32 C
Mysore
Wednesday, August 4, 2021
Home All News ಕೊರೊನಾ ನಿಯಮಗಳಿಗೆ ನೂತನ ಜಿಲ್ಲಾಧಿಕಾರಿ ಬಗಾದಿ ಗೌತಮ್ ರೆಸ್ಪೆಕ್ಟ್…ನಂಜನಗೂಡಿನಲ್ಲಿ ಅವರು ಮಾಡಿದ್ದೇನು ಗೊತ್ತಾ…?

ಕೊರೊನಾ ನಿಯಮಗಳಿಗೆ ನೂತನ ಜಿಲ್ಲಾಧಿಕಾರಿ ಬಗಾದಿ ಗೌತಮ್ ರೆಸ್ಪೆಕ್ಟ್…ನಂಜನಗೂಡಿನಲ್ಲಿ ಅವರು ಮಾಡಿದ್ದೇನು ಗೊತ್ತಾ…?

 

ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ.ಭಾರತದ ಪ್ರತಿಯೊಬ್ಬ ಪ್ರಜೆಗೂ ಇದು ಅನ್ವಯಿಸಲಿದೆ.ಸಾರ್ವಜನಕರ ಅನುಕೂಲಕ್ಕಾಗಿ ತಂದ ನಿಯಮಗಳನ್ನ ಉಲ್ಲಂಘಿಸುವುದೇ ಕೆಲವು ರಾಜಕಾರಿಣಿಗಳ ವರ್ತನೆಯಾಗಿದೆ.ಆದರೆ ಇಂತಹ ಅಪವಾದಗಳಿಗೆ ತಾವು ದೂರ ಎಂಬುದನ್ನ ಮೈಸೂರಿನ ನೂತನ ಜಿಲ್ಲಾಧಿಕಾರಿ ಸಾಬೀತು ಪಡಿಸಿದ್ದಾರೆ. ನಿಯಮಗಳನ್ನ ಉಲ್ಲಂಘಿಸಿ ಅಹಂ ತೋರುವ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.ಅಷ್ಟಕ್ಕೂ ಅವರು ಮಾಡಿದ್ದೇನು ಗೊತ್ತ…?
ಇಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ರವರು ದಕ್ಷಿಣಕಾಶಿ ನಂಜನಗೂಡಿಗೆ ಭೇಟಿ ಕೊಟ್ಟಿದ್ದರು.ಯಾವುದೇ ರಾಜಕಾರಿಣಿಗಳಾಗಲಿ ಹಿರಿಯ ಅಧಿಕಾರಿಗಳಾಗಲಿ ನಂಜನಗೂಡು ದೇವಾಲಯಕ್ಕೆ ಭೇಟಿ ನೀಡುವುದು ಸಹಜ.ಹಾಗೇ ಗೌತಮ್ ಬಗಾದಿ ರವರೂ ಸಹ ನಂಜನಗೂಡು ದೇವಸ್ಥಾನಕ್ಕೆ ಇಂದು ಭೇಟಿ ಕೊಟ್ಟಿದ್ದಾರೆ.ಆದರೆ ಕೊರೊನಾ ನಿಯಮಗಳಿಗೆ ಸಂಪೂರ್ಣವಾಗಿ ಗೌರವ ಸೂಚಿಸಿದ್ದಾರೆ.ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳದೆ ದೇವಾಲಯದ ಮುಖ್ಯಧ್ವಾರದ ಮುಂಭಾಗ ನಿಂತು ಶ್ರೀಕಂಠೇಶ್ವರನಿಗೆ ಕೈಮುಗಿದು ಕೊರೊನಾ ನಿಯಮಗಳಿಗೆ ರೆಸ್ಪೆಕ್ಟ್ ಕೊಟ್ಟಿದ್ದಾರೆ.ಅಲ್ಲದೆ
ದಾಸೋಹ ಭವನದಲ್ಲಿ ಊಟ ಮಾಡಿ ಕೋವಿಡ್ ಸೋಂಕಿತರಿಗೆ ವಿತರಿಸುವ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿ ತಮ್ಮ ಬದ್ಧತೆಯನ್ನ ಪ್ರದರ್ಶಿಸಿದ್ದಾರೆ.
ಇತ್ತೀಚೆಗಷ್ಟೆ ನಂಜನಗೂಡಿಗೆ ಭೇಟಿ ನೀಡಿದ್ದ ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿ ರಾಜಾರೋಷವಾಗಿ ನಂಜುಂಡನ ದರುಶನ ಪಡೆದು ವಿವಾದಕ್ಕೆ ಸಿಲುಕಿದ್ದರು.ಕೊರೊನಾ ನಿಯಮಗಳಿಗೆ ಕ್ಯಾರೆ ಎನ್ನದೆ ಶ್ರೀಕಂಠೇಶ್ವರನ ದರುಶನ ಪಡೆದು ಚರ್ಚೆಗೆ ಗ್ರಾಸವಾಗಿದ್ದರು.
ಆದರೆ ಕೊರೊನಾ ನಿಯಮಗಳಿಗೆ ಮನ್ನಣೆ ನೀಡಿದ ನೂತನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಮಾದರಿ ಅಂದ್ರೆ ತಪ್ಪೇ ಇಲ್ಲ ಅಲ್ವಾ…?
ಇದೇ ವೇಳೆ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿದ ಬಗಾದಿ ಗೌತಮ್ ರವರು ಅಲ್ಲಿನ ಪರಿಸ್ಥಿತಿಯನ್ನ ಖುದ್ದು ಪರಿಶೀಲನೆ ನಡೆಸಿದರು.ನಂತರ ಮಿನಿವಿಧಾನಸೌಧದಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು.ನೂತನ ಜಿಲ್ಲಾಧಿಕಾರಿಗೆ ಸ್ಥಳೀಯ ಶಾಸಕ ಹರ್ಷವರ್ಧನ್ ಸಾಥ್ ನೀಡಿದರು…

