32 C
Mysore
Friday, January 15, 2021
Home All News ಜಿ.ಟಿ.ದೇವೇಗೌಡರಿಂದ ಕುಂದುಕೊರತೆ ಸ್ವೀಕಾರ…

ಜಿ.ಟಿ.ದೇವೇಗೌಡರಿಂದ ಕುಂದುಕೊರತೆ ಸ್ವೀಕಾರ…

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ನಗರ‌‌ ವ್ಯಾಪ್ತಿಯ ವಾರ್ಡ್ ನಂ. ಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿದರು ಮೊದಲಿಗೆ ವಾರ್ಡ್ ನಂಬರ್ 44 ರ ಬೋಗಾದಿ 2ನೇ ಹಂತದ ಪಾರ್ಕ್ ನಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿದರು ಸಾರ್ವಜನಿಕರು ಪಾರ್ಕ್ ಅಭಿವೃದ್ಧಿಪಡಿಸುವಂತೆ ಹಾಗೂ ಮುಖ್ಯರಸ್ತೆಯ ಹರ್ಷ ಬಾರ್ ಸರ್ಕಲ್ ಅನ್ನು ಅಗಲೀಕರಣ ಗೊಳಿಸುವಂತೆ ಕೋರಿದರು ಈ ಸಂಬಂಧ ಅಂದಾಜುಪಟ್ಟಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು ನಂತರ ಮುಖ್ಯರಸ್ತೆಯಲ್ಲಿರುವ ಬ್ಯಾರಿಕೇಡ್ ಅನ್ನು ಬದಲಾಯಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ನಿರ್ಮಾಣಗೊಂಡಿದ್ದು ಕೂಡಲೇ ಪೈಪ್ಲೈನ್ ಅಳವಡಿಸಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ಸಾರ್ವಜನಿಕರು ಈ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕೂಡಲೇ ಪೈಪ್ ಲೈನ್ ಕಾಮಗಾರಿ ಪ್ರಾರಂಭಿಸಲಾಗುವುದು ಶಾಸಕರು ತಿಳಿಸಿದರು

ಈ ವೇಳೆ ಸ್ಥಳೀಯರು ಹಲವು ಸಮಸ್ಯೆಗಳನ್ನು ಕುರಿತಂತೆ ತಮ್ಮ ಜೊತೆ ಅಳಲು ತೋಡಿಕೊಂಡಿದ್ದು, ಇನ್ನೂ ಎರಡು ಮೂರುದಿನದೊಳಗೆ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಯಿತು.
ನಂತರ ವಾರ್ಡ್ ನಂ. 45ರಲ್ಲಿರುವ ನಿವೇದಿತಾ ನಗರದ ಸುಬ್ಬುರಾವ್ ಪಾರ್ಕ್ ನಲ್ಲಿ ನೂತನವಾಗಿ ನಿರ್ಮಿಸಿರುವ ವಿಶ್ರಾಂತಿ ಕೇಂದ್ರವನ್ನು ಉದ್ಘಾಟಿಸಲಾಯಿತು.

ಈ ವೇಳೆ ಕ್ಷೇತ್ರದ ವಾರ್ಡ್ ನಂ45ರಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಲಾಯಿತು, ಸ್ಥಳೀಯರು ಬಸ್ ನಿಲ್ದಾಣ, ರಸ್ತೆ ಅಭಿವೃದ್ಧಿ, ಸರ್ಕಲ್‌ ಗಳ ದುರಸ್ತಿ, ಈಜು ಕೊಳ, ಒಳಚರಂಡಿ ಹಾಗೂ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆರಿಸುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಕುರಿತಂತೆ ನನ್ನ ಗಮನಕ್ಕೆ ತಂದಿದ್ದಾರೆ.

ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶೀಘ್ರವಾಗಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು, ಆದಷ್ಟು ಶೀಘ್ರವಾಗಿ ಈ ಕೆಲಸಗಳನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಲಾಯಿತು.

ಪಾಲಿಕೆ ಸದಸ್ಯರಾದ ಸವಿತ ಸುರೇಶ, ನಿರ್ಮಲ ಹರೀಶ್, ಶರತ್ ಕುಮಾರ್, ಲಕ್ಷ್ಮಿ‌ಕಿರಣ್ , ಮುಖಂಡರಾದ ಉಮಾಶಂಕರ್, ಸುರೇಶ್, ರಮೇಶ್, ಜಯರಾಂ, ಕುಮಾರ್, ಕೆ.ಜಿ.ಕೊಪ್ಪಲು ಶೇಖರ್, ಮಾಜಿ‌ ಪಾಲಿಕೆ ಸದಸ್ಯರಾದ ಜಗದೀಶ್, ರಾಮಕೃಷ್ಣ ನಗರದ ರಾಜಣ್ಣ, ಮಹೇಶ್, ಮಂಜು, ಮನು ಗೌಡ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ಯಾಮಣ್ಣ ಹಾಗೂ ಪದಾಧಿಕಾರಿಗಳು, ದಟ್ಟಗಳ್ಳಿಯ ರಮೇಶ್ ಕಲ್ಲಿಪಾಳ್ಯ, ಶಶಿ, ಜಗದೀಶ್ ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here

- Advertisment -

Most Popular

ಗ್ರಾ.ಪಂ.ಚುನಾವಣೆಯಲ್ಲಿ ಪತ್ನಿಗೆ ಸೋಲು…ಪತಿ ಸೂಸೈಡ್…

ಇತ್ತೀಚೆಗೆ ನಡೆದ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಪತ್ನಿ ಸೋತ ಹಿನ್ನಲೆ ಪತಿರಾಯ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು...

ಮಗನ ಕೊಲೆ ಮುಚ್ಚಿ ಹಾಕಲು ತಂದೆಯನ್ನೂ ಕೊಲೆ ಮಾಡಿದ ದುಷ್ಕರ್ಮಿಗಳು ಅಂದರ್…

ಮಗನ ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ತಂದೆಯನ್ನೂ ಕೊಲೆ ಮಾಡಿದ ಹಂತಕರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.ಮೈಸೂರಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಕಳ್ಳಿ ಗ್ರಾಮದಲ್ಲಿ ಘಟನೆ...

ಕಾರ್ಯಕರ್ತನ ಟೀ ಅಂಗಡಿಯಲ್ಲಿ ಲೆಮನ್ ಟೀ ಸವಿದ ಹೆಚ್ಡಿಕೆ…

ತಮ್ಮ ಕಾರ್ಯಕರ್ತನ ಟೀ ಅಂಗಡಿಯಲ್ಲಿ ಸ್ಪೆಷಲ್ ಲೆಮನ್ ಮಡಿಕೆ ಟೀ ಕುಡಿದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ. ಇಂದು ಕಾರ್ಯಕ್ರಮದ ನಿಮಿತ್ತ...

ಏಷಿಯನ್ ಪೈಂಟ್ಸ್ ವಿರುದ್ದ ರೈತರ ಪ್ರತಿಭಟನೆ…ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಸಭೆ…

ಕಳೆದ 42 ದಿನಗಳಿಂದ ಮೈಸೂರಿನ ಏಷಿಯನ್‌ ಪೇಂಟ್ಸ್‌ ಕಾರ್ಖಾನೆ ಬಳಿ ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಬೃಹತ್‌ ಮತ್ತು...

Recent Comments