32 C
Mysore
Friday, January 15, 2021
Home All News ಪ್ರಿಯಕರನ ಜೊತೆ ಸೇರಿ ಪತಿಯನ್ನ ಕೊಂದ ಪತ್ನಿ…ಹತ್ಯೆಗೈದು ನಾಪತ್ತೆ ಪ್ರಕರಣ ದಾಖಲಿಸಿದ್ದ ಕಿಲಾಡಿ…

ಪ್ರಿಯಕರನ ಜೊತೆ ಸೇರಿ ಪತಿಯನ್ನ ಕೊಂದ ಪತ್ನಿ…ಹತ್ಯೆಗೈದು ನಾಪತ್ತೆ ಪ್ರಕರಣ ದಾಖಲಿಸಿದ್ದ ಕಿಲಾಡಿ…

ಪ್ರಿಯಕರನ ಜೊತೆ ಸೇರಿ ಗಂಡನಿಗೆ ಯಮಪುರಿಗೆ ಕಳಿಸಿದ ಧರ್ಮಪತ್ನಿ ಜೈಲು ಪಾಲಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಪ್ರಿಯಕರ ಹಾಗೂ ಸಹಚರರ ಜೊತೆ ಸೇರಿ ಪತಿಯನ್ನ ಮುಗಿಸಿ ನಂತರ ನಾಪತ್ತೆ ಪ್ರಕರಣ ದಾಖಲಿಸಿದ್ದ ಪತ್ನಿ ಪೊಲೀಸರ ಚಾಕಚಕ್ಯತೆ ಗೆ ಪ್ರಿಯಕರನ ಸಮೇತ ಸಿಕ್ಕಿಬಿದ್ದಿದ್ದಾಳೆ.ಯೋಧನಾಗಿರುವ ಗಂಡ ದೀಪಕ್ ಪಟ್ಟಣಧಾರ ಪತ್ನಿಯ ಸಂಚಿಗೆ ಸಿಲುಕಿ ಕೊಲೆಯಾದ ದುರ್ದೈವಿ ಗಂಡ.ಪತ್ನಿ ಅಂಜಲಿ ಹಾಗೂ ತನ್ನ ಕಾರಿಗೆ ಡ್ರೈವರ್ ಆಗಿದ್ದ
ಪ್ರಿಯಕರ ಪ್ರಶಾಂತ್ ದತ್ತಾತ್ರೇಯ ಇದೀಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ಬೆಳಗಾವಿಯ ಗೊಡಚಿನಮಲ್ಕಿ ಫಾಲ್ಸ ಬಳಿ ಕೊಲೆ ಮಾಡಿ ನಾಪತ್ತೆ ಪ್ರಕರಣ ದಾಖಲಿಸಿದ್ದ ಐನಾತಿ ಪತ್ನಿ ಇದೀಗ ಪೊಲೀಸರ ಅತಿಥಿ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ದೀಪಕ್ ಇತ್ತೀಚೆಗೆ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು.ಡ್ರೈವರ್ ಜೊತೆ ಅನೈತಿಕ ಸಂಭಂಧ ಇರುವ ವಿಚಾರ ದೀಪಕ್ ಗಮನಕ್ಕೆ ಬಂದಿದೆ.ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ.ಇದರಿಂದ ಬೇಸತ್ತ ಪತ್ನಿ ಅಂಜಲಿ ಪತಿಯನ್ನ ಮುಗಿಸಲು ಸಂಚು ರೂಪಿಸಿದ್ದಾಳೆ.ತನ್ನ ಮನಸ್ಸಿನಲ್ಲಿದ್ದ ಸಂಚನ್ನ ಪ್ರಿಯಕರನ ಬಳಿ ಹಂಚಿಕೊಂಡಿದ್ದಾಳೆ.ಇಬ್ಬರ ಸಂಭಂಧಕ್ಕೆ ಅಡ್ಡಿ ಬರುತ್ತಿರುವ ದೀಪಕ್ ನ ಮುಗಿಸಲು ಸ್ಕೆಚ್ ಸಿದ್ದಮಾಡಿಕೊಂಡು ಗೆಳೆಯರಾದ ನವೀನ್ ಅಶೋಕ ಕೆಂಗೇರಿ, ಪ್ರವೀಣ ಶಿವಲಿಂಗಪ್ಪ ರ ನೆರವು ಪಡೆದಿದ್ದಾರೆ.

