32 C
Mysore
Friday, January 15, 2021
Home All News ಅಕ್ರಮ ಸಂಭಂಧ…ಪತ್ನಿಯನ್ನ ಕೊಂದು ಪೊಲೀಸರಿಗೆ ಶರಣಾದ ಪತಿ…

ಅಕ್ರಮ ಸಂಭಂಧ…ಪತ್ನಿಯನ್ನ ಕೊಂದು ಪೊಲೀಸರಿಗೆ ಶರಣಾದ ಪತಿ…

ಅನೈತಿಕ ಸಂಬಂಧ ಹಿನ್ನಲೆ ಪತ್ನಿ ಕೊಂದ ಪತಿ ಪೋಲಿಸರಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಭೂಪ ನೇರವಾಗಿ ಪೋಲಿಸರಿಗೆ ಶರಣಾಗಿದ್ದಾನೆ. ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ರಸ್ತೆಯ ತೋಟದ ಮನೆಯಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ. ಹೆಂಡತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಪತಿ ಮಾಳಪ್ಪ ಮಳಗಪ್ಪ ಪೂಜಾರಿ. ಪತ್ನಿ ಭುವನೇಶ್ವರಿ ಮಾಳಪ್ಪ ಪೂಜಾರಿ(೨೫) ಕೊಲೆಯಾದ ದುರ್ದೈವಿ.ಕಳೆದ ಹಲವು ದಿನಗಳಿಂದ ಪರಪುರುಷನ ಜೊತೆ ಅಕ್ರಮ ಸಂಭಂಧ ಇಟ್ಟುಕೊಂಡಿರುವುದಾಗಿ ಸಂಶಯ ಪಡುತ್ತಿದ್ದ ಪತಿರಾಯ ಆಗಾಗ ಗಲಾಟೆ ಮಾಡಿದ್ದಾನೆ.ನಿನ್ನೆ ತಡರಾತ್ರಿ ಇದೇ ವಿಚಾರದಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.ಕೃತ್ಯವೆಸಗಿದ ನಂತರ ಆರೋಪಿ ಪತಿ ಪೋಲಿಸರಿಗೆ ಶರಣಾಗಿದ್ದಾನೆ. ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಗ್ರಾ.ಪಂ.ಚುನಾವಣೆಯಲ್ಲಿ ಪತ್ನಿಗೆ ಸೋಲು…ಪತಿ ಸೂಸೈಡ್…

ಇತ್ತೀಚೆಗೆ ನಡೆದ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಪತ್ನಿ ಸೋತ ಹಿನ್ನಲೆ ಪತಿರಾಯ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು...

ಮಗನ ಕೊಲೆ ಮುಚ್ಚಿ ಹಾಕಲು ತಂದೆಯನ್ನೂ ಕೊಲೆ ಮಾಡಿದ ದುಷ್ಕರ್ಮಿಗಳು ಅಂದರ್…

ಮಗನ ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ತಂದೆಯನ್ನೂ ಕೊಲೆ ಮಾಡಿದ ಹಂತಕರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.ಮೈಸೂರಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಕಳ್ಳಿ ಗ್ರಾಮದಲ್ಲಿ ಘಟನೆ...

ಕಾರ್ಯಕರ್ತನ ಟೀ ಅಂಗಡಿಯಲ್ಲಿ ಲೆಮನ್ ಟೀ ಸವಿದ ಹೆಚ್ಡಿಕೆ…

ತಮ್ಮ ಕಾರ್ಯಕರ್ತನ ಟೀ ಅಂಗಡಿಯಲ್ಲಿ ಸ್ಪೆಷಲ್ ಲೆಮನ್ ಮಡಿಕೆ ಟೀ ಕುಡಿದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ. ಇಂದು ಕಾರ್ಯಕ್ರಮದ ನಿಮಿತ್ತ...

ಏಷಿಯನ್ ಪೈಂಟ್ಸ್ ವಿರುದ್ದ ರೈತರ ಪ್ರತಿಭಟನೆ…ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಸಭೆ…

ಕಳೆದ 42 ದಿನಗಳಿಂದ ಮೈಸೂರಿನ ಏಷಿಯನ್‌ ಪೇಂಟ್ಸ್‌ ಕಾರ್ಖಾನೆ ಬಳಿ ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಬೃಹತ್‌ ಮತ್ತು...

Recent Comments