ಲಂಚ ಸ್ವೀಕರಿಸುವ ವೇಳೆ ಬನ್ನೂರು ಪಟ್ಟಣದ ಪುರಸಭಾ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪುಷ್ಪಲತಾ ಎಂಬುವರೇ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದವರು.ಕೊಳವೆಬಾವಿ ಗುತ್ತಿಗೆದಾರನಿಂದ ೨೫ ಸಾವಿರ ಲಂಚ ಪಡೆಯುತ್ತಿದ್ದಾಗ ಪುಷ್ಪಲತಾ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಕೊಳವೆಬಾವಿ ಕೊರೆಯುವ ವಿಚಾರದಲ್ಲಿ ಗುತ್ತಿಗೆ ದಾರ ಆನಂದ ಭೋವಿ ಎಂಬುವರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಆನಂದ್ ಭೋವಿ ಎಸಿಬಿ ಗೆ ದೂರು ನೀಡಿದ ಹಿನ್ನಲೆ
ಎಸಿಬಿ ಡಿವೈಎಸ್ಪಿ ಪರಶುರಾಮಪ್ಪ ಮತ್ತು ತಂಡ ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
ಲಂಚದ ಹಣದ ಸಮೇತ ಸಿಕ್ಕಿಬಿದ್ದ ಮುಖ್ಯಾಧಿಕಾರಿ ಪುಷ್ಪಲತರನ್ನ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.ಈ ಹಿಂದೆ ನಂಜನಗೂಡು ನಗರಸಭಾ ಕಾರ್ಯಾಲಯದಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ ಆಗಿದ್ದ ಪುಷ್ಪಲತಾ
ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಬನ್ನೂರು ಪಟ್ಟಣಕ್ಕೆ ಮುಖ್ಯಾಧಿಕಾರಿಯಾಗಿ ಬಡ್ತಿ ಪಡೆದಿದ್ದರು.
ಪುರಸಭೆ ಮುಖ್ಯಾಧಿಕಾರಿಯಾಗಿ ಕೇವಲ ವರ್ಷ ಕಳೆಯುವುದರೊಳಗೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ…