲಾಕ್ಸೇಷನ್ ಸಾಧ್ಯವಿಲ್ಲದಿದ್ರೆ ಸಂಜೆ ವೇಳೆಗಾದ್ರೂ ಖರೀದಿಗೆ ಅವಕಾಶ ಮಾಡಿಕೊಡಿ ಎಂದಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಅತೀಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದರೆ ಕಾನೂನು ರೀತ್ಯಾ ಕ್ರಮ

ಮೈಸೂರು ಜೂನ್.3. ಮೈಸೂರು ನಗರದ ಜೆ.ಎನ್.ನರ್ಮ್-ಬಿ.ಎಸ್.ಯು.ಪಿ ಹಂತ-1 ಮತ್ತು ಹಂತ 2 ರ ಯೋಜನೆಯಡಿ ಕೆಸರೆ ಸರ್ವೆ ನಂ.484/1 ಮತ್ತು 484/2 ರಲ್ಲಿ ಒಟ್ಟು 252 ಮನೆಗಳನ್ನು ನಿರ್ಮಿಸಿದ್ದು, ಸದರಿ...

ಗಡಸು ಮರದ ಜಾತಿಯ ಗಿಡಗಳನ್ನು ನೆಡಲು ಸಹಕರಿಸಿ

ಮೈಸೂರು, ಜೂನ್.3 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಮರದ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದ್ದು, ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನ ಅವಧಿಯಲ್ಲಿ ಮಳೆ ಹಾಗೂ...

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136 ನೇ ಹುಟ್ಟು ಹಬ್ಬ

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136...

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ.

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ...

Recent Comments