32 C
Mysore
Wednesday, August 12, 2020
Home All News ಸಂಕಷ್ಟಕ್ಕೆ ಸಿಲುಕಿದ ಕೊರೊನಾ ಸೋಂಕಿತ…ಕ್ಷಣಮಾತ್ರದಲ್ಲಿ ಪರಿಹಾರ ಒದಗಿಸಿದ್ರು ಜಿಲ್ಲಾಧಿಕಾರಿಗಳು…ಹೃದಯವಂತ ಡಿಸಿ…

ಸಂಕಷ್ಟಕ್ಕೆ ಸಿಲುಕಿದ ಕೊರೊನಾ ಸೋಂಕಿತ…ಕ್ಷಣಮಾತ್ರದಲ್ಲಿ ಪರಿಹಾರ ಒದಗಿಸಿದ್ರು ಜಿಲ್ಲಾಧಿಕಾರಿಗಳು…ಹೃದಯವಂತ ಡಿಸಿ…

ಕೊರೊನಾ ಮಹಾಮಾರಿ ತಡೆಗಟ್ಟಲು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ತಮ್ಮೆಲ್ಲಾ ಪ್ರಯತ್ನಗಳನ್ನ ಓರೆಗ ಹಚ್ಚಿದ್ದಾರೆ.ಜಿಲ್ಲಾಧಿಕಾರಿಗಳ ಪರಿಶ್ರಮವನ್ನ ಮೈಸೂರಿನ ಜನತೆ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.ಕೊರೊನಾ ಕಪಿಮುಷ್ಠಿಯಲ್ಲಿ ಸಿಲುಕಿದ ಸೋಂಕಿತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸದಾ ಮುಂದಿರುವ ಕಾರಣ ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಮೈಸೂರಿನ ಜನಮೆಚ್ಚಿದ ಅಧಿಕಾರಿ.ಇಷ್ಟೆಲ್ಲಾ ಪ್ರಸ್ತಾವನೆ ಮಾಡೋಕ್ಕೆ ಕಾರಣವೂ ಇದೆ.ಈವತ್ತು ಜಿಲ್ಲಾಧಿಕಾರಿಗಳ ಕ್ಷಿಪ್ರ ಸ್ಪಂದನೆಗೆ ಸೋಂಕಿತ ಫ್ಯಾಮಿಲಿಯೊಂದ ನಿರಾಳವಾಗಿದೆ.ಪುಟ್ಟ ಮನೆಯಲ್ಲಿ ಸಿಲುಕಿದ ಸೋಂಕಿತನಿಗೆ ಆಸ್ಪತ್ರೆಗೆ ದಾಖಲಾಗಲು ನೆರವಿಗೆ ಬಂದ ಅಭಿರಾಮ್.ಜಿ.ಶಂಕರ್ ಹೃದಯವಂತ ಅಧಿಕಾರಿ ಎಂದು ಸಾಬೀತು ಪಡಿಸಿದ್ದಾರೆ.

ಮೇಟಗಳ್ಳಿಯ ವ್ಯಕ್ತಿಯೊಬ್ಬರಿಗೆ ಮೂರು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಧೃಢವಾಗಿದೆ.ಬಡತನದ ಕುಟುಂಬದಿಂದ ಬಂದ ವ್ಯಕ್ತಿಗೆ ಕೊರೊನಾ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ.ಪಾಸಿಟಿವ್ ಧೃಢವಾದಾಗ ಏನು ಮಾಡಬೇಕೆಂದು ಗೊತ್ತಾಗಿಲ್ಲ.ಸಿಬ್ಬಂದಿಗಳು ಪಾಸಿಟಿವ್ ಬಗ್ಗೆ ಮಾಹಿತಿ ನೀಡಲು ಬಂದಾಗ ಅನಕ್ಷರಸ್ಥರಾದ ಪತ್ನಿ ಹೋಂ ಐಸೋಲೇಷನ್ ಗೆ ಒಪ್ಪಿಕೊಂಡಿದ್ದಾರೆ.ಹೋಂ ಐಸೋಲೇಷನ್ ಆಗಬೇಕಾದ್ರೆ ಕೆಲವು ನಿಯಮಗಳನ್ನ ಪಾಲಿಸಬೇಕಿರುತ್ತೆ.ಪ್ರಮುಖವಾಗಿ ಪ್ರತ್ಯೇಕ ಬಾತ್ ರೂಂ ವ್ಯವಸ್ಥೆ ಇರಬೇಕಾಗುತ್ತೆ.ಆದರೆ ಆ ಮನೆಯಲ್ಲಿ ಇದ್ದದ್ದು ಒಂದೇ ಬಾತ್ ರೂಂ.ಇಬ್ಬರು ಮಕ್ಕಳು ಪತ್ನಿ ನಾಲ್ಕು ಜನರಿದ್ದ ಪುಟ್ಟ ಮನೆಯಲ್ಲಿ ಐಸೋಲೇಷನ್ ಸಹ ಕಷ್ಟವೇ ಆಗಿದೆ.ಕೂಡಲೇ ಆಸ್ಪತ್ರೆ ಸೇರಲು ಬಯಸಿದ ವ್ಯಕ್ತಿ ಸಂಭಂಧ ಪಟ್ಟವರನ್ನ ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.ಆದರೆ ಸೂಕ್ತ ಪ್ರತಿಕ್ರಿಯೆ ದೊರೆತಿಲ್ಲ.ನೆರೆಮನೆಯವರೊಬ್ಬರ ಮೂಲಕ ಮಾಧ್ಯಮದವರೊಬ್ಬರನ್ನ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಾಧ್ಯಮದವರು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ರವರಿಗೆ ವಾಟ್ಸಾಪ್ ಮೂಲಕ ಮೆಸೇಜ್ ಹಾಕಿ ಆಸ್ಪತ್ರೆಗೆ ದಾಖಲಿಸಲು ಮನವಿ ಮಾಡಿದ್ದಾರೆ.ಮೆಸೇಜ್ ವೀಕ್ಷಿಸಿದ ತಕ್ಷಣವೇ ತಡಮಾಡದ ಜಿಲ್ಲಾಧಿಕಾರಿಗಳು ಸೋಂಕಿತ ವ್ಯಕ್ತಿಯನ್ನ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಲು ನೆರವಾಗಿದ್ದಾರೆ.ತಮ್ಮ ಸಿಬ್ಬಂದಿಗಳಿಗೆ ಸೂಚನೆ ನೀಡಿದ ಅಭಿರಾಮ್.ಜಿ.ಶಂಕರ್ ರವರು ಸೋಂಕಿತ ವ್ಯಕ್ತಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ.ಅಭಿರಾಮ್.ಜಿ.ಶಂಕರ್ ರವರ ಈ ಕಾರ್ಯ ನಿಜವಾಗಲೂ ಮೆಚ್ಚುಗೆಗೆ ಪಾತ್ರವಲ್ಲದೆ ಇನ್ನೇನು…? ಸೋಂಕಿತ ವ್ಯಕ್ತಿ ಇದೀಗ ನಿರಾಳನಾಗಿದ್ದಾನೆ.ತನ್ನಿಂದ ಇಡೀ ಕುಟುಂಬಕ್ಕೆ ಹರಡಬಹುದೆಂಬ ಆತಂಕ ದೂರವಾಗಿದೆ.

