*ಮೈಸೂರು,ಏ9,Tv10 ಕನ್ನಡ*
ಭಗವದ್ಗೀತೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ವಿಶ್ವದ ಶ್ರೇಷ್ಟ ಗ್ರಂಥ,ಸಂಸ್ಕಾರ ಹಾಗೂ ಸಮಾನತೆಯ ಪ್ರತೀಕ ಎಂದು
ಡಾ. ಶೆಲ್ವಪಿಳ್ಳೆ ಅಯ್ಯಂಗಾರ್ ತಿಳಿಸಿದ್ದಾರೆ.ಬಿಜೆಪಿ ಹಿಂದುಳಿದ ಯುವ ಮೋರ್ಚಾ ವತಿಯಿಂದ ಆಯೋಜಿಸಲಾದ ಭಗವದ್ಗೀತೆ ಪಠಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಚೀನ ವಸ್ತು ಮುಖ್ಯಸ್ಥರಾದ ಡಾಕ್ಟರ್ ಶೆಲ್ವಪಿಳ್ಳೆ ಅಯ್ಯಂಗಾರ್ ಭಗವದ್ಗೀತೆಯ ಪಠಣ ಸ್ಪರ್ಧೆಯಿಂದ ಮಕ್ಕಳು ಗಳಿಗೆ
ಸಂಸ್ಕಾರ ,ಸಮಾನತೆ ,ಅರಿವು ಆಗುತ್ತದೆ ಭಗವದ್ಗೀತೆಯ ಕೇವಲ ಹಿಂದೂ ಧರ್ಮದ ಗ್ರಂಥವಲ್ಲ, ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಬರೆದಿರುವ ಸಂವಿಧಾನದ ಪುಸ್ತಕವು ಹಾಗೂ ಭಗವದ್ಗೀತೆ ಪುಸ್ತಕ ವಿಶ್ವದ ಅತಿ ಶ್ರೇಷ್ಠ ಗ್ರಂಥಗಳಾಗುತ್ತದೆ, ಪ್ರಸ್ತುತ ಕಾಲದ ಘಟ್ಟದಲ್ಲಿ ತುಂಬಾ ಚರ್ಚೆಗೆ ಗ್ರಾಸವಾಗಿದೆ, ಈ ಗ್ರಂಥವನ್ನು ಕೇವಲ ಬೆರಳೆಣಿಕೆ ಇರುವ ವಿಚಾರವಾದಿಗಳು ಈ ಗ್ರಂಥವನ್ನು ವಿರೋಧ ಮಾಡುತ್ತಾರೆ ಆದರೆ ಈ ಗ್ರಂಥದ ವಿಚಾರಗಳನ್ನು ಅವರ ಕುಟುಂಬಸ್ಥರು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಅಳವಡಿಸಿಕೊಂಡಿರುವುದು ಸಂತೋಷದ ವಿಚಾರ ಭಾರತೀಯರಾದ ನಾವು ನಮ್ಮ ಮನೆಗಳಲ್ಲಿ ಕಡ್ಡಾಯವಾಗಿ ಭಗವದ್ಗೀತೆಯ ಗ್ರಂಥವನ್ನು ಇಟ್ಟುಕೊಳ್ಳುವುದರ ಮುಖೇನ ಸಂಸ್ಕಾರ ಸಮಾನತೆಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಭಗವದ್ಗೀತೆಯ ಪಠಣ ಸ್ಪರ್ಧೆ ಯ ವಿಜೇತರು ಗಳಿಗೆ ನಗರ ಕಾರ್ಯಾಲಯದಲ್ಲಿ ಬಹುಮಾನ ವಿತರಣೆಯನ್ನು ಮಾಡಲಾಯಿತು.
ಸುಮಾರು ಮೈಸೂರು ನಗರದಲ್ಲಿ 57 ವಿಧ್ಯಾರ್ಥಿಗಳು, ಹಾಗೂ ಗ್ರಾಮಾಂತರ ದಲ್ಲಿ 26 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೊರನಾಡು ಕನ್ನಡಿಗರಿಗರು ಕೂಡ ಬಾಗವಹಿಸಿದ್ದು ವಿಶೇಷ ವಾಗಿತ್ತು.*ವಿಜೇತರ ಪಟ್ಟಿ*ಭಗವದ್ಗೀತೆ ಪಠಣ ದಲ್ಲಿ
ಪ್ರಥಮ ಬಹುಮಾನ ಅನಘ ಎಸ್ ಭಟ್,
ದ್ವೀತಿಯ ಪ್ರಜ್ನ ಎಸ್ ಕೌಂಡಿನ್ಯ,
ತೃತೀಯ ಮಾನಸಿ ಆಚಾರ್,
ಹಾಗೂ ನಾಗಶ್ರೀ ಭಟ್.ಭಗವದ್ಗೀತೆ ಯ ಸಾರಾಂಶ ದಲ್ಲಿ ಪ್ರಥಮ ಬಹುಮಾನ ಸುಪ್ರೀಯಾ ಕೆಲ್ಕರ್,
ದ್ವೀತಿಯ ಹಿತಶ್ರೀ ಎಂ,
ತೃತೀಯ ಹಿಸ್ಪ್ರೀತ್ ಸಿಂಗ್.ಹೊರನಾಡು ಕನ್ನಡಿಗ
ವಿಶೇಷ ಬಹುಮಾನ ಹರಿ ಸರ್ವೋತ್ತಮ.ಅಭಿನಯದ ದಲ್ಲಿ ವಿಶೇಷ ಬಹುಮಾನ ಚಿನ್ಮಯ್ ಆರ್ ರವರು ಬಹುಮಾನ ಪಡೆದರು. ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಮೆಚ್ಚುಗೆಯ ಪ್ರಶಸ್ತಿ ಪತ್ರ ಹಾಗೂ ಅಂಬೇಡ್ಕರ್ ರವರ ಜೀವನ ಚರಿತ್ರೆ ಯ ಪುಸ್ತಕಗಳನ್ನು ನೀಡಲಾಯಿತು.ಡಾ.ಬಾಬ ಸಾಹೇಬ್ ಬಿ.ಆರ್. ಅಂಬೇಡ್ಕರ್, ಭಾರತ ಮಾತೆ, ಹಾಗೂ ಪಂಡಿತ್ ದೀನ ದಯಾಳ್, ಶ್ಯಾಂ ಪ್ರಸಾದ್ ಮುಖರ್ಜಿ ಯವರ ಭಾವ ಚಿತ್ರ ಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರದ ಅಧ್ಯಕ್ಷರಾದ ಟಿಎಸ್ ಶ್ರೀವತ್ಸ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಜೋಗಿ ಮಂಜು, ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್,ಸೋಮ ಸುಂದರ್, ಉಪಾಧ್ಯಕ್ಷರಾದ ಹರ್ಷ, ಗೋಪಾಲ್, ಮಣಿರತ್ನಂ, ಮುಂತಾದವರು ಹಾಜರಿದ್ದರು…