32 C
Mysore
Thursday, June 4, 2020
Home All News ಒಂದೇ ವೇದಿಕೆಯಲ್ಲಿ ಮೂರು ರಾಜಕೀಯ ಬದ್ದವೈರಿಗಳನ್ನ ಕರೆತಂದ ಸಂಗೊಳ್ಳಿ ರಾಯಣ್ಣ ಪ್ರತಿಮೆ…

ಒಂದೇ ವೇದಿಕೆಯಲ್ಲಿ ಮೂರು ರಾಜಕೀಯ ಬದ್ದವೈರಿಗಳನ್ನ ಕರೆತಂದ ಸಂಗೊಳ್ಳಿ ರಾಯಣ್ಣ ಪ್ರತಿಮೆ…

ಮೂವರೂ ನಾಯಕರು ರಾಜಕೀಯದಲ್ಲಿ ಪರಮ ಶತ್ರುಗಳು.ಆದರೂ ಒಂದೇ ಸಮುದಾಯಕ್ಕೆ ಸೇರಿದವರು.ಒಬ್ಬರನ್ನ ಕಂಡರೆ ಒಬ್ಬರಿಗೆ ಆಗಲ್ಲ.ಇವರುಗಳ ನಡುವೆ ಪರಸ್ಪರ ವಾಗ್ಧಾಳಿಗಳು ಲೆಕ್ಕವಿಲ್ಲ. ಬೇರೆ ಜನಾಂಗ ಒತ್ತಟ್ಟಿಗಿರಲಿ ಅವರ ಜನಾಂಗದವರಿಗೇ ಈ ಮೂವರು ನಾಯಕರ ಕಿತ್ತಾಟ ಜೀರ್ಣಿಸಿಕೊಳ್ಳಲಾಗಿಲ್ಲ.ಇಂತಹ ಮೂರು ದಿಗ್ಗಜರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೆ ಹೇಗಿರಬೇಡ. ಅಂತಹ ಒಂದು ಸನ್ನಿವೇಶ ಈವತ್ತು ಕೂಡಿಬಂದಿದೆ. ದೇಶ ಭಕ್ತನ ಪ್ರತಿಮೆ ಅನಾವರಣಕ್ಕಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಮೂವರು ದಿಗ್ಗಜರು ಅಚ್ಚರಿ ಮೂಡಿಸಿದ್ದಾರೆ. ಹೀಗೆ ಒಟ್ಟಿಗೆ ಸೇರಿದ ಆ ಮೂರು ನಾಯಕರು ಯಾರು ಅಂತೀರಾ…?

ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಚ್. ವಿಶ್ಚನಾಥ್ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕುರುಬ ಸಮುದಾಯದ ಪ್ರಮುಖ ನಾಯಕರು ಈವತ್ತು ಒಂದು ವೇದಿಕೆಯನ್ನ ಹಂಚಿಕೊಂಡಿದ್ದಾರೆ.ಒಬ್ಬರ ಪಕ್ಕ ಒಬ್ಬರು ಕುಳಿತು ಶೇಕ್ ಹ್ಯಾಂಡ್ ಮಾಡಿದ್ದಾರೆ. ರಾಜಕೀಯವಾಗಿ ಬಹಿರಂಗವಾಗಿ ಈ ಮೂವರು ಪರಸ್ಪರ ದೂಷಿಸಿದ್ದಾರೆ. ಜನ್ಮ ಜನ್ಮಾಂತರದ ವೈರಿಗಳಂತೆ ಕಿತ್ತಾಡಿದ್ದಾರೆ. ತಲೆತಗ್ಗಿಸುವಂತಹ ಪದಗಳನ್ನ ಬಳಸಿದ್ದಾರೆ.ಇನ್ಯಾವತ್ತೂ ಇವ್ರು ಒಂದಾಗೋದೇ ಇಲ್ಲವೇನೋ ಎಂಬಂತೆ ವರ್ತಿಸಿದ್ದಾರೆ.ಆದ್ರೆ ಈವತ್ತು ತಮ್ಮೆಲ್ಲಾ ರಾಜಕೀಯ ವೈರತ್ವವನ್ನ ಬದಿಗೊತ್ತಿ ಕೆ.ಆರ್.ನಗರದ ದೊಡ್ಡ ಕೊಪ್ಪಲು ಗ್ರಾಮದಲ್ಲಿ ಸ್ವತಂತ್ರ ಹೋರಾಟದಲ್ಲಿ ಮಡಿದ ವೀರಪುತ್ರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣದ ಕಾರ್ಯಕ್ರಮದಲ್ಲಿ ಕೈ ಕೈ ಮಿಲಾಯಿಸಿದ್ದಾರೆ. ಕುರುಬ ಜನಾಂಗಕ್ಕೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೇ ಸಂದೇಶ ಹೊರಡಿಸಿದ್ದಾರೆ.ಪ್ರತಿಮೆ ಅನಾವರಣಕ್ಕೆ ವಿಶ್ವನಾಥ್ ಹಾಗೂ ಈಶ್ವರಪ್ಪ ಇಬ್ಬರೂ ನಿಗದಿತ ಸಮಯಕ್ಕೆ‌ ಬಂದರೂ ಸಿದ್ದರಾಮಯ್ಯ ಗಾಗಿ ಅರ್ಧ ಗಂಟೆ ಕಾದಿದ್ದಾರೆ. ಸಿದ್ದರಾಮಯ್ಯ ಬರುತ್ತಿದ್ದಂತೆಯೇ ಪ್ರತಿಮೆ ಬಳಿ ತೆರಳಿ ತೆರೆ ಸರಿಸುವ ಮೂಲಕ ಮೂವರು ನಾಯಕರು ಬೃಹತ್ ಪ್ರತಿಮೆಯನ್ನ‌ ಅನಾವರಣ ಗೊಳಿಸಿದರು.ರಾಯಣ್ಣ ಪ್ರತಿಮೆ ಅನಾವರಣದ ನಂತ್ರ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾರಿನಲ್ಲಿ ಈಶ್ವರಪ್ಪನವರು ಪ್ರಯಾಣಿಸಿ ಅಚ್ಚರಿ ಮೂಡಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅಕ್ಕಪಕ್ಕದಲ್ಲೇ ಕುಳಿತ ಮೂವರು ನಾಯಕರು ಪರಸ್ಪರ ಮಾತನಾಡುತ್ತಾ ಇಡೀ ಕುರುಬ ಸಮುದಾಯದವರನ್ನ ಹುರಿದುಂಬಿಸಿದ್ದಾರೆ.ಒಟ್ಟಿಗೆ ಕೈಹಿಡಿದ ಮೂವರು ನಾಯಕರು ದೀಪ ಹಚ್ಚಿ‌ಕಾರ್ಯಕ್ರಮ ಉದ್ಘಾಟಿಸಿದರು.

ಇಷ್ಟೆಲ್ಲಾ ಬೆಳವಣಿಗೆ ನಡೆದ ಮೇಲೆ ಹೊಗಳಿಕೆಗೆ ಏನು ಕಡಿಮೆ ಇರಲಿಲ್ಲ.
ವೇದಿಕೆಯಲ್ಲಿ ಮಾತನಾಡಿದ ಮಾಜಿ ಸಂಸದ ಎಚ್. ವಿಶ್ವನಾಥ್ ರವರು ಸಂಗೊಳ್ಳಿ ರಾಯಣ್ಣ ಜನ್ಮಸ್ಥಳ ಅಭಿವೃದ್ಧಿಗೆ 262 ಕೋಟಿ ರೂಪಾಯಿ ಅನುದಾನ ನೀಡಿದ್ದನ್ನ ಸ್ಮರಿಸಿ ಸಿದ್ದರಾಮಯ್ಯ ಗೆ ಫುಲ್ ಮಾರ್ಕ್ಸ್ ನೀಡಿದರು.

ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ ‌ತಮ್ಮ ಹಾಗೂ ಸಿದ್ದರಾಮಯ್ಯ ರಾಜಕೀಯ ಸಂಬಂಧವನ್ನು ತಮ್ಮದೇ ಭಾಷೆಯಲ್ಲಿ ವರ್ಣಿಸಿದರು.
ನಾನು ಸಿದ್ದರಾಮಯ್ಯ ಸಿಕ್ಕಾಪಟ್ಟೆ ಬೈದಾಡಿದ್ದೇವೆ. ಸಿದ್ದರಾಮಯ್ಯ ಹೆಚ್ಚು ಬೈದಿದ್ರೆ ನಂಗೆ ಮಾತ್ರೆ. ನಾನೇನು ಸುಮ್ನೆ ಇರಲಿಲ್ಕ,ನಾನೂ ಅಷ್ಟೇ ಸಿಕ್ಕಾಪಟ್ಟೆ ಬೈದಿದ್ದೆ. ಅಸೆಂಬ್ಲಿಯಲ್ಲೂ ಅಷ್ಟೇ ಸದನ‌ ಮುಂದೂಡುವ ಹಾಗೆ ಜಗಳ ಮಾಡಿ ವಿರಾಮದಲ್ಲಿ ಒಟ್ಟಿಗೆ ಇರುತ್ತಿದ್ದೆವು.
ನಮ್ಮಲ್ಲಿ ಪಕ್ಷ ದ್ರೋಹ ಮಾಡುವ ಪ್ರಮೇಯವೇ ಬಂದಿಲ್ಲ.
ಈವತ್ತು ನಾವು ಹೀಗೆ ಮೂವರೂ ಒಟ್ಟಿಗೆ ಸೇರಿರೋದು ಸಂಗೊಳ್ಳಿ ರಾಯಣ್ಣ ಆತ್ಮಕ್ಕೆ ಶಾಂತಿ ಸಿಗಬಹುದು.
ರಾಜಕೀಯವಾಗಿ ಏನೇ ಇದ್ರೂ ನಮ್ಮ ಪರಿಶುದ್ದ ರಾಜಕಾರಣವನ್ನ ಯಾರೂ ದಿಕ್ಕೆಡಿಸಲು ಆಗಲ್ಲ. ನಾವು ಈವತ್ತು ಎಲ್ಲರಿಗೂ ಮಾದರಿ ಆಗುವಂತೆ ನಡೆದುಕೊಂಡಿದ್ದೇವೆ ಎಂದರು.