ಈಗ ಹೇಳಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಹೃದಯವಂತರು ತಾನೇ.ಇಂತಹ ಎಷ್ಟೋ ಪ್ರಕರಣಗಳಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿರಬಹುದು.ಆದ್ರೆ ಬೆಳಕಿಗೆ ಬಂದಿದ್ದು ಇದು.ಜಿಲ್ಲಾಧಿಕಾರಿಗಳ ಹೃದಯಸ್ಪರ್ಷಿ ಸ್ಪಂದನೆಗೆ ನಮ್ಮದೊಂದು ಸಲಾಂ…

LEAVE A REPLY

Please enter your comment!
Please enter your name here

- Advertisment -
< target="_blank">

Most Popular

ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ…ಕೊಲೆ ಶಂಕೆ…

ಅಕ್ರಮ ಸಂಭಂಧ ಹಿನ್ನಲೆ ಬೇರೆಯಾಗಿದ್ದ ಪತ್ನಿಯ ಮನೆಯಲ್ಲಿ ಪತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.ಗೋವಿಂದ ನಾಯ್ಕ(೩೦) ಮೃತ...

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ…ಮಾದರಿ ಜಿಲ್ಲಾಧಿಕಾರಿ…

ಅಧಿಕಾರ ಇದ್ರೆ ಕೆಲವರು ಎಲ್ಲಾ ರೀತಿಯ ಸೌಲಭ್ಯಗಳನ್ನ ಅನುಭವಿಸಯವರೇ ಹೆಚ್ಚು.ಆದರೆ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಅಪವಾದದಿಂದ ದೂರ ಇದ್ದಾರೆ.ಕೊರೋನಾ ಮಧ್ಯೆಯೂ ಐಶಾರಾಮಿ ಸವಲತ್ತುಗಳನ್ನು...

ಮಾವುತನನ್ನೇ ಬಲಿ ಪಡೆದ ಆನೆ…ಮೈಸೂರು ಮೃಗಾಲಯದಲ್ಲಿ ಘಟನೆ…

ವಿಶ್ವಿಖ್ಯಾತ ಮೈಸೂರು ಮೃಗಾಲಯದಲ್ಲಿ ಆನೆಯೊಂದು ಮಾವುತನನ್ನೇ ತುಳಿದು ಕೊಂದ ಘಟನೆ ಇಂದು ಸಂಜೆ ನಡೆದಿದೆ.ಹರೀಶ್(೩೮) ಮೃತ ದುರ್ದೈವಿಯಾಗಿದ್ದಾರೆ.ಕೆಲವು ವರ್ಷಗಳಿಂದ ಆನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹರೀಶ್...

ನಿಧಿ ಶೋಧಕ್ಕೆ ಬಂದ ಕಿಡಿಗೇಡಿ ಯುವಕ ಮಂಟಪ ಕುಸಿದು ಸಾವು…

ನಿಧಿ ಆಸೆಗಾಗಿ ಬಂದ ಚೋರರ ತಂಡದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.ನಿಧಿ ಲಪಟಾಯಿಸುವ...

Recent Comments