ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಭೂ ಮಾಫಿಯಾ ಕುರಿತಂತೆ ಸಮಗ್ರ ತನಿಖೆ ನೀಡಬೇಕೆಂದು ಒತ್ತಾಯಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.ಸುಮಾರು 25 ವರ್ಷ ದಿಂದ ಮೈಸೂರಿನಲ್ಲಿ ನಡೆದಿರುವ ಭೂ ಹಗರಣ, ಸಮಗ್ರವಾಗಿ ತನಿಖೆ ಆಗಬೇಕು.
ಅರಣ್ಯಭೂಮಿ, ಕೆರೆ ಒತ್ತುವರಿಯಾಗಿರುವ ಬಗ್ಗೆ ಸಮಗ್ರ ತನಿಖೆ ಆಗಬೇಕು.ಈ ವಿಚಾರದಲ್ಕಿ ಯಡಿಯೂರಪ್ಪ ಅವರ ಮೇಲೆ ನಮಗೆ ನಂಬಿಕೆ ಇಲ್ಲ.ಯಡಿಯೂರಪ್ಪ ಧೈರ್ಯ ಮಾಡಿ ತನಿಖೆ ಮಾಡುತ್ತಾರೆ ಎಂಬುವ ನಂಬಿಕೆ ಇಲ್ಲ.ನಮಗೆ
ಸತ್ಯವಂತರ ರಾಜ್ಯ ಬರಬೇಕು.ನನಗೆ ಜವಾಬ್ದಾರಿ ಕೊಟ್ಟರೆ 6 ತಿಂಗಳು ಸರ್ಕಾರ ನಡೆಸಿ ತೋರಿಸುವೆ.
ಈ ರಾಜ್ಯ ಬಸವಣ್ಣರ ರಾಜ್ಯ ಆಗಬೇಕು.ಈ ಸರ್ಕಾರ ರಚನೆ ಆಗಿರುವುದೇ ಭ್ರಷ್ಟಾಚಾರದಿಂದ ಎಂದು ವಾಗ್ಧಾಳಿ ನಡೆಸಿದರು.
ರೋಹಿಣಿ ಸಿಂಧೂರಿ ಒಬ್ಬ ದಕ್ಷ ಅಧಿಕಾರಿ, ತನಿಖೆ ಆಗುವ ಮೊದಲ ಸರ್ಕಾರ ಓಡಿಸಿದೆ.ಈಗಾಗಲೇ
ಲಕ್ಷಲಕ್ಷ, ಕೋಟಿ ನುಂಗಿದ್ದಾರೆ.
ಎಲ್ಲಾ ಬಹುತೇಕ ರಾಜಕರಿಣಿಗಳಿಂದಲೇ ನಡೆಯುತ್ತಿದೆ.ಭೂಹಗರಣ ತನಿಖೆ ಮಾಡಲು
ರೋಹಿಣಿ ಸಿಂಧೂರಿ ಅವರನ್ನೇ ನೇಮಿಸಬೇಕು.
ತಪ್ಪುಗಳು ಕಂಡರೆ ಅಧಿಕಾರದಿಂದ ಇಳಿಸಿಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ಈ ಕೂಡಲೇ ರಾಜೀನಾಮೆ ನೀಡಬೇಕು.ಭೂ ಹಗರಣ ಪ್ರಕರಣದಲ್ಲಿ ಮುಡಾ ಅಧ್ಯಕ್ಷ ರಾಜೀವ್ ಹೆಸರು ಪ್ರಸ್ತಾಪವಾಗಿದೆ.
ಮುಡಾ ಅಧ್ಯಕ್ಷರನ್ನಾಗಿಸುವುದು ರಿಯಲ್ ಎಸ್ಟೇಟ್ ಮಾಡುವುದಕ್ಕೆ ಅಲ್ಲ.
ಈ ಕೂಡಲೇ ರಾಜೀನಾಮೆ ನೀಡಬೇಕು.ಮುಡಾ ಅಧ್ಯಕ್ಷರಾಗಿ ಮುಂದುವರಿಯಲು ರಾಜೀವ್ ಅರ್ಹರಲ್ಲ ಎಂದು ಒತ್ತಾಯಿಸಿದರು.
ನಾನು ಮುಖ್ಯಮಂತ್ರಿ ಆದರೆ ಭೂ,ಖನಿಜ ಕಳ್ಳರನ್ನು ಜೈಲಿಗೆ ಕಳುಹಿಸುತ್ತೇನೆ.ನನಗೆ 5 ವರ್ಷ ಆಡಳಿತ ಬೇಕಾಗಿಲ್ಲ, 6 ತಿಂಗಳು ಅವಕಾಶ ನೀಡಿದ್ರೆ ಸಾಕು.ನಾನು ಸಿಎಂ ಆದರೆ ಬಸವಣ್ಣ ತತ್ವ ಆದರ್ಶ ಪಾಲಿಸುವ ಪ್ರಮಾಣಿಕರನ್ನ ಸಂಪುಟಕ್ಕೆ ತೆಗೆದುಕೊಳ್ಳುತ್ತೇನೆ.
ಮೊದಲು ಮಾಡುವ ಕೆಲಸ ಅಂದರೆ ರಾಜ್ಯದಲ್ಲಿ ಆಗಿರುವ ಭೂ ಒತ್ತುವರಿ,ಖನಿಜ ಕಳ್ಳರನ್ನ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನ ತೀವ್ರವಾಗಿ ತನಿಖೆಗೆ ಒಪ್ಪಿಸುತ್ತೇನೆ.
ನನಗೆ ಕೇವಲ 6 ತಿಂಗಳು ಅವಕಾಶ ಸಿಕ್ಕರೆ ಸಾಕು ಅಷ್ಟೇ ಎಂದು ತಮ್ಮ ಕಳಕಳಿಯನ್ನ ವ್ಯಕ್ತಪಡಿಸಿದ್ದಾರೆ…