32 C
Mysore
Thursday, June 4, 2020
Home All News ಕೊರೊನಾ ಪಾಸಿಟಿವ್‌ ೧೨ ಕ್ಕೆ ಏರಿಕೆ…ಆತಂಕವೂ ಹೆಚ್ಚಾಗುತ್ತಿದೆ…

ಕೊರೊನಾ ಪಾಸಿಟಿವ್‌ ೧೨ ಕ್ಕೆ ಏರಿಕೆ…ಆತಂಕವೂ ಹೆಚ್ಚಾಗುತ್ತಿದೆ…

ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪಟ್ಟಿ ಬೆಳೆಯುತ್ತಿದೆ.ಒಂದು ವಾರದ ಅಂತರದಲ್ಲಿ ೯ ಮಂದಿ ಸೋಂಕಿತರು ಪಟ್ಟಿಗೆ ಸೇರಿದ್ದಾರೆ. ಜೊತೆಗೆ ಕ್ವಾರೆಂಟೈನ್ ಗೆ ಒಳಗಾದವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ.ಸೋಂಕಿತರ ಸಂಖ್ಯೆ ೧೨ ಕ್ಕೆ ಮುಟ್ಟಿದೆ.ಸಾಂಸ್ಕೃತಿಕ ನಗರಿ ಬೆಚ್ಚಿಬಿದ್ದರೂ ಕೆಲವರಂತೂ ಡೋಂಟ್ ಕೇರ್ ಅಂತ ಓಡಾಡ್ತಾನೇ ಇದ್ದಾರೆ.ಜಿಲ್ಲಾಡಳಿತ ಸಾಕಷ್ಟು ಎಚ್ಚರಿಕೆ ಕೊಟ್ಟರೂ ಜನಕ್ಕೆ ಗಂಭೀರತೆ ಅರ್ಥವಾಗುತ್ತಿಲ್ಲವೆಂದೇ ಕಾಣುತ್ತಿದೆ.