ಹಾಕಿದ್ದ ಸ್ಕೆಚ್ ನಂತೆ ಗೊಡಚಿನಮಲ್ಕಿ ಫಾಲ್ಸ್ ಗೆ ಜಾಲಿ ಟ್ರಿಪ್ ಹಾಕಿದ್ದಾರೆ.ತನ್ನನ್ನ ಮುಗಿಸಲು ಈ ಟ್ರಿಪ್ ಎಂದು ತಿಳಿಯದ ಯೋಧ ದೀಪಕ್ ಖುಷಿಯಿಂದ ಹೊರಟಿದ್ದಾನೆ.ಫಾಲ್ಸ್ ನಲ್ಲಿ ದೀಪಕ್ ನ ಕೊಂದ ಅಂಜಲಿ ಹಾಗೂ ತಂಡ ವಾಪಸಾಗಿದೆ.ಅಮಾಯಕಳಂತೆ ಮರುದಿನ ಮಾರಿಹಾಳ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದಾಳೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗಂಭೀರವಾಗಿ ತನಿಖೆ ಆರಂಭಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.ಅನೈತಿಕ ಸಂಭಂಧಕ್ಕೆ ಹಾತೊರೆದು ದೇಶ ಸೇವೆಗೆ ಮುಡಿಪಾಗಿದ್ದ ಪತಿಯನ್ನ ಮುಗಿಸಿದ ಕಿಲಾಡಿ ಪತ್ನಿ ಪ್ರಿಯಕರ ಹಾಗೂ ಸ್ನೇಹಿತರ ಸಮೇತ ಜೈಲು ಪಾಲಾಗಿದ್ದಾಳೆ…

1 COMMENT

LEAVE A REPLY

Please enter your comment!
Please enter your name here

- Advertisment -

Most Popular

ಗ್ರಾ.ಪಂ.ಚುನಾವಣೆಯಲ್ಲಿ ಪತ್ನಿಗೆ ಸೋಲು…ಪತಿ ಸೂಸೈಡ್…

ಇತ್ತೀಚೆಗೆ ನಡೆದ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಪತ್ನಿ ಸೋತ ಹಿನ್ನಲೆ ಪತಿರಾಯ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು...

ಮಗನ ಕೊಲೆ ಮುಚ್ಚಿ ಹಾಕಲು ತಂದೆಯನ್ನೂ ಕೊಲೆ ಮಾಡಿದ ದುಷ್ಕರ್ಮಿಗಳು ಅಂದರ್…

ಮಗನ ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ತಂದೆಯನ್ನೂ ಕೊಲೆ ಮಾಡಿದ ಹಂತಕರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.ಮೈಸೂರಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಕಳ್ಳಿ ಗ್ರಾಮದಲ್ಲಿ ಘಟನೆ...

ಕಾರ್ಯಕರ್ತನ ಟೀ ಅಂಗಡಿಯಲ್ಲಿ ಲೆಮನ್ ಟೀ ಸವಿದ ಹೆಚ್ಡಿಕೆ…

ತಮ್ಮ ಕಾರ್ಯಕರ್ತನ ಟೀ ಅಂಗಡಿಯಲ್ಲಿ ಸ್ಪೆಷಲ್ ಲೆಮನ್ ಮಡಿಕೆ ಟೀ ಕುಡಿದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ. ಇಂದು ಕಾರ್ಯಕ್ರಮದ ನಿಮಿತ್ತ...

ಏಷಿಯನ್ ಪೈಂಟ್ಸ್ ವಿರುದ್ದ ರೈತರ ಪ್ರತಿಭಟನೆ…ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಸಭೆ…

ಕಳೆದ 42 ದಿನಗಳಿಂದ ಮೈಸೂರಿನ ಏಷಿಯನ್‌ ಪೇಂಟ್ಸ್‌ ಕಾರ್ಖಾನೆ ಬಳಿ ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಬೃಹತ್‌ ಮತ್ತು...

Recent Comments