ಖಾತಾ ಬದಲಾವಣೆ ಮಾಡಕೊಡಲು ಲಂಚ ಸ್ವೀಕರಿಸುತ್ತಿದ್ದ ಪಿಡಿಓ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಮೈಸೂರು ತಾಲೂಕು ಸಿಂಧೂವಳ್ಳಿ ಗ್ರಾಮಪಂಚಾಯ್ತು ಪಿಡಿಓ ಮಹದೇವ ನಾಯಕ ಬಲೆಗೆ ಲಂಚಕೋರ.
4 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಖಾತಾ ಬದಲಾವಣೆಗಾಗಿ ವ್ಯಕ್ತಿಯೊಬ್ಬರ ಬಳಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ.ಇದರಿಂದ ಬೇಸತ್ತ ವ್ಯಕ್ತಿ ಎಸಿಬಿ ಗೆ ದೂರು ಕೊಟ್ಟಿದ್ದರು.
ಎಸಿಬಿ ಎಸ್ ಪಿ ರಶ್ಮಿ ಮಾರ್ಗದರ್ಶನದಲ್ಲಿ ಡಿಎಸ್ಪಿ ಪರಶುರಾಮಪ್ಪ ಕಾರ್ಯಾಚರಣೆ ನಡೆಸಿದಾಗ ಮಹದೇವನಾಯಕ ಲಾಕ್ ಆಗಿದ್ದಾನೆ.
ಆರೋಪಿ ಮಹದೇವ ನಾಯಕ ಎಸಿಬಿ ವಶದಲ್ಲಿದ್ದಾನೆ…