ಮಹಾಮಾರಿ ಕೊರೊನಾ ವೈರಸ್ ಹರಡುವಿಕೆಯನ್ನ ತಡೆಗಟ್ಟಲು ಮೈಸೂರು ಜಿಲ್ಲಾಡಳಿತ ಒಂದೆಡೆ ಹರಸಾಹಸ ನಡೆಸುತ್ತಿದೆ.ಮತ್ತೊಂದೆಡೆ ಪಾಸಿಟಿವ್ ಪ್ರಕರಣಗಳ ಪಟ್ಟಿಯೂ ಏರುತ್ತಾ ಬಂದಿದೆ.ಸೋಂಕಿತರ ಸಂಖ್ಯೆ ೧೨ ಕ್ಕೆ‌ ಮುಟ್ಟಿದೆ.ಕೊರೊನಾ ವೈರಸ್ ಭೀತಿಯನ್ನ ತಡೆಗಟ್ಟಲು ಸಾಕಷ್ಟು ಕಸರತ್ತು ನಡೆಸುತ್ತಿದ್ದರೂ ಪಾಸಿಟಿವ್ ಪ್ರಕರಣ ಹೆಚ್ಚಾಗಿರೋದು ಆತಂಕ‌ ತಂದಿದೆ.ನಂಜನಗೂಡು ಜ್ಯುಬಿಲಿಯಂಟ್ ಫ್ಯಾಕ್ಟರಿ ನೌಕರನಿಗೆ ಪಾಸಿಟಿವ್ ಧೃಢವಾದ ಕೆಲವೇ ದಿನಗಳಲ್ಲಿ ಆತನೊಂದಿಗೆ ಸಂಪರ್ಕದಲ್ಲಿದ್ದ ೯ ಮಂದಿಗೂ ಹರಡಿರುವುದು ಖಚಿತವಾಗಿದೆ.ಈ ಬೆಳವಣಿಗೆ ನಂಜನಗೂಡಿನ ಜನತೆಗಂತೂ ಶಾಕ್ ಕೊಟ್ಟಿದೆ.ಈಗಾಗಲೇ ಕಾರ್ಖಾನೆಯ ೧೪೪೩ ಮಂದಿ ಹೋಮ್ ಕ್ವಾರೆಂಟೈನ್ ನಲ್ಲಿದ್ದಾರೆ.೮೨೧ ಮಂದಿ ಹೋಂ ಕ್ವಾರೆಂಟೈನ್ ಪೂರ್ತಿಗೊಳಿಸಿದ್ದಾರೆ.ಆದರೂ ಕೊರೊನಾ ವೈರಸ್ ಹರಡುತ್ತಿರುವ ಬಗ್ಗೆ ಆತಂಕ‌ ತಂದಿದೆ.ಮುಂಜಾಗ್ರತಾ ಕ್ರಮದಲ್ಲಿ ಜಿಲ್ಲಾಡಳಿತ ಮತ್ತಷ್ಟು ಚುರುಕಾಗಲು ಸಿದ್ದತೆ ಮಾಡಿಕೊಳ್ಳುತ್ತಿದೆ.ನಂಜನಗೂಡು ಜ್ಯುಬಿಲಿಯೆಂಟ್ ಕಾರ್ಖಾನೆಯ ಉದ್ಯೋಗಿಗೆ ಪಾಸಿಟಿವ್ ಧೃಢವಾದಾಗ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.ಇದೀಗ ಪ್ರಕರಣದ ಸಂಖ್ಯೆ ಹೆಚ್ಚುತ್ತಿರುವುದು ಅಪಾಯದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.
ಪಾಸಿಟಿವ್ ಪ್ರಕರಣದ ಸಂಖ್ಯೆ ಹೆಚ್ಚಾದರೂ ಜನ ಮಾತ್ರ ಹೆದರುತ್ತಿಲ್ಲ.ಮನೆ ಹತ್ತಿರ ತರಕಾರಿ ಸಿಕ್ಕಿದರೂ ಮಾರ್ಕೆಟ್ ಗೆ ಬರೋದನ್ನ ನಿಲ್ಲಿಸುತ್ತಿಲ್ಲ.ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯತನ ತೋರುತ್ತಿದ್ದಾರೆ.ಕ್ವಾರೆಂಟೈನ್ ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ ಅಂತ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚರಿಕೆ ಕೊಟ್ಟಿದ್ದಾರೆ.ಆದರೆ ಅನಗತ್ಯವಾಗಿ ತಸ್ತೆಗಳಲ್ಲಿ ಓಡಾಡುವರ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ ಎಂಬ‌ ಆರೋಪಗಳೂ ಕೇಳಿ ಬರುತ್ತಿದೆ.ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದೆ.ಬಹುಶಃ ರಾಜ್ಯದಲ್ಲಿ ಮೈಸೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ.ಸರ್ಕಾರದವಿಧಿಸಿರುವ ನಿಯಮಗಳನ್ನ ಪಾಲಿಸದಿದ್ದಲ್ಲಿ ಮುಂದೆ ಭಾರಿ‌ ಅಪಾಯ ಕಾದಿದೆ.ಇನ್ನಾದರೂ ಮೈಸೂರು ಜನತೆ ಎಚ್ಚೆತ್ತುಕೊಳ್ಳಬೇಕಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಅತೀಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದರೆ ಕಾನೂನು ರೀತ್ಯಾ ಕ್ರಮ

ಮೈಸೂರು ಜೂನ್.3. ಮೈಸೂರು ನಗರದ ಜೆ.ಎನ್.ನರ್ಮ್-ಬಿ.ಎಸ್.ಯು.ಪಿ ಹಂತ-1 ಮತ್ತು ಹಂತ 2 ರ ಯೋಜನೆಯಡಿ ಕೆಸರೆ ಸರ್ವೆ ನಂ.484/1 ಮತ್ತು 484/2 ರಲ್ಲಿ ಒಟ್ಟು 252 ಮನೆಗಳನ್ನು ನಿರ್ಮಿಸಿದ್ದು, ಸದರಿ...

ಗಡಸು ಮರದ ಜಾತಿಯ ಗಿಡಗಳನ್ನು ನೆಡಲು ಸಹಕರಿಸಿ

ಮೈಸೂರು, ಜೂನ್.3 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಮರದ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದ್ದು, ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನ ಅವಧಿಯಲ್ಲಿ ಮಳೆ ಹಾಗೂ...

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136 ನೇ ಹುಟ್ಟು ಹಬ್ಬ

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136...

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ.

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ...

Recent Comments