LEAVE A REPLY

Please enter your comment!
Please enter your name here

- Advertisment -

Most Popular

ಮನೆಗಳ್ಳನ ಬಂಧನ…48,500/- ನಗದು ವಶ…

ಸರಗೂರು ಪೊಲೀಸರು ಕಾರ್ಯಾಚರಣೆ ನಡೆಸಿಮೈಸೂರು:ಮನೆಯ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಸಿದ್ದಾರೆ.ಸರಗೂರು ತಾಲೂಕಿನ ಕುಂದೂರು ಗ್ರಾಮದ ನಿವಾಸಿ ಮಾದೇಗೌಡ ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ 48,500...

ವಿ.ವಿ.ಪುರಂ ಪೊಲೀಸರ ಕಾರ್ಯಾಚರಣೆ ಬೈಕ್ ಕಳ್ಳರ ಬಂಧನ…9 ಬೈಕ್ ವಶ…

ವಿವಿ ಪುರಂ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಬೈಕ್ ಕಳ್ಳರ ಬಂಧನವಾಗಿದೆ.ಬಂಧಿತರಿಂದ 5.32 ಲಕ್ಷ ಮೌಲ್ಯದ 9 ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಎರಡು ಪ್ರತ್ಯೇಕ...

ಸಿ.ಸಿ.ಬಿ.ಪೊಲೀಸರ ಕಾರ್ಯಾಚರಣೆ…4 ಕುಖ್ಯಾತ ಸರಗಳ್ಳರ ಬಂಧನ…

ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ನಾಲ್ವರು ಕುಖ್ಯಾತ ಸರಗಳ್ಳರ ಬಂಧನವಾಗಿದೆ.ಆರೋಪಿಗಳಿಂದ 5,80,000 ರೂ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರವಾಹನಗಳ ವಶಪಡಿಸಿಕೊಳ್ಳಲಾಗಿದೆ.ಶಾಂತಿನಗರದ ಅಯಾಜ್...

ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ನಗದು ಚಿನ್ನ ದರೋಡೆ…

ಮನೆಗೆ ನುಗ್ಗಿ ಮಾಲೀಕರಿಗೆ ಹಲ್ಲೆ ನಡೆಸಿ ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.ಸುಮನ್ ಫಂಕ್ಷನ್ ಹಾಲ್ ನ...

Recent Comments