32 C
Mysore
Tuesday, November 30, 2021
Home All News ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡಕ್ಕೆ ಮುಕ್ತಿ ಸಿಗುವುದೇ…?

ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡಕ್ಕೆ ಮುಕ್ತಿ ಸಿಗುವುದೇ…?

ಬೆಂಗಳೂರಿನಲ್ಲಿ ಕಟ್ಟಡ ಉರುಳಿ ಬಿದ್ದು ನಡೆದ ದುರಂತದಿಂದ ಮೈಸೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ.ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮೀಕ್ಷೆ ನಡೆಸುತ್ತಿದೆ.ಅಪಾಯದ ಅಂಚಿನಲ್ಲಿರುವ ಕಟ್ಟಡಗಳನ್ನ ಗುರುತಿಸುತ್ತಿದೆ. ಈಗಾಗಲೇ 100 ವರ್ಷ ತುಂಬಿರುವ 600 ಕ್ಕೂ ಹೆಚ್ಚು ಕಟ್ಟಡಗಳನ್ನ ಗುರುತಿಸಲಾಗಿದ್ದು ಅವುಗಳನ್ನ ಪಾರಂಪರಿಕ ಕಟ್ಟಡಗಳಡಿ ತರಲು ಪ್ರಸ್ತಾಪಿಸಲಾಗುತ್ತಿದೆ.ಮೈಸೂರಿನ ಎಲ್ಲಾ 9 ವಲಯ ಕಚೇರಿ ವ್ಯಾಪ್ತಿಯಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಗ್ಗೆ ಒಂದು ವಾರದ ಒಳಗೆ ಸಂಪೂರ್ಣ ಮಾಹಿತಿ ಒದಗಿಸುವಂತೆ ಆಯುಕ್ತರು ಸೂಚನೆ ನೀಡಿದ್ದಾರೆ. ಮೈಸೂರಿನ ವಿ.ವಿ.ಮೊಹಲ್ಲಾದ 4 ನೇ ಮುಖ್ಯರಸ್ತೆಯಲ್ಲಿರುವ ಹಳೇ ಕಟ್ಟಡವೊಂದು ಶಿಥಿಲಾವಸ್ಥೆ ತಲುಪಿದೆ.ಕಟ್ಟಡ ಅನೈತಿಕ ಚಟುವಟಿಕೆ ತಾಣವಾಗಿದೆ.ಸಂಭಂಧಪಟ್ಟ ಅಧಿಕಾರಿಗಳು ಈ ಕಟ್ಟಡವನ್ನೂ ಸಹ ತೆರುವುಗೊಳಿಸುವ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕೆಂದು ಸ್ಥಳೀಯರ ಮನವಿಯಾಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಗ್ರಾಮಲೆಕ್ಕಾಧಿಕಾರಿಗಳ ಸಂಘದ ಹಂಗಾಮಿ ಜಿಲ್ಲಾಧ್ಯಕ್ಷರಾಗಿ ಎಂ.ನಾಗೇಶ್ ಕುಮಾರ್ ನೇಮಕ…

ಮೈಸೂರು ಜಿಲ್ಲೆ ಗ್ರಾಮಲೆಕ್ಕಾಧಿಕಾರಿಗಳ ಸಂಘಕ್ಕೆ ಹಂಗಾಮಿ ಅಧ್ಯಕ್ಷರಾಗಿ ಮೈಸೂರು ತಾಲೂಕು ಕಚೇರಿಯ ಗ್ರಾಮಲೆಕ್ಕಾಧಿಕಾರಿ ಎಂ.ನಾಗೇಶ್ ಕುಮಾರ್ ನೇಮಕವಾಗಿದ್ದಾರೆ.ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಬಿ.ದೊಡ್ಡಬಸಪ್ಪ ರೆಡ್ಡಿ...

ಜಮೀನಿನಲ್ಲಿ ಹಂದಿ ಕಳೇಬರ ಪತ್ತೆ…ಹುಲಿ ಬೇಟೆ ಶಂಕೆ…ಸ್ಥಳೀಯರಲ್ಲಿ ಆತಂಕ…

ಜಮೀನೊಂದರಲ್ಲಿ ಹಂದಿಯ ಕಳೇಬರ ಪತ್ತೆಯಾಗಿದೆ.ಹುಲಿ ಬೇಟೆಯಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.ಹಂದಿಯ ಕಳೇಬರದ ಬಳಿ ಹುಲಿಯ ಹೆಜ್ಜೆ ಗುರುತುಗಳು...

ಅಣ್ಣನಿಂದಲೇ ತಂಗಿ ಮೇಲೆ ಅತ್ಯಾಚಾರ…ಸಾಂಸ್ಕೃತಿಕ ನಗರಿಯಲ್ಲಿ ಮತ್ತೊಂದು ಹೇಯ ಕೃತ್ಯ…

ಸಾಂಸ್ಕೃತಿಕ ನಗರಿಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೇಯ ಕೃತ್ಯ ನಡೆದಿದೆ.ಸ್ವಂತ ತಂಗಿಯ ಮೇಲೇ ಅತ್ಯಾಚಾರವೆಸಗಿದ ಪಾಪಿ ಅಣ್ಣ ಪೊಲೀಸರ...

ಖಾಲಿ ಪತ್ರಕ್ಕೆ ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡ ಕಿಲಾಡಿಗಳು…ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಸಿನಮೀಯ ದೃಶ್ಯ…

ಆಸ್ತಿ ಕಬಳಿಸಲು ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಗುರುತನ್ನ ಪಡೆಯುವ ಸನ್ನಿವೇಶಗಳನ್ಮ ಸಿನಿಮಾಗಳಲ್ಲಿ ನೋಡಿದ್ದೇವೆ.ಆದ್ರೆ ನಿಜ ಜೀವನದಲ್ಲೂ ಅಂತಹ ಒಂದು ಪ್ರಕರಣ ನಡೆದಿರುವ ವೀಡಿಯೋ ಇದೀಗ...

Recent Comments