ಸಾಂಸ್ಕೃತಿಕ ನಗರಿ ಮೈಸೂರಿನ ಮೇಟಗಳ್ಳಿಯಲ್ಲಿ ವೀರ ಹೋರಾಟಗಾರರ ಕುರುಹು ಪತ್ತೆಯಾಗಿದೆ.೧೫ ನೇ ಶತಮಾನದ ವೀರಗಲ್ಲುಗಳು ಪತ್ತೆಯಾಗಿದ್ದು

ವಿಜಯನಗರ ಸಾಮ್ರಾಜ್ಯದ ಆಡಳಿತ ಅವಧಿಯದ್ದೆಂದು ಹೇಳಲಾಗಿದೆ.
ಮೂರು ವೀರಗಲ್ಲುಗಳು ಪತ್ತೆಯಾಗಿದೆ.
ಗ್ರಾಮದ ಸ್ವಚ್ಛತೆಗೆ ಮುಂದಾದ ವೇಳೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ.ಮಣ್ಣಿನಲ್ಲಿ ಒಂದು ವೀರಗಲ್ಲು ಹುದುಗಿದ್ದು
ಗಿಡಗಂಟೆಗಳ ಮಧ್ಯೆ ಎರಡು ವೀರಗಲ್ಲುಗಳು ಪತ್ತೆಯಾಗಿದೆ.

ಹೋರಾಟದಲ್ಲಿ ಮಡಿದ ವೀರರನ್ನ ಸ್ಮರಿಸುವ ಸಂಕೇತವಾಗಿ ನಿರ್ಮಿಸಿರುವ ವೀರಗಲ್ಲುಗಳು ಎಂದು ಹೇಳಲಾಗಿದೆ.
ಕಪ್ಪುಶಿಲೆಯಲ್ಲಿ ನಿರ್ಮಿಸಿರುವ ಪುರಾತನ ವೀರಗಲ್ಲುಗಳಾಗಿದ್ದು
ಮಣ್ಣಿನಲ್ಲಿ ಮತ್ತಷ್ಟು ವೀರಗಲ್ಲುಗಳು ಹುದುಗಿರುವ ಸಾಧ್ಯತೆ ಇದೆ.ಪುರಾತತ್ವ ಇಲಾಖೆ ಅಧಿಕಾರಿಗಳಾದ ಸುನಿಲ್ ಕುಮಾರ್ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ವೀರಗಲ್ಲಿನಲ್ಲಿ ಮೂರು ಪಟ್ಟಿಕೆ(section) ಇದೆ.
ಕೆಳಗಿನ ಪಟ್ಟಿಕೆಯಲ್ಲಿ ವೀರರು

ಹೋರಾಡುತ್ತಿರುವ ದೃಶ್ಯ ಕೆತ್ತನೆಯಾಗಿದೆ.
ಮಧ್ಯದ ಪಟ್ಟಿಕೆಯಲ್ಲಿ ಹೋರಾಟಗಾರರು ಮಡಿದ ನಂತರ ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುವ ದೃಶ್ಯ ಕೆತ್ತನೆಯಾಗಿದೆ.
ಮೇಲಿನ ಪಟ್ಟಿಕೆಯಲ್ಲಿ ಹೋರಾಟದಲ್ಲಿ ಮಡಿದವರಿಗೆ ಸ್ವರ್ಗ ಪ್ರಾಪ್ತಿಯಾಗಿ ಸೂರ್ಯ ಚಂದ್ರರು ಇರುವ ವರೆಗೆ ಅಜರಾಮರವಾಗಿ ಇರುವ ದೃಶ್ಯ ಕೆತ್ತನೆಯಾಗಿದೆ.
ಮೂರು ದೃಶ್ಯಗಳನ್ನ ೩ ಪಟ್ಟಿಕೆಯಲ್ಲಿ ಕೆತ್ತನೆ ಮಾಡಿರುವ ಕಲಾವಿದನ ಕೈಚಳಕ ಇತಿಹಾಸವನ್ನ ನೆನಪಿಸುವಂತೆ ಮಾಡುತ್ತದೆ.
ವೀರಗಲ್ಲುಗಳನ್ನ ಸಂರಕ್ಷಿಸಲು ಪುರಾತತ್ವ ಇಲಾಖೆ ನಿರ್ಧರಿಸಿದೆ.
ಮುಂದಿನ ಪೀಳಿಗೆಗೆ ಗತಕಾಲದ ಇತಿಹಾಸ ವನ್ನ ಪರಿಚಯಿಸುವ ಉದ್ದೇಶ ಪುರಾತತ್ವ ಇಲಾಖೆಗೆ ಇದೆ.
ಆದರೆ ಗ್ರಾಮಸ್ಥರೇ ಇವುಗಳನ್ನ ಸಂರಕ್ಷಿಸಲು ನಿರ್ಧಾರ ಕೈಗೊಂಡಿದ್ದಾರೆ.

ಗ್ರಾಮಸ್ಥರ ನಿರ್ಧಾರಕ್ಕೆ ಪುರಾತತ್ವ ಇಲಾಖೆ ಮಣಿದು ಸಧ್ಯಕ್ಕೆ ತನ್ನ ವಶಕ್ಕೆ ತೆಗೆದುಕೊಳ್ಳುವ ನಿರ್ಧಾರ ಕೈ ಬಿಟ್ಟಿದೆ.
ವಿಜಯನಗರ ಸಾಮ್ರಾಜ್ಯಕ್ಕೂ ಮೇಟಗಳ್ಳಿ ಗ್ರಾಮಕ್ಕೂ ಸಂಭಂಧ ಇರುವ ಬಗ್ಗೆ ಶಾಸನಗಳಲ್ಲಿ ಶೋಧನೆಗೆ ಮುಂದಾಗಲು ಪುರಾತತ್ವ ಇಲಾಖೆ ನಿರ್ಧಾರ ಕೈಗೊಂಡಿದೆ.
ಮಣ್ಣಿನಲ್ಲಿ ಹುದುಗಿರುವ ವೀರಗಲ್ಲುಗಳಲ್ಲಿ ಶಾಸನಗಳು ಉಲ್ಲೇಖವಿರುವ ನಂಬಿಕೆ ಗ್ರಾಮಸ್ಥರಲ್ಲಿ ಇದೆ.
ವೀರಗಲ್ಲುಗಳು ದೊರತಿರುವುದರಿಂದ ಗ್ರಾಮಸ್ಥರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ ಅಲ್ಲದೆ ಇದೊಂದು
ಶುಭ ಸಂಕೇತವೆಂಬ ಭಾವನೆ ಗ್ರಾಮಸ್ಥರಲ್ಲಿ ಬಂದಿದೆ…