ನಂಜನಗೂಡು ನಂಜುಂಡೇಶ್ವರ ದೇವಾಲಯದ ತುಲಾಭಾರ ಸೇವೆ ಹಣ ದುರುಪಯೋಗ ಪ್ರಕರಣ ಕುರಿತಾಗಿ ತನಿಖೆ ಆರಂಭವಾಗಿದೆ.
ಮುಜರಾಯಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ ರವರು ನೀಡಿದ ಸೂಚನೆ ಹಿನ್ನಲೆ ತನಿಖೆ ಆರಂಭವಾಗಿದೆ.ಇದು Tv10 ವರದಿ ಫಲಶೃತಿಯಾಗಿದೆ.
ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮಾರ್ಗದರ್ಶನದಲ್ಲಿ ತನಿಖೆ ನಡೆಯಲಿದೆ.
ನಂಜುಂಡೇಶ್ವರನ ದೇವಾಲಯಕ್ಕೆ ಉಪವಿಭಾಗಾಧಿಕಾರಿ ವೆಂಕಟರಾಜು ನೇತೃತ್ವದ ನಾಲ್ಕು ಜನರ ತಂಡ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ನಂಜುಂಡೇಶ್ವರನ ದೇವಾಲಯದಲ್ಲಿ ತುಲಾಭಾರ ಸೇವೆ ಶಾಖೆಯಲ್ಲಿ ನಡೆದಿದ್ದ 17 ಲಕ್ಷಕ್ಕೂ ಅಧಿಕ ಹಣ ದುರ್ಬಳಕೆ ವಿಚಾರವಾಗಿ ತನಿಖೆ ಆರಂಭವಾಗಿದೆ.
ದೇವಾಲಯದಲ್ಲಿ ಕಾರ್ಯನಿರ್ವಹಿಸುವ ತಲಾಭಾರ ಶಾಖೆ ಸಿಬ್ಬಂದಿಗಳಿಂದ ಹಣ ದುರ್ಬಳಕೆ ಯಾಗಿತ್ತು.
ಎನ್.ಪಿ.ಶ್ರೀಕಂಠಸ್ವಾಮಿ,ಗಂಗಾಧರ್ ಹಾಗೂ ಅಭಿಷೇಕ್ ವಿರುದ್ದ ಹಣ ದುರುಪಯೋಗ ಆರೋಪ ಇತ್ತು.
ಹಣ ದುರ್ಬಳಕೆ ಸುದ್ದಿಯನ್ನ Tv10 ಪ್ರಕಟಿಸಿ ಅಧಿಕಾರಿಗಳ ಕಣ್ಣು ತೆರೆಸಿತ್ತು.
ನಂಜನಗೂಡು ಪಟ್ಟಣ ಠಾಣೆಯಲ್ಲಿ ಹಣ ದುರುಪಯೋಗ ಪಡಿಸಿಕೊಂಡ ಸಿಬ್ಬಂದಿಗಳ ವಿರುದ್ದ ಎಫ್ ಐ.ಆರ್ ದಾಖಲಾಗಿತ್ತು.
ಸುದ್ದಿ ಪ್ರಸಾರವಾದ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು.
ನಿನ್ನೆ ಸಂಜೆ ದೇವಸ್ಥಾನದ ತುಲಾಭಾರ ಶಾಖೆಗೆ ಭೇಟಿ ನೀಡಿದ ತನಿಖಾ ತಂಡ ಕಡತಗಳನ್ನ ಪರಿಶೀಲನೆ ನಡೆಸಿದೆ…