32 C
Mysore
Monday, June 21, 2021
Home All News ಸಾ.ರಾ.ಮಹೇಶ್ ಏಕಾಂಗಿ ಪ್ರತಿಭಟನೆ…ರೋಹಿಣಿ ಸಿಂಧೂರಿ ವಿರುದ್ದ ತನಿಖೆಗೆ ಒತ್ತಾಯ…

ಸಾ.ರಾ.ಮಹೇಶ್ ಏಕಾಂಗಿ ಪ್ರತಿಭಟನೆ…ರೋಹಿಣಿ ಸಿಂಧೂರಿ ವಿರುದ್ದ ತನಿಖೆಗೆ ಒತ್ತಾಯ…

 

ಸಾ.ರಾ.ಮಹೇಶ್ ಒಡೆತನದಲ್ಲಿರುವ ದಟ್ಟಗಳ್ಳಿಯ ಕಲ್ಯಾಣಮಂಟಪದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಶಾಸಕ ಸಾ.ರಾ.ಮಹೇಶ್ ಮೈಸೂರಿನಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿದರು. ಏಕಾಂಗಿ ಪ್ರತಿಭಟನೆಗೆ ಕೆಲ ಬೆಂಬಲಿಗರು ಸಾಥ್ ನೀಡಿದರು.
ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ಹೊರಹಾಕಿದರು.
ಸಾ.ರಾ. ಮಹೇಶ್ ಧರಣಿ ಸ್ಥಳಕ್ಕೆ ಆಗಮಿಸಿದ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ರವರು ತನಿಖೆ ನಡೆಸುವ ಭರವಸೆ ಕೊಟ್ಟರು.ಸಿಂಧೂರಿ ದಾಖಲೆ ಪ್ರಕಾರ ಅದು ನಿಜವೇ ಅಗಿದ್ದಲ್ಲಿ ಇಡೀ ಕನ್ವೆನ್ಷನ್ ಹಾಲ್ ಗವರ್ನರ್ ಹೆಸರಿಗೆ ಬರೆದುಕೊಡ್ತೇನೆ ಎಂದು ತಿಳಿಸಿದರು.
ಸಾ.ರಾ‌. ಮಹೇಶ್ ಅವರ ಅಹವಾಲು ಪ್ರಾದೇಶಿಕ ಆಯುಕ್ತರು ಆಲಿಸಿದರು. ಕಾನೂನು ವಿರುದ್ದವಾಗಿ ಏನೇ‌ ಮಾಡಿದ್ರೂ ಕ್ರಮ ಕೈಗೊಳ್ಳಿ ಎಂದು ಸಾ.ರಾ.ಮಹೇಶ್ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಸಾ.ರಾ.ಮಹೇಶ್
ನನ್ನ ಒಡೆತನದಲ್ಲಿರುವ ಸಾ‌.ರಾ. ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣ ಆಗಿಲ್ಲ.
ಆದ್ದರಿಂದಲೇ ಏಕಾಂಕಿ ಪ್ರತಿಭಟನೆ ಶುರು ಮಾಡಿದ್ದೇನೆ.ಉನ್ನತ ಮಟ್ಟದ ಅಧಿಕಾರಿಗಳು ಜಾಗದ ಸರ್ವೇ ಮಾಡಲಿ‌.
ರಾಜಕಾಲುವೆ ಮೇಲೆ ನಿರ್ಮಾಣ ಆಗಿದ್ದರೆ ಅದನ್ನು ಸಾರ್ವಜನಿಕರ ಬಳಕೆಗಾಗಿ ರಾಜ್ಯಪಾಲರಿಗೆ ಹಸ್ತಾಂತರ ಮಾಡುತ್ತೇನೆ.
ಮಾತ್ರವಲ್ಲ, ನಾನು ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಹೊಂದುತ್ತೇನೆ.‌
ಒಂದು ವೇಳೆ ಅವರು ಮಾಡಿರುವ ಆರೋಪ ಸುಳ್ಳಾದರೆ ಐಎಎಸ್ ಹುದ್ದೆಯಿಂದ ಅಮಾನತು ಮಾಡಬೇಕು.
ಮಕ್ಕಳನ್ನು ಆಡಿಸಿಕೊಂಡು, ಅಡಿಗೆ ಮಾಡಿಕೊಂಡು ಇರಲು ಆಂಧ್ರಕ್ಕೆ ಕಳುಹಿಸಬೇಕು ಎಂದು ವಾಗ್ಧಾಳಿ ನಡೆಸಿದರು.

ನಮ್ಮ ಎಲ್ಲ ದಾಖಲೆಗಳು ಕ್ರಮಬದ್ಧವಾಗಿವೆ.
ನಮ್ಮ ದಾಖಲೆಯಲ್ಲಿ ಯಾವುದೇ ಲೋಪ ಇಲ್ಲ ಎಂದು ರೋಹಿಣಿ ಸಿಂಧೂರಿ ಆರೋಪವನ್ನ ಅಲ್ಲಗೆಳೆದರು.
ನನ್ನ ದಾಖಲೆ ಎಲ್ಲವು ಕ್ರಮಬದ್ಧವಾಗಿದ್ದು ಅದನ್ನ ನಾನು ಬಿಡುಗಡೆ ಮಾಡುವುದಾಗಿ ತಿಳಿಸಿದರು…

LEAVE A REPLY

Please enter your comment!
Please enter your name here

- Advertisment -

Most Popular

ಕತ್ತು ಕುಯ್ದುಕೊಂಡು ಮಾನಸಿಕ ಅಸ್ವಸ್ಥ ಆತ್ಮಹತ್ಯೆ…

ಮಾನಸಿಕ ಅಸ್ವಸ್ಥನೊಬ್ಬ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನ ಕನ್ನಳ್ಳಿ ಮೋಳೆ ಗ್ರಾಮದಲ್ಲಿ ನಡೆದಿದೆ.ಶಿವಣ್ಣ (42) ಮೃತ ದುರ್ದೈವಿ.ಗ್ರಾಮದಲ್ಲಿದ್ದ...

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಯಾಕನೂರು ಗ್ರಾಮದಲ್ಲಿ ನಡೆದಿದೆ.ಕಾವ್ಯ(೨೧)ಮೃತ ದುರ್ದೈವಿಯಾಗಿದ್ದಾರೆ.ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಒಂದೂವರೆ ವರ್ಷದ...

ಶಿಕ್ಷಕರಿಗೆ ಲಸಿಕಾ ಅಭಿಯಾನ…ಸಾಮಾಜಿಕ ಅಂತರ ಮಾಯ…

ಹುಣಸೂರಿನ ಶಿಕ್ಷಕರ ಭವನದಲ್ಲಿ ಶಿಕ್ಷಕರಿಗಾಗಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ನೂರಾರು ಶಿಕ್ಷಕರು ಲಸಿಕೆ ಪಡೆಯಲು ಸೇರಿದ್ದರು.ಆದರೆ ಸ್ಥಳದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.ವಿದ್ಯಾವಂತ ಶಿಕ್ಷಕರೇ ಹೀಗೆ ವರ್ತಿಸಿದರೆ...

ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್…ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಕೇಸ್…

ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ತಾಲೂಕು ಆಡಳಿತದಿಂದ ನಿರ್ಧಾರ...

Recent Comments