ಮೈಸೂರು,ಮೇ29,Tv10 ಕನ್ನಡ
ಪರೀಕ್ಷೆ ಸರಿಯಾಗಿ ಬರೆದಿಲ್ಲವೆಂದು ಮನನೊಂದ ವಿಧ್ಯಾರ್ಥಿನಿ ಲಿಂಗಾಂಬುದಿ ಕೆರೆಯಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.ಚೇತನ(19) ಮೃತ ದುರ್ದೈವಿ.ಮೈಸೂರಿನ ಶ್ರೀರಾಂಪುರದ ನಿವಾಸಿಯಾದ ಚೇತನ ಖಾಸಗಿ ಕಾಲೇಜೊಂದರಲ್ಲಿ ಬಿ.ಸಿ.ಎ.ದ್ವಿತೀಯ ವರ್ಷದ ವಿಧ್ಯಾರ್ಥಿನಿಯಾಗಿದ್ದು ಕೆಲವು ದಿನಗಳ ಹಿಂದಷ್ಟೆ ಎಕ್ಸಾಂ ಬರೆದಿದ್ದಳು. ಪರೀಕ್ಷೆ ಸರಿಯಾಗಿ ಬರೆದಿಲ್ಲ ಕಡಿಮೆ ಅಂಕ ಬರುತ್ತದೆ ಎಂದು ಬೇಸತ್ತಿದ್ದ ಚೇತನ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾಳೆ.ನಿನ್ನೆ ಬೆಳಿಗ್ಗೆ ವಾಕಿಂಗ್ ಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಬೈಕ್ ನಲ್ಲಿ ತೆರಳಿದ್ದಾಳೆ.ಜೊತೆಗೆ ಸ್ನೇಹಿತರಿಗೂ ಫೋನ್ ಮಾಡಿ ಪರೀಕ್ಷೆ ವಿಚಾರ ತಿಳಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ.ಸ್ನೇಹಿತರು ಕೂಡಲೇ ಮನೆಯವರಿಗೆ ತಿಳಿಸಿದ್ದಾರೆ.ಆತಂಕಗೊಂಡ ಮನೆಯವರು ಚೇತನಾಗೆ ಹುಡುಕಾಟ ನಡೆಸಿದ್ದಾರೆ.ನಿನ್ನೆ ಚೇತನ ಪತ್ತೆಯಾಗಲಿಲ್ಲ.ಲಿಂಗಾಂಬುದಿ ಪಾಳ್ಯದ ಗೇಟ್ ಬಳಿ ಚೇತನ ತಂದಿದ್ದ ಬೈಕ್ ಪತ್ತೆಯಾಗಿದೆ.ಇಂದು ಬೆಳಿಗ್ಗೆ ಚೇತನಾ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ವಾಯುವಿಹಾರಿಗಳ ಕಂಡು ಪೊಲೀಸರಿಗೆ ತಿಳಿಸಿದ್ದಾರೆ.ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…