32 C
Mysore
Thursday, June 4, 2020
Home All News ನಿಮಗೆ ವಯಸ್ಸಾಗಿದೆ ಸರ್ ಎಂದ ಪ್ರತಾಪ್ ಸಿಂಹ…ನಾನಿನ್ನೂ ಬಹಳ ವರ್ಷ ಬದುಕುತ್ತೇನೆ ಎಂದ ಸೋಮಣ್ಣ…

ನಿಮಗೆ ವಯಸ್ಸಾಗಿದೆ ಸರ್ ಎಂದ ಪ್ರತಾಪ್ ಸಿಂಹ…ನಾನಿನ್ನೂ ಬಹಳ ವರ್ಷ ಬದುಕುತ್ತೇನೆ ಎಂದ ಸೋಮಣ್ಣ…

ಐಸೋಲೇಷನ್ ವಾರ್ಡ್ ನತ್ತ ಹೆಜ್ಜೆ ಹಾಕುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರನ್ನ‌ ಸಂಸದ ಪ್ರತಾಪ್ ಸಿಂಹ ತಡೆದ ಘಟನೆ ಕೆ.ಆರ್.ಆಸ್ಪತ್ರೆಯಲ್ಲಿ‌ ನಡೆಯಿತು.ಕೊರೊನಾ ವೈರಸ್ ವಿಚಾರದಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಅಧಿಕಾರಿಗಳು ಹಾಗೂ ವೈದ್ಯರ ಜೊತೆ ಚರ್ಚಿಸಲು ಸಭೆ ಕರೆದ ಸಚಿವ ಸೋಮಣ್ಣ ನಂತರ ಆಸ್ಪತ್ರೆ ಸ್ಥಿತಿಗತಿಗಳನ್ನ ವೀಕ್ಷಿಸಲು ತೆರಳಿದರು.ಈ ಸಮಯದಲ್ಲಿ ಕೊರೋನಾ ಐಸೋಲೇಷನ್ ವಾರ್ಡ್ ಇರುವ ಜಯದೇವಾ ಆಸ್ಪತ್ರೆಯ ಹಳೆ ಕಟ್ಟಡದ ಒಳಗೆ ಪ್ರವೇಶಿಸಲು ಮುಂದಾಗುತ್ತಿದ್ದ ಸೋಮಣ್ಣರನ್ನ ಸಂಸದ ಪ್ರತಾಪ್ ಸಿಂಹ ತಡೆ ಹಿಡಿದರು. ಐಸೋಲೇಷನ್ ವಾರ್ಡ್‌ಗೆ ಹೋಗಬೇಡಿ ನಿಮಗೆ ವಯಸ್ಸಾಗಿದೆ ಎಂದು ಪ್ರತಾಪ್‌ಸಿಂಹ ಕೈಹಿಡಿದು ಮನವಿ ಮಾಡಿದರು.
ನಾನು ಹೋಗೋಲ್ಲ ಇಲ್ಲೆ ಇರ್ತಿನಿ ಬಿಡು ಎಂದು ಸಚಿವ ಸೋಮಣ್ಣ ಪ್ರತಿಕ್ರಿಯಿಸಿದರು.ಅಲ್ಲದೆ ನಾನು ಇನ್ನು ಬಹಳಾ ವರ್ಷ ಬದುಕುತ್ತೇನೆ ಯೋಚನೆ ಮಾಡ್ಬೇಡ ಎಂದು ಹಾಸ್ಯ ಚಟಾಕಿ ಹಾರಿಸಿದರು.ನಂತರ ಐಸೋಲೇಷನ್ ವಾರ್ಡ್ ಭೇಟಿ ಮಾಡದೆ ಸಚಿವ ಹಾಗೂ ಸಂಸದರು ವಾಪಸ್ಸಾದರು…

LEAVE A REPLY

Please enter your comment!
Please enter your name here

- Advertisment -

Most Popular

ಅತೀಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದರೆ ಕಾನೂನು ರೀತ್ಯಾ ಕ್ರಮ

ಮೈಸೂರು ಜೂನ್.3. ಮೈಸೂರು ನಗರದ ಜೆ.ಎನ್.ನರ್ಮ್-ಬಿ.ಎಸ್.ಯು.ಪಿ ಹಂತ-1 ಮತ್ತು ಹಂತ 2 ರ ಯೋಜನೆಯಡಿ ಕೆಸರೆ ಸರ್ವೆ ನಂ.484/1 ಮತ್ತು 484/2 ರಲ್ಲಿ ಒಟ್ಟು 252 ಮನೆಗಳನ್ನು ನಿರ್ಮಿಸಿದ್ದು, ಸದರಿ...

ಗಡಸು ಮರದ ಜಾತಿಯ ಗಿಡಗಳನ್ನು ನೆಡಲು ಸಹಕರಿಸಿ

ಮೈಸೂರು, ಜೂನ್.3 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಮರದ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದ್ದು, ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನ ಅವಧಿಯಲ್ಲಿ ಮಳೆ ಹಾಗೂ...

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136 ನೇ ಹುಟ್ಟು ಹಬ್ಬ

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136...

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ.

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ...

Recent Comments