32 C
Mysore
Monday, March 30, 2020
Home All News ಅಕ್ರಮ ಸಂಭಂದಕ್ಕೆ ಮಹಿಳೆ ಮಟಾಷ್…ಪ್ರಿಯಕರ ಸೇರಿ ನಾಲ್ವರು ಅಂದರ್…

ಅಕ್ರಮ ಸಂಭಂದಕ್ಕೆ ಮಹಿಳೆ ಮಟಾಷ್…ಪ್ರಿಯಕರ ಸೇರಿ ನಾಲ್ವರು ಅಂದರ್…

ಗಂಡನಿದ್ದರೂ ಪರಪುರುಷನೊಂದಿಗೆಅಕ್ರಮ ಸಂಭಂಧಕ್ಕೆ ಹಾತೊರೆದ ಮಹಿಳೆಯೊಬ್ಬಳು ಪ್ರಿಯಕರನ ಸಂಚಿಗೆ ಬಲಿಯಾಗಿದ್ದಾಳೆ.೪೫ ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾದ ಮಹಿಳೆ ಶವವಾಗಿದ್ದಾಳೆ.ಪ್ರಿಯಕರನನ್ನ ಬ್ಲಾಕ್ ಮೇಲೆ ಮಾಡಿದ ಪರಿಣಾಮ ಮಹಿಳೆಗೆ ಇಂತಹ‌ ದುರ್ಗತಿ ಬಂದಿದೆ.ಪ್ರಕರಣಕ್ಕೆ ಸಂಭಂಧಿಸಿದಂತೆ ಪ್ರಿಯಕರ ಸೇರಿದಂತೆ ನಾಲ್ವರನ್ನ ಬಂಧಿಸುವಲ್ಲಿ ತಲಕಾಡು ಪೊಲೀಸ್ರು ಯಶಸ್ವಿಯಾಗಿದ್ದಾರೆ.

ರಾಜಮ್ಮ(೪೨) ಪ್ರಿಯಕರನ ಸಂಚಿಗೆ ಬಲಿಯಾದ ಮಹಿಳೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮನಗಹಳ್ಳಿ ಗ್ರಾಮದ ನಿವಾಸಿ.ಜನವರಿ ೨೮ ರಂದು ರಾಜಮ್ಮ‌ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ.ಒಂದುವಾರ ಹುಡುಕಾಡಿದ ಮನೆಯವರು ಫೆಬ್ರವರಿ ೮ ರಂದು ಹನೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾಜಮ್ಮಳ ಸುಳಿವು ಪತ್ತೆ ಹಚ್ಚಲು ಮುಂದಾದಾಗ ಹನೂರು ಗ್ರಾಮದ ದೂರದ ಸಂಭಂಧಿ ಮಹೇಶ್ ಎಂಬಾತನ ಜೊತೆ ಅನೈತಿಕ‌ ಸಂಭಂಧ ಇರೋ ಮಾಹಿತಿ ಲಭ್ಯವಾಗಿದೆ.ಕೂಡಲೇ ಮಹೇಶ್ ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಟಿ.ನರಸೀಪುರ ಅಕ್ಕೂರು ದೊಡ್ಡಿ ಗ್ರಾಮದ ಸೋಮ‌ ಎಂಬಾತ ಕೆಲಸ ಮಾಡುತ್ತಿದ್ದ ಜಮೀನಿನಲ್ಲಿ ಕೊಲೆ ಮಾಡಿ ಹೂತು ಹಾಕಿದ ವಿಚಾರವನ್ನ ಬಹಿರಂಗಪಡಿಸಿದ್ದಾನೆ.

ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಕೂರುದೊಡ್ಡಿ ಗ್ರಾಮದ ಕೃಷ್ಣಪ್ಪ ಎಂಬುವರ ತೋಟದಲ್ಲಿ ಹೂತುಹಾಕಿದ್ದ ಜಾಗ ಪರಿಶೀಲನೆ ನಡೆಸಿದಾಗ ರಾಜಮ್ಮಳ ಮೃತದೇಹ ಪತ್ತೆಯಾಗಿದೆ.ಮಹೇಶ್ ತಾನು ಮಾಡಿದ ಕೊಲೆ ಮುಚ್ಚಿ ಹಾಕಲು ಸೋಮ,ಚೌಡಯ್ಯ ಹಾಗೂ ಮಹದೇವ ನೆರವು ಪಡೆದು ರಾಜಮ್ಮಳ ಶವ ಹೂತುಹಾಕಿದ್ದಾನೆ.ವಿಚಾರಣೆ ವೇಳೆ ಮಹೇಶ್ ಬಹಿರಂಗ ಪಡಿಸಿದ ಮಾಹಿತಿ ಆಧರಿಸಿ ಸೋಮ,ಚೌಡಯ್ಯ ಹಾಗೂ ಮಹದೇವ ಮೂವರನ್ನೂ ತಲಕಾಡು ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ.

ರಾಜಮ್ಮಳಿಗೆ ದೂರದ ಸಂಭಂಧಿಯಾಗಿದ್ದ ಮಹೇಶ ಕಳೆದ ಮೂರ್ನಾಲ್ಕು ವರ್ಷಗಳಿಂದ ಅಕ್ರಮ ಸಂಭಂಧ ಇಟ್ಟುಕೊಂಡಿದ್ದ.ಮಹೇಶ ಸಹ ವಿವಾಹಿತನಾಗಿದ್ದ.ಇದನ್ನೇ ಬಂಡವಾಳ ಮಾಡಿಕೊಂಡ ರಾಜಮ್ಮ ಗಂಡನನ್ನ ಬಿಟ್ಟು ಬರ್ತೀನಿ ನನ್ನನ್ನೇ ಮದುವೆ ಆಗು ಎಂದು ಪೀಡಿಸ್ತಿದ್ದಳಂತೆ.ಈ ವಿಚಾರದಲ್ಲಿ ಆಗಾಗ ಬ್ಲಾಕ್ ಮೇಲ್ ಸಹ ಮಾಡಿದ್ದಾಳೆ ರಾಜಮ್ಮ.ಇದರಿಂದ ಸಹನೆ ಕಳೆದುಕೊಂಡಿದ್ದ ಮಹೇಶ್ ಸ್ಕೆಚ್ ಸಿದ್ದಪಡಿಸಿ ಮೂವರು ಸಹಚರರ ನೆರವು ಪಡೆದು ಗುದ್ದಲಿಯಿಂದ ಹೊಡೆದು ಕೊಲೆ ಮಾಡಿ ಜಮೀನಿನಲ್ಲಿ‌ ಹೂತುಹಾಕಿದ್ದ.

ಕಾಮದ ಅಮಲಿನಲ್ಲಿ ತೇಲಾಡಿದ ರಾಜಮ್ಮ ಪ್ರಿಯಕರನಿಂದಲೇ ಕೊಲೆಯಾಗಿದ್ದಾಳೆ.ಮಹಿಳೆಯ ಜೊತೆ ಅನೈತಿಕ‌ ಸಂಭಂಧ ಬೆಳೆಸಿ ತಪ್ಪಿಸಿಕೊಳ್ಳಲು ಸಾಧ್ಯವಾಗದ ಪ್ರಿಯಕರ ಕೊನೆಗೆ ಕೊಲೆಗಡುಕನ ಪಟ್ಟ ಕಟ್ಟಿ ಕೊಂಡು ಜೈಲು ಪಾಲಾಗಿದ್ದಾನೆ.ಕೊಲೆ ಮುಚ್ಚಿಹಾಕಲು ನೆರವು ನೀಡಿದ ಸ್ನೇಹಿತರೂ ಸ ಸಹ ಜೈಲೂಟ ಸವಿಯಲು ಹೋಗಿದ್ದಾರೆ. ಒಟ್ಟಾರೆ ನಿಗೂಢ ಕೊಲೆಯೊಂದರ ಪ್ರಕರಣ ಭೇಧಿಸುವಲ್ಲಿ ತಲಕಾಡು ಪೊಲೀಸ್ರು ಯಶಸ್ವಿಯಾಗಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಮೈಸೂರು ಲಾಕ್ ಡೌನ್…ಮನೆಗೇ ಬರುತ್ತೆ ಕಡಿಮೆ ದರದ ಪ್ರಾವಿಷನ್…ಯೋಜನೆ ತಂದ್ರು ಶಾಸಕ ರಾಮದಾಸ್…

ಕೊರೊನಾ ವೈರಸ್ ನಿಂದ ಘೋಷಿಸಿದ ಲಾಕ್ ಡೌನ್ ಸಖತ್‌ಎಫೆಕ್ಟ್ ಆಗಿದೆ.ಮನೆಯಿಂದ ಹೊರಗೆ ಬರಬಾರದೆಂಬ ನಿಯಮ ಕೆಲವರಿಗಂತೂ ಸಂಕಷ್ಟ ತಂದಿದೆ.ದಿನಸಿ ಸಾಮಾನು ತರಲೂ ಕಷ್ಟವಾಗುತ್ತಿದೆ.ಹೊರಗೆ ಬಂದರೆ ಪೊಲೀಸರ ಕರೊನಾ ಹೆದರಿಕೆ ಮನೆಯಲ್ಲಿದ್ದರೆ...

ಜಿಲ್ಲಾಡಳಿತದಿಂದ ಕೊರೊನ ಜಾಗೃತಿ ಭರ್ಜರಿ…ಎಪಿಎಂಸಿಕಾರ್ಮಿಕರಿಗೆ ಇಲ್ಲ ಸೇಫ್ಟಿ…

ಇದೊಂದು ವಿಪರ್ಯಾಸದ ಸಂಗತಿ ಅಂದರೆ ತಪ್ಪಿಲ್ಲ.ಇಡೀ ಜಗತ್ತೇ ಕೊರೊನಾ ಹೆಸರೇಳಿದರೆ ಬೆಚ್ಚಿಬೀಳುತ್ತಿದೆ.ಮೈಸೂರಿನಲ್ಲಂತೂ ಭರ್ಜರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೆ ಎಪಿಎಂಸಿ ಆವರಣವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇಫ್ಟಿ ಬಗ್ಗೆ ತಲೆಯೇ ಕೊಡಿಸಿಕೊಂಡಿಲ್ಲ.ಇಲ್ಲಿನ ಪೌರಕಾರ್ಮಿಕರು ಸಂಪೂರ್ಣವಾಗಿ...

ಮನೆಯಿಂದ ಹೊರಬಂದರೆ ಕರೊನಾ…ಒಳಗಿದ್ದರೆ ನಗೀನಾ…ಹುಣಸೂರು ಜನತೆಗೆ ಹಾವಿನ ಕಾಟ…

ಕೊರೊನಾ ವೈರಸ್ ಮನುಕುಲಕ್ಕೆ ಭೀತಿ ಹುಟ್ಟಿಸಿದೆ.ಗೃಹಬಂಧನವೇ ಮುಕ್ತಿಗೆ ದಾರಿ.ಮನೆಯಲ್ಲಿದ್ದರೆ ಮಾತ್ರ ಸೇಫ್.ಹುಣಸೂರಿನ‌ ಶಬ್ಬೀರ್ ನಗರದ ನಿವಾಸಿಗಳಿಗೆ ಮನೆಯೂ ಸೇಫಾಗಿಲ್ಲ ಯಾಕೆ ಗೊತ್ತಾ…? ಹಾವುಗಳ ಕಾಟ.ನಿನ್ನೆ ರಾತ್ರಿಯಂತೂ ಎರಡು ಹಾವುಗಳ ಓಡಾಟ...

ಅಸಮರ್ಥ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…ಹಳ್ಳಿಹಕ್ಕಿ ಕಿಡಿ…

ಕೊರೊನಾ ವೈರಸ್ ವಿಚಾರದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಮೌನ ಮುರಿದಿದ್ದಾರೆ.ಇಷ್ಟು ದಿನ ಮೌನವಹಿಸಿದ್ದ ವಿಶ್ವನಾಥ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.ಸಮರ್ಥ ಅಧಿಕಾರಿಗಳನ್ನ‌ ಮೈಸೂರಿಗೆ ವರ್ಗಾಯಿಸಿ.ಅಸಮರ್ಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ...

Recent Comments