ಈಶ್ವರಪ್ಪ ಮಾತುಗಳನ್ನೇ ಸಿದ್ರಾಮಯ್ಯ ಕೂಡ ಸಮರ್ಥಿಸಿಕೊಂಡರು. ರಾಜಕೀಯವಾಗಿ ನಾವೂ ಏನೇ ಟೀಕೆಗಳನ್ನು ಮಾಡಿದ್ರೂ ಅವು ವೈಯಕ್ತಿಕವಲ್ಲ ಅಂತಾ ಹೇಳಿದರು. ವಿಧ್ಯಾರ್ಥಿ ಜೀವನದಲ್ಲಿ ತಮ್ಮ ಹಾಗೂ ವಿಶ್ವನಾಥ್ ರ ಸಂಭಂಧವನ್ನ ಸ್ಮರಿಸಿದರು.ನಾನು ವಿಶ್ವನಾಥ್ ಒಟ್ಟಿಗೆ ಸೇರಿ ಕಾಳಿದಾಸ ವಿದ್ಯಾರ್ಥಿ ಸಂಘ ಸ್ಥಾಪನೆ ಮಾಡಿದೆವು.
‌ನಾನು ಅಧ್ಯಕ್ಷನಾದೆ ವಿಶ್ವನಾಥ್ ಕಾರ್ಯದರ್ಶಿ ಆದರು. ಆಗ ಕುರುಬ ಅಂತಾ ಹೇಳಿಕೊಳ್ಳೋಕೆ ಯಾರೂ ಇಷ್ಟಪಡುತ್ತಿರಲಿಲ್ಲ. ನಾವು ವಿದ್ಯಾರ್ಥಿಗಳಿಗೆ ಧೈರ್ಯ ಹೇಳುತ್ತಾ ಇದ್ದೆವು. ಲಾ ಓದುವಾಗ ನಾನು ಎರಡು ವರ್ಷ ಸೀನಿಯರ್, ವಿಶ್ವನಾಥ್ ಜ್ಯೂನಿಯರ್ ಎಂದು ಬಣ್ಣಿಸಿದರು.
ನನಗೂ ಕೆ.ಆರ್‌‌. ನಗರಕ್ಕೂ ಬಹಳ ವರ್ಷಗಳ ನಂಟಿದೆ.
2000 ನೇ ಇಸವಿಯಲ್ಲಿ ರಕ್ತನಾಳಕ್ಕೆ ಸ್ಟಂಟ್ ಹಾಕಿಸಿದ್ದೆ..ಮತ್ತೆ ಬ್ಲಾಕ್ ಆಗಿತ್ತು..ಈಗ ಮತ್ತೆ ಸ್ಟಂಟ್ ಹಾಕಿಸಿದ್ದೇನೆ ನಾನು ಆರೋಗ್ಯವಾಗಿದ್ದೇನೆ.
ನಾವು ಮೂವರು ಒಂದು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಸಂತಸವಾಗಿದೆ ಎಂದು‌ ಕಾರ್ಯಕ್ರಮವನ್ನ ಶ್ಲಾಘಿಸಿದ್ರು.

ರಾಯಣ್ಣ ಪ್ರತಿಮೆ ಅನಾವರಣದ ನೆಪದಲ್ಲಿ ಮೂವರು ನಾಯಕರು ಒಂದು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಕೇವಲ ಕುರುಬ ಜನಾಂಗಕ್ಕೆ ಮಾತ್ರವಲ್ಲದೆ ರಾಜ್ಯಕ್ಕೇ ವಿಶೇಷವಾದ ಸಂದೇಶ ಹೊರಡಿಸಿದೆ.ರಾಜಕೀಯದಲ್ಲಿ ಯಾರೂ ಶತ್ರುಗಳು ಅಲ್ಲ ಮಿತ್ರರೂ‌ ಅಲ್ಲ ಎಂಬ ಮಾತನ್ನ‌ ಮತ್ತೊಮ್ಮೆ ಈ ಕಾರ್ಯಕ್ರಮ ಸಾಬೀತು ಪಡಿಸಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಅತೀಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದರೆ ಕಾನೂನು ರೀತ್ಯಾ ಕ್ರಮ

ಮೈಸೂರು ಜೂನ್.3. ಮೈಸೂರು ನಗರದ ಜೆ.ಎನ್.ನರ್ಮ್-ಬಿ.ಎಸ್.ಯು.ಪಿ ಹಂತ-1 ಮತ್ತು ಹಂತ 2 ರ ಯೋಜನೆಯಡಿ ಕೆಸರೆ ಸರ್ವೆ ನಂ.484/1 ಮತ್ತು 484/2 ರಲ್ಲಿ ಒಟ್ಟು 252 ಮನೆಗಳನ್ನು ನಿರ್ಮಿಸಿದ್ದು, ಸದರಿ...

ಗಡಸು ಮರದ ಜಾತಿಯ ಗಿಡಗಳನ್ನು ನೆಡಲು ಸಹಕರಿಸಿ

ಮೈಸೂರು, ಜೂನ್.3 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಮರದ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದ್ದು, ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನ ಅವಧಿಯಲ್ಲಿ ಮಳೆ ಹಾಗೂ...

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136 ನೇ ಹುಟ್ಟು ಹಬ್ಬ

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136...

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ.

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ...

Recent Comments