ಪಿರಿಯಾಪಟ್ಟಣ,ಜೂ7,Tv10 ಕನ್ನಡ
ಪಿರಿಯಾಪಟ್ಟಣದ ಕಗ್ಗುಂಡಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ಒಂದು ಬೆಳಕಿಗೆ ಬಂದಿದೆ.ಅಂತರಜಾತಿ ಯುವಕನನ್ನ ಪ್ರೀತಿಸಿದ ಕಾರಣಕ್ಕೆ ಹೆತ್ತವರೇ ಅಪ್ರಾಪ್ತ ಮಗಳನ್ನ ಕೊಂದು ಪೊಲೀಸರ ಅತಿಥಿಯಾಗಿದ್ದಾರೆ.ಮಗಳನ್ನ ಕೊಂದ ಆರೋಪದ ಮೇಲೆ ತಂದೆ ಸುರೇಶ್ ಹಾಗೂ ತಾಯಿ ಬೇಬಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.ಎರಡನೇ ಪಿಯು ವಿಧ್ಯಾರ್ಥಿನಿ 17 ವರ್ಷದ ಶಾಲಿನಿ ಪಕ್ಕದ ಗ್ರಾಮದ ಮೆಲ್ಲಹಳ್ಳಿಯ ಯುವಕ ಮಂಜು ಎಂಬಾತನನ್ನ ಪ್ರೀತಿಸುತ್ತಿದ್ದಳು.ಇವರಿಬ್ಬರ ಪ್ರೀತಿಗೆ ಶಾಲಿನಿ ಪೋಷಕರು ವಿರೋದಿಸಿದ್ದರು.ಪ್ರೇಮಿಗಳು ಮದುವೆಯಾಗಲು ನಿರ್ಧರಿಸಿದ್ದರು.ಪ್ರಿಯಕರನಿಗಾಗಿ ಶಾಲಿನಿ ಮನೆ ಬಿಟ್ಟಿದ್ದಳು.ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಲೇರಿತ್ತು.ಪೊಲೀಸರ ಮುಂದೆ ಶಾಲಿನಿ ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಳು.ಹೀಗಾಗಿ ಶಾಲಿನಿ ಬಾಲಮಂದಿರಕ್ಕೆ ಸೇರಿಕೊಂಡಿದ್ದಳು.ಇತ್ತೀಚೆಗಷ್ಟೆ ಮಗಳನ್ನ ಪೋಷಕರಾದ ಸುರೇಶ್ ಹಾಗೂ ಬೇಬಿ ಮನೆಗೆ ಕರೆತಂದಿದ್ದರು.ಶಾಲಿನಿ ಮೃತದೇಹ ಜಮೀನೊಂದರಲ್ಲಿ ಪತ್ತೆಯಾಗಿದೆ.ಅಂತರಜಾತಿ ಹುಡುಗನನ್ನ ಪ್ರೀತಿಸಿದ ಹಿನ್ನಲೆ ಹೆತ್ತವರೇ ಮಗಳನ್ನ ಕೊಂದಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಸಧ್ಯ ಪಿರಿಯಾಪಟ್ಟಣ ಠಾಣೆ ಪೊಲೀಸರು ಶಾಲಿನಿಯ ತಂದೆ ಸುರೇಶ್ ಹಾಗೂ ತಾಯಿ ಬೇಬಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